ಹೊಳಲ್ಕೆರೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಹೊಳಲ್ಕೆರೆ ತಾಲ್ಲೂಕು ಶಾಖೆಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಪಶು ಸಂಗೋಪನ ಇಲಾಖೆಯ ತಿಪ್ಪೇಶಪ್ಪ. ಖಜಾಂಚಿಯಾಗಿ ಶಿಕ್ಷಣ ಇಲಾಖೆಯ ಗಿರೀಶ್, ಅವಿರೋಧವಾಗಿ ಆಯ್ಕೆಯಾಗಿದ್ದು.
ರಾಜ್ಯ ಪರಿಷತ್ ಸದಸ್ಯರಾಗಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯದ ಸಿದ್ದರಾಮಪ್ಪನವರು ಶನಿವಾರ ನಡೆದ ಚುನಾವಣೆಯಲ್ಲಿ 30 ಮತಗಳನ್ನು ಪಡೆಯುವುದರ ಮೂಲಕ ಗೆಲುವು ಸಾಧಿಸಿದ್ದಾರೆಂದು, ಚುನಾವಣಾಧಿಕಾರಿಗಳಾದ ಮೌನೇಶ್ವರಪ್ಪ, ಸಹಾಯಕ ಚುನಾವಣಾಧಿಕಾರಿಗಳಾದ ರುದ್ರಪ್ಪ. ಪ್ರಕಟಣೆ ಮೂಲಕ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಹಿಂದಿನ ಅಧ್ಯಕ್ಷರಾದ ಲೋಕೇಶ್, ರಾಜ್ಯ ಪರಿಷತ್ ಸದಸ್ಯರಾದ ಎನ್.ಶಿವಮೂರ್ತಿ ಖಜಾಂಚಿಯಾದ ಆರ್,ಅಣ್ಣಪ್ಪ, ಕಾರ್ಯಧ್ಯಕ್ಷರಾದ ಎ. ಜಯಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ನಾಗರಾಜಯ್ಯ, ಶಿಕ್ಷಕರ ಸಂಘದ ನಿರ್ದೇಶಕರುಗಳು, ನೌಕರರು, ಶಿಕ್ಷಕರು ಹಾಗೂ ನೂತನವಾಗಿ ಆಯ್ಕೆಯಾದ ಸರ್ವ ನಿರ್ದೇಶಕರುಗಳು ಹಾಜರಿದ್ದು. ನೂತನ ಅಧ್ಯಕ್ಷರಾದ ತಿಪ್ಪೇಶಪ್ಪ, ಖಜಾಂಚಿ ಬಿ. ಗಿರೀಶ್, ರಾಜ್ಯ ಪರಿಷತ್ ಸದಸ್ಯರಾದ ಹೆಚ್. ಎನ್. ಸಿದ್ದರಾಮಪ್ಪ ಅವರಿಗೆ ಹೊಳಲ್ಕೆರೆ ಪಟ್ಟಣದಲ್ಲಿ ಇರುವ ಸರ್ಕಾರಿ ನೌಕರರ ಭವನದಲ್ಲಿ ಪುಪ್ಪ ಮಾಲೆಯನ್ನು ಹಾಕಿ ಶುಭಾಶಯ ತಿಳಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕಿನ ಸಮಸ್ತ ನೌಕರ ಬಾಂಧವರಿಗೆ ಸರ್ಕಾರಿ ನೌಕರ ಸಂಘಕ್ಕೆ ಆಯ್ಕೆಯಾದ ಅಧ್ಯಕ್ಷರು. ಖಜಾಂಚಿಯವರು, ರಾಜ್ಯಪರಿಷತ್ ಸದಸ್ಯರು ಮಾಧ್ಯಮದವರೊಂದಿಗೆ ಮಾತನಾಡಿ ಕೃತಜ್ಞತೆ ಸಲ್ಲಿಸಿದರು. ಆರಕ್ಷಕ ಇಲಾಖೆಯ ಸಿಬಂಧಿಗಳು ಇದ್ದರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030