ದಿನಾಂಕ 25.10.2024ರಂದು ನಡೆದ ಚಿತ್ರದುರ್ಗ ಜಿಲ್ಲಾ ಮಟ್ಟದ ವಿಶೇಷ ಚೇತನ ಮಕ್ಕಳ ಕ್ರೀಡಾಕೂಟದಲ್ಲಿ ಹೊಳಲ್ಕೆರೆ
ಶ್ರೀ ಮಂಜುನಾಥ ಸ್ವಾಮಿ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿಯಾದ
ರಾಹುಲ್ ಹೆಚ್. ವಿ ಇವರು ಗುಂಡು ಎಸೆತದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ, 50ಮೀ ಓಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಮತ್ತು ಉದ್ದ ಜಿಗಿತದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಸತತ ಮೂರನೇ ಬಾರಿಗೆ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಹಾಗೂ 9ನೇ ತರಗತಿಯ ನಾಜೀಮ ಬಾನು ಎಂಬ ವಿದ್ಯಾರ್ಥಿನಿಯು ಜಾವೆಲಿನ್ ಎಸೆತದ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದಿರುತ್ತಾರೆ, ಇವರುಗಳಿಗೆ ಗೌರವ ಕಾರ್ಯದರ್ಶಿಗಳಾದ ಶ್ರೀಮತಿ ರತ್ನಮ್ಮಕಂಚೀರಾಯಪ್ಪ, ಹಾಗೂ ಆಡಳಿತ ಮಂಡಳಿಯವರು
ಶ್ರೀ ಕಂಚೀರಾಯಸ್ವಾಮಿ ವಿದ್ಯಾಸಂಸ್ಥೆ(ರಿ) ಹಾಗೂ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ತಿಪ್ಪೇಸ್ವಾಮಿ.ಎಸ್ ಇವರುಗಳು ಹಾಗೂ ಶಾಲೆಯ ಶಿಕ್ಷಕವೃಂದದವರುಗಳು ಕ್ರೀಡಾಪಟುಗಳಿಗೆ ಅಭಿನಂದಿಸಿದ್ದಾರೆ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030