ಹೊಳಲ್ಕೆರೆ. ಪಟ್ಟಣದ ವಾಲ್ಮೀಕಿ ಭವನದಲ್ಲಿ ಮಂಗಳವಾರ ಭೂಮಿ ಮತ್ತು ವಸತಿ ಹಕ್ಕು ಹೋರಾಟ ಸಮಿತಿ ಹೊಳಲ್ಕೆರೆ ತಾಲೂಕು ಶಾಖೆಯ ವತಿಯಿಂದ ಕುಂದು ಕೊರತೆ ಅರ್ಜಿ ಸ್ವೀಕಾರ ಸಭೆ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಸಮಿತಿಯ ಜಿಲ್ಲಾಧ್ಯಕ್ಷರಾದ ಸತ್ಯಪ್ಪ ಮಲ್ಲಾಪುರ ಅವರು ವಹಿಸಿದ್ದರು. ಸಭೆಯಲ್ಲಿ ರಾಜ್ಯ ಸಮಿತಿಯ ಸಂಚಾಲಕರಾದ ಕುಮಾರ್ ಸಮತಳ ಅವರು ಮಾತನಾಡಿ ಸಮಿತಿಯು ಹಲವು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದು, ಜಟಿಲ ಸಮಸ್ಯೆಗಳನ್ನು ಸರ್ಕಾರದ ಜೊತೆ ಚರ್ಚಿಸಿ ಪರಿಹಾರಗಳನ್ನ ಕಂಡುಕೊಳ್ಳುತ್ತಿದೆ. ಹಲವು ಕಾನೂನು ತಿದ್ದುಪಡಿ ಮಾಡಿಸಿ ಭಗರ್ ಹುಕ್ಕುಂ ಫಲಾನುಭವಿಗಳಿಗೆ ಸಂವಿಧಾನದ ಆಶಯದಂತೆ ಕನಿಷ್ಟ 2 ಎಕರೆ ಜಮೀನು ನೀಡುವುದು ಸರ್ಕಾರದ ಕರ್ತವ್ಯವಾಗಿರುವುದರ ಬಗ್ಗೆ ಉಲ್ಲೇಖಿಸಿದರು.
ಅದರಂತೆ ಜಾರಿಗಾಗಿ ಹೋರಾಟ ಸಮಿತಿ ಶ್ರಮಿಸುತ್ತಿದ್ದು, ಒಗ್ಗಾಟಾಗಿ ಹೋರಾಟದ ಮೂಲಕ ಯಶಸ್ಸು ಉಣಬೇಕೆಂದು ಕರೆ ನೀಡಿದರು.
ನಾಯಕ ಸಮಾಜದ ತಾಲೂಕು ಅಧ್ಯಕ್ಷರಾದ ಸೂರೇಗೌಡ್ರು ಮಾತನಾಡಿ ಅಂಬೇಡ್ಕರ್ ರವರು ಶಿಕ್ಷಣ, ಸಂಘಟನೆ, ಹೋರಾಟದ ಹಾದಿಯನ್ನು ತಿಳಿಸಿದ್ದು, ಅದರಂತೆ ಸಂಘಟಿತರಾಗುವಂತೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಸಮಿತಿಯ ಮುಖಂಡರಾದ ಹನುಮಂತಪ್ಪ ಗೋನೂರು, ಬಚ್ಚ ಬೋರನಹಟ್ಟಿ ವೆಂಕಟೇಶ್, ತೋರಣಘಟ್ಟ ಪುರುಷೋತ್ತಮ, ಚಿಕ್ಕಂದವಾಡಿ ಪಾಪಣ್ಣ, ಹಿರೇಕಂದವಾಡಿ ತಿಪ್ಪೇಸ್ವಾಮಿ,
ಘಟ್ಟಿಹೊಸಹಳ್ಳಿಯ ಕಸ್ತೂರಪ್ಪ, ಹೊಳಲ್ಕೆರೆ ಲಂಬಾಣಿಹಟ್ಟಿಯ ಎಲ್. ರಾಮಾನಾಯ್ಕ, ತಾಳ್ಯ ಕೃಷ್ಣಮೂರ್ತಿ, ಸೇರಿದಂತೆ ಅರ್ಜಿದಾರರು, ತಾಲೂಕಿನ ಅನೇಕ ರೈತರು ಮತ್ತಿತರು ಭಾಗವಹಿಸಿದ್ದರು.
ಸಭೆಗೆ ಹೆಚ್. ರಾಮಚಂದ್ರಪ್ಪ ನೆಹರು ಕಾಲೋನಿ ಇವರು ಸ್ವಾಗತಿಸಿದರು.
ಸಭೆಯಲ್ಲಿ ಕೆಳಕಂಡ ಪದಾಧಿಕಾರಿಗಳ ತಾಲ್ಲೂಕು ಸಮಿತಿಯನ್ನ ರಚಿಸಲಾಗಿದ್ದು, ಅದ್ಯಕ್ಷರಾಗಿ ರಾಮಚಂದ್ರಪ್ಪ. ಗ್ರಾಂ ಪಂ. ಮಾಜಿ ಸದಸ್ಯರು
ಉಪಾಧ್ಯಕ್ಷರಾಗಿ ವಿಕ್ಕಂದವಾಡಿ ಪಾಪಣ್ಣ, ಕಸ್ತೂರಪ್ಪ ಘಟ್ಟಿಹೊಸಳ್ಳಿ, ತಾಳ್ಯ ಕೃಷ್ಣಮೂರ್ತಿ, ಅರಸನಘಟ್ಟ ಜ್ಯೋತಿ ತಿಮ್ಮಪ್ಪ, ಈಚಗಟ್ಟ ಕರಿಯಪ್ಪ, ದುಮ್ಮಿ ಚಿತ್ತಪ್ಪ, ಗುಡ್ಡದ ಸಾಂತೇನಹಳ್ಳಿ ಗ್ರಾ ಪಂಚಾಯತಿ ಸದಸ್ಯರಾದ ಶಿವಣ್ಣ ಸೇರಿದಂತೆ ಇನ್ನು ಮುಂತಾದವರು ಸಮಿತಿಯಲ್ಲಿ ಇದ್ದಾರೆ…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030