ಗಾಂಧಿನಗರ ಅಂಗನವಾಡಿಯಲ್ಲಿ ಮಕ್ಕಳ ದಿನಾಚರಣೆ ಆಚರಣೆ
ಚಿತ್ರದುರ್ಗ: ನಗರದ ಗಾಂಧಿನಗರದಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ ಹಾಗು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಐಯುಡಿಪಿ ನಿಸರ್ಗ ಯೋಗ ಬಂಧುಗಳು ಸರಳವಾಗಿ ಆಚರಿಸಿದರು.
ಈ ಕಾರ್ಯಕ್ರಮವನ್ನು ಮಕ್ಕಳಿಗೆ ಪೆನ್ಸಿಲ್ ಹಾಗು ಬಿಸ್ಕೇಟ್ ವಿತರಿಸುವ ಮೂಲಕ ಯೋಗ ಕೇಂದ್ರದ ಅಧ್ಯಕ್ಷರಾದ ರಾಮಪ್ಪ ಉದ್ಗಾಟಿಸಿದರು.ಕಾರ್ಯಕ್ರಮದ ಉದ್ಘಾಟನೆ ಬಳಿಕ ಮಾತನಾಡಿದ ಅವರು, ಮಕ್ಕಳ ದಿನವನ್ನು ಕೊಳಗೇರಿಯ ಅಂಗನವಾಡಿ ಕೇಂದ್ರದಲ್ಲಿ ಆಚರಿಸುತ್ತಿರುವುದು ಅರ್ಥಪೂರ್ಣ ಎನಿಸಿದೆ.
ಮುಗ್ದ ಮಕ್ಕಳ ಮನಸು ಖುಷಿಯಾಗಿದ್ದರೆ ಆ ಮನೆಯ ಪರಿಸರ ಸುಂಧರವಾಗಿರುತ್ತದೆ. ಆ ಮನೆಯಲ್ಲಿ ಸಂಭ್ರಮದ ವಾತಾವರಣ ಇರುತ್ತದೆ ಅಂತೆಯೇ ಅಂಗನವಾಡಿಯಲ್ಲಿನ ಪುಟಾಣಿಗಳೊಂದಿಗೆ ನಾವೆಲ್ಲರು ದಿನಾಚರಣೆಯಲ್ಲಿ ಭಾಗಿಯಾಗಿದ್ದು ನಮಗೆಲ್ಲಾ ಸಂಭ್ರಮ ತಂದಿದೆ.ಹೀಗಾಗಿ ಇಂತಹ ಕಾರ್ಯಕ್ರಮ ನಿರಂತರವಾಗಿ ನಡೆಯಲಿ.
ನಗರದ ವಿವಿಧ ಕೊಳಗೇರಿ ಸೇರಿದಂತೆ ವಿವಿದೆಡೆಗಳಲ್ಲಿ ಮಕ್ಕಳಿಗಾಗಿಯೇ ಕಾರ್ಯಕ್ರಮವನ್ನು ಆಯೋಜಿಸುವುದರಿಂದ ಮಕ್ಕಳಲ್ಲಿ ಸ್ನೇಹ,ಪ್ರೀತಿ ಹಾಗು ಬಾಂದವ್ಯದೊಂದಿಗೆ ಕನ್ನಡಾಭಿಮಾನದ ಜಾಗೃತಿ ಮೂಡಲಿದೆ ಎಂದರು.
ಇದೇ ವೇಳೆ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಸಿಹಿ ವಿತರಿಸಿ ಮಾತನಾಡಿದ ನಿಸರ್ಗ ಯೋಗಕೇಂದ್ರದ ಪ್ರಧಾನ ಕಾರ್ಯದರ್ಶಿ ಎಸ್.ಸಿದ್ದರಾಜು ಅವರು,ಮಕ್ಕಳ ದಿನವನ್ನು ಮಾಜಿ ಪ್ರಧಾನಿ ಜವಹರ್ ಲಾಲ್ ಅವರ ಸವಿನೆನಪಿನ ದಿನವನ್ನಾಗಿ ಆಚರಿಸಲಾಗುತ್ತಿದೆ.ನೆಹರು ಅವರಿಗೆ ಮಕ್ಕಳೆಂದರೆ ಬಲು ಪ್ರೀತಿ.ಹೀಗಾಗಿ ಅವರ ಜನ್ಮದಿನದಂದು ಮಕ್ಕಳ ದಿನ ಆಚರಿಸುತ್ತೇವೆ.
