ಹೊಳಲ್ಕೆರೆ. ಪುರಾತನ ಈಶ್ವರ -ಜೋಡಿ ಬಸವ ದೇವಸ್ಥಾನ ಉದ್ಘಾಟನೆ ಹಾಗೂ ಜನಜಾಗೃತಿ ಧರ್ಮ ಸಮಾರಂಭವನ್ನು ಬಾಳೆಹೊನ್ನೂರು ಮಠದ ಶ್ರೀ ಮದ್ರಂಭಾಪುರಿ ಜಗದ್ಗುರುಗಳ ದಿವ್ಯ ಸಾನಿಧ್ಯದಲ್ಲಿ ಹೊಳಲ್ಕೆರೆ ತಾಲೂಕಿನ ಮದ್ದೇರು ಗ್ರಾಮದಲ್ಲಿ ನವೆಂಬರ್ ತಿಂಗಳಿನ ದಿನಾಂಕ 02-11-2024 ತಾರಿಕಿನಂದು ದೇವಸ್ಥಾನ ಲೋಕಾರ್ಪಣೆಗೊಳ್ಳಲಿದೆ. ಸುಮಾರು ಮೂರು ದಿನಗಳ ವರೆಗೆ ಹೋಮ ಹವನ ಪೂಜೆ ಪ್ರಸಾದ ಮೆರವಣಿಗೆ ವಿವಿಧ ಕಾರ್ಯಕ್ರಮಗಳು ಜರುಗಲಿವೆ. ತಾಲೂಕಿನ ಗ್ರಾಮದ ಈಚಘಟ್ಟ ಶ್ರೀ ವೀರಭದ್ರ ಸ್ವಾಮಿ, ಎಮ್ಮಿಗನೂರು ಶ್ರೀ ಬಸವೇಶ್ವರ ಸ್ವಾಮಿ , ಹುಲಿಕೆರೆ ಗ್ರಾಮದ ಶ್ರೀ ಸೋಮೇಶ್ವರ ಸ್ವಾಮಿ, ತಣಿಗೆ ಕಲ್ಲು ಗ್ರಾಮದ ಶ್ರೀ ವೀರಭದ್ರಸ್ವಾಮಿ, ನಾಕಿಕೆರೆ ಗ್ರಾಮದ ಶ್ರೀ ಕಲ್ಲೇಶ್ವರಸ್ವಾಮಿ. ದೇವರುಗಳು ಮದ್ದೇರು ಗ್ರಾಮದ ಈಶ್ವರ ಜೋಡಿ ಬಸವ ದೇವಸ್ಥಾನದ ಕಾರ್ಯಕ್ರಮಕ್ಕೆ ಬರಲಿವೆ.
ಈ ಒಂದು ದೇವಸ್ಥಾನದ ಉದ್ಘಾಟನೆಗೆ ವಿವಿಧ ಮಠಾಧೀಶರು ಸೇರಿದಂತೆ ನಾಡಿನ ಅನೇಕ ಜಿಲ್ಲೆಗಳಿಂದ ಸಾವಿರಾರು ಭಕ್ತಾದಿಗಳು ಆಗಮಿಸಲಿದ್ದು. ಭಕ್ತಾದಿಗಳಿಗೆ ಅನ್ನಸಂಪರ್ಪಣೆ ವ್ಯವಸ್ಥೆಯನ್ನು ಏರ್ಪಡಿಸಲಾಗಿದ್ದು ಎಲ್ಲ ಭಕ್ತಾದಿಗಳು ಈ ಕಾರ್ಯಕ್ರಮಕ್ಕೆ ಬರಬೇಕೆಂದು ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ಎಂ. ಎಂ. ರಾಜಪ್ಪ ಹೊಳಲ್ಕೆರೆ ಪಟ್ಟದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ಮಾಡಿ ಆಹ್ವಾನಿಸಿ ತಿಳಿಸಿದರು, ಉಪಾಧ್ಯಕ್ಷರಾದ ದ್ಯಾಮಪ್ಪ, ಕಾರ್ಯದರ್ಶಿಗಳಾದ ಜಗದೀಶ್, ಪರಮೇಶ್ವರಪ್ಪ, ರಾಜಪ್ಪ, ಟಿ. ಎನ್. ರಾಜಪ್ಪ. ದೇವಸ್ಥಾನದ ಸಮಿತಿ ಸದಸ್ಯರು ಪತ್ರಿಕಾ ಸುದ್ದಿಗೋಷ್ಠಿ ನಡೆಸಿ ತಿಳಿಸಿದರು..
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030