ಹೊಳಲ್ಕೆರೆ. ಮಂಡ್ಯದಲ್ಲಿ ಡಿಸೆಂಬರ್ 20 ರಿಂದ 22 ವರೆಗೆ ನಡೆಯಲಿರುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ರಾಜ್ಯದ ಕನ್ನಡ ಜ್ಯೋತಿ ಹೊತ್ತ ಕನ್ನಡ ರಥಯಾತ್ರೆ ಮಂಗಳವಾರ ಹೊಳಲ್ಕೆರೆ ತಾಲೂಕಿಗೆ ಆಗಮಿಸಿತು. ದುಮ್ಮಿ ಗ್ರಾಮದ ಹತ್ತಿರ ತಾಲೂಕು ಆಢಳಿತ ಕನ್ನಡ ಸಂಸ್ಕೃತಿ ಇಲಾಖೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಪಧಾದಿಕಾರಿಗಳು ಭುವನೇಶ್ವರಿ ತಾಯಿಗೆ ಪುಷ್ಪ ನಮನ ಸಲ್ಲಿಸಿ ಅನೇಕ ಕಲಾತಂಡಗಳು ವಾದ್ಯಗಳನ್ನು ಭಾರಿಸುತ್ತಾ ರಥವನ್ನು ಬರಮಾಡಿಕೊಂಡರು. ದುಮ್ಮಿ ಗ್ರಾಮ, ಅರೆಹಳ್ಳಿ, ಮೂಲಕ ಹೊಳಲ್ಕೆರೆ ಪಟ್ಟಣ ಪ್ರವೇಶಿಸಿದ ಮೆರವಣಿಗೆಯಲ್ಲಿ ವಿವಿಧ ಶಾಲೆಗಳ ಮಕ್ಕಳು ಹೆಜ್ಜೆ ಹಾಕಿದರು. ಪಟ್ಟಣದ ಎಂ ಎಂ ಶಾಲೆ ವಾಗ್ದೇವಿ ಶಾಲೆ, ಸೇರಿದಂತೆ ಅನೇಕ ಶಾಲೆಯ ಮಕ್ಕಳು ಡೊಳ್ಳು ಇನ್ನು ಇತರೆ ವಾದ್ಯಗಳನ್ನು ಭಾರಿಸುತ್ತಾ ಮೆರವಣಿಗೆಗೆ ವಿಶೇಷ ಮೆರಗು ನೀಡಿದರು. ಮೆರವಣಿಗೆಯ ಉದ್ದಕ್ಕೂ ತಾಲೂಕಿನ ಕನ್ನಡ ಪರ ಸಂಘಟನೆಯ ಕಾರ್ಯಕರ್ತರು ಜಯ ಘೋಷ ವಾದ್ಯಗಳೊಂದಿಗೆ ಮೆರಗು ನೀಡಿದರು. ಹೊಳಲ್ಕೆರೆ ಪಟ್ಟಣದಿಂದ ಮುಂದೆ ಸಾಗಿ ಶಿವಗಂಗ, ಚಿತ್ರಹಳ್ಳಿಯಲ್ಲಿಯೂ ಕನ್ನಡ ಜ್ಯೋತಿ ಹೊತ್ತ ರಥದ ಮೆರವಣಿಗೆ ಅದ್ದೂರಿಯಾಗಿ ನಡೆಯಿತು. ಕನ್ನಡ ಸಾಹಿತ್ಯ ಪರೀಷತ್ ಜಿಲ್ಲಾಧ್ಯಕ್ಷ ಕೆ. ಎಂ. ಶಿವಸ್ವಾಮಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಶಿವಮೂರ್ತಿ, ತಹಶಿಲ್ದಾರ್ ಬಿ ಬಿ ಫಾತೀಮಾ, ಪುರಸಭೆ ಮೂಖ್ಯಾಧಿಕಾರಿಗಳಾದ ರೇಣುಕಾ ದೇಸಾಯಿ, ಇ ಓ ವಿಶ್ವನಾಥ್, ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳಾದ ಪ್ರಧೀಪ್, ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಾದ ಬಿ. ಚನ್ನಬಸಪ್ಪ, ಚಿತ್ರಹಳ್ಳಿ ಗ್ರಾ. ಪಂ. ಅಭಿವೃದ್ಧಿ ಅಧಿಕಾರಿಗಳಾದ ಸೌಭಾಗ್ಯ, ಅರೇಹಳ್ಳಿ ಗ್ರಾ. ಪಂ. ಪಿ ಡಿ ಓ ಕೃಷ್ಣಮೂರ್ತಿ, ದುಮ್ಮಿ ಗ್ರಾ. ಪಂ ಪಿ ಡಿ ಓ ರಾಘವೇಂದ್ರ, ಪತ್ರಕರ್ತರು ಆದ ಚಿತ್ತಪ್ಪ, ವೇಧಮೂರ್ತಿ, ಸುರೇಶ್ ಆವಿನಹಟ್ಟಿ, ಮದು, ನಾಗರಾಜ್, ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾದ ಹನುಮಂತಪ್ಪ, ಸೇರಿದಂತೆ ತಾಲೂಕು ವಿವಿಧ ಕನ್ನಡ ಪರ ಹೋರಟ ಸಂಘಟನೆಗಳ ಕಾರ್ಯಕರ್ಯರು, ಜನಪ್ರತಿನಿಧಿಗಳು, ಶಾಲಾ ಶಿಕ್ಷಕರುಗಳು, ಶಾಲಾ ವಿದ್ಯಾರ್ಥಿಗಳು, ಆರಕ್ಷಕ ಇಲಾಖೆಯವರು ಸೇರಿದಂತೆ ತಾಲೂಕಿನ ಅನೇಕ ಸಾರ್ವಜನಿಕರು ಮೆರವಣಿಗೆಯಲ್ಲಿ ಇದ್ದರು…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030