ಜೊತೆಗೆ ಇಂದು ನಮ್ಮ ಯೋಗ ಕೇಂದ್ರದಿಂದ ಕನ್ನಡ ರಾಜ್ಯೋತ್ಸವ ಸಹ ಆಚರಿಸಿದ್ದು,ನಾವೆಲ್ಲರು ಕೇವಲ ನವೆಂಬರ್ ತಿಂಗಳ ಕನ್ನಡಿಗರಾಗದೇ ನಿರಂತರವಾಗಿ ಕನ್ನಡಭಿಮಾನ ತೋರೋಣ.ಶಿಕ್ಷಣ,ಸಾಹಿತ್ಯ,ಕ್ರೀಡೆ ಹಾಗು ವಿವಿಧ ಉನ್ನತ ಸ್ಥಾನಗಳಲ್ಲಿ ಸಾಧಿಸುವ ಕನ್ನಡಿಗರಿಗೆ ಪ್ರೋತ್ಸಾಹಿಸುವ ಗುಣ ಬೆಳೆಸಿಕೊಳ್ಳೋಣಎಂದರು.
ಇನ್ನೂ ನಮ್ಮ ರಾಜ್ಯದ ಬಹುತೇಕ ಬ್ಯಾಂಕ್ ಗಳಲ್ಲಿ ಹೊರರಾಜ್ಯದ ಉದ್ಯೋಗಿಗಳ ಹಾವಳಿ ಮಿತಿಮೀರಿದೆ.ಇದರಿಂದಾಗಿ ಬ್ಯಾಂಕ್ ನಲ್ಲಿ ಕನ್ನಡ ತೆರೆಮರೆಗೆ ಸರಿಯುತ್ತಿದೆ ಎಂಬ ಆತಂಕ ಕನ್ನಡಿಗರಲ್ಲಿದೆ.ಇದನ್ನು ಸರಿಪಡಿಸಲು ಕನ್ನಡಿಗರು ಬ್ಯಾಂಕ್ ಉದ್ಯೋಗ ಪಡೆಯಲುಶ್ರಮ ವಹಿಸಬೇಕು.ಜೊತೆಗೆ ಬ್ಯಾಂಕ್ ಗಳಲ್ಲಿ ಕೂಡ ಆಯಾ ರಾಜ್ಯದ ಪ್ರತಿಭಾವಂತರಿಗೆ ಕೆಲ ಹುದ್ದೆ ಗಳನ್ನು ಮೀಸಲಿಡಬೇಕು ಎಂದು ಒತ್ತಾಯಿಸಿದರು.
ಬಳಿಕ ಐಯುಡಿಪಿಬಡಾವಣೆ,ಸಾಧಿಕ್ ನಗರ ಸೇರಿದಂತೆ ನಾಲ್ಕು ಅಂಗನವಾಡಿ ಕೇಂದ್ರಗಳ ಪುಟಾಣಿಗಳಿಗೆ ಯೋಗ ಕೇಂದ್ರದಿಂದ ಪೆನ್ಸಿಲ್,ಚಾಕಲೇಟು ಹಾಗು ಬಿಸ್ಕೇಟನ್ನು ವಿತರಿಸಿದರು.ಈ ವೇಳೆ ಕಾರ್ಯಕ್ರಮದಲ್ಲಿ
ಯೋಗಕೇಂದ್ರದ ಗಾಯಕಿ ಶಬರಿಪ್ರಾರ್ಥಿಸಿದರು. ಅಂಗನವಾಡಿ ಶಿಕ್ಷಕಿ ಮಂಜುಳ ಗಾಂಧಿನಗರ ಅವರು ಅಥಿತಿಗಳನ್ನು ಸ್ವಾಗತಿಸಿದರು.ಈ ವೇಳೆ ಕಾರ್ಯಕ್ರಮದಲ್ಲಿ ಖಜಾಂಚಿ ಜಯ್ಯಣ್ಣ,ಯೋಗ ಮುಖ್ಯಶಿಕ್ಷಕಿ ವಾಸವಿ,ಇಂಜಿನಿಯರ್ ದಿವ್ಯ,ಸಮಾಜಸೇವಕಿ ರಂಗಮ್ಮ,ಯೋಗಪಟು ಸುಧಾ,ಅಂಗನವಾಡಿ ಕಾರ್ಯಕರ್ತೆಚಂದ್ರಿಕ,ಸಹಾಯಕಿರಾದ ರಾಜಮ್ಮ,ಪ್ರೇಮ,ಸಿದ್ದಮ್ಮ ಮತ್ತು ಮಕ್ಕಳ ಪೋಷಕರು ಇದ್ದರು…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030