ಕಾಟಪ್ಪನಹಟ್ಟಿ ಗ್ರಾಮಕ್ಕೆ ಸೌಲಭ್ಯ ಕಲ್ಪಿಸಿ…!!!

ಕಾಟಪ್ಪನಹಟ್ಟಿ ಗ್ರಾಮಕ್ಕೆ ಸೌಲಭ್ಯ ಕಲ್ಪಿಸಿ

ತಾಲೂಕಿನ ಯರಬಳ್ಳಿ ಗ್ರಾ.ಪಂ ವ್ಯಾಪ್ತಿಯ ಕಾಟಪ್ಪನಹಟ್ಟಿ ಸೌಲಭ್ಯ ಕಲ್ಪಿಸಿಕೊಡುವಂತೆ ಒತ್ತಾಯಿಸಿ ಗ್ರಾಮಸ್ಥರು ಸೋಮವಾರ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ತಹಸೀಲ್ದಾರ್ಗ ಮನವಿ

ಕಾಟಪ್ಪನಹಟ್ಟಿ ಅತ್ಯಂತ ಹಿಂದುಳಿದ ಕುಗ್ರಾಮ. ಇಲ್ಲಿ ಬಹುತೇಕ ಕಾಡುಗೊಲ್ಲ ಸಮುದಾಯವೇ ವಾಸಿಸುತ್ತಿದ್ದಾರೆ. ಆದರೆ ಈ ಗ್ರಾಮಕ್ಕೆ ಯಾವುದೇ ರಸ್ತೆ, ಚರಂಡಿ, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿಲ್ಲ. ಗ್ರಾಪಂ, ತಾಪಂ ಹಾಗೂ ಜಿಪಂ ಅನುದಾನ ಹಾಗೂ ಸರಕಾರದ ಯಾವುದೇ ಸೌಲಭ್ಯಗಳು ನೀಡುತ್ತಿಲ್ಲ. ಈ ಬಗ್ಗೆ ಪಿಡಿಒ, ತಾಪಂ ಇಹಿಗೆ ಆನೇಕ ಬಾರಿ ಮನವಿ ನೀಡಿದರೂ ಯಾವುದೇ

ಪ್ರಯೋಜನವಾಗಿಲ್ಲ, ಯಾವ ಅಧಿಕಾರಿಯೂ ಗ್ರಾಮಕ್ಕೆ ಭೇಟಿ ನೀಡಿಲ್ಲ. ಇದರಿಂದ ಸಾರ್ವಜನಿಕರು ನಿತ್ಯ ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ ಎಂದು ಆರೋಪಿಸಿದರು.

ಗ್ರಾಮಕ್ಕೆ ರಸ್ತೆ, ಚರಂಡಿ, ಶೌಚಾಲಯ ಹಾಗೂ ಮನೆ-ಮನೆಗೆ ಕುಡಿಯುವ ನೀರಿನ ಗಂಗಾ ಯೋಜನೆ ಸೌಲಭ್ಯ ಕಲ್ಪಿಸುವ ಮೂಲಕ ಕಾಡುಗೊಲ್ಲರ ಹಟ್ಟಿಗಳ ಸಹಕರಿಸಬೇಕು. ಇಲ್ಲವಾದಲ್ಲಿ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು ಆದ ಎ.ಚಿತ್ತಪ್ಪ ಯಾದವ್, ರಾಘವೇಂದ್ರ, ಮಹಾಲಕ್ಷ್ಮಿ, ನಾಗವೇಣಿ, ನಾಗಲಕ್ಷ್ಮಿ ಕುಸುಮ, ಸರೋಜಮ್ಮ, ಕವಿತ, ಶಶಿಕಲಾ, ಹಾಲೇಶ್ ಯಾದವ್, ಸಿದ್ದರಾಜ್, ಗಂಗಾಧರ್, ರಮೇಶ್, ತಮ್ಮಣ್ಣ ಪುನೀತ್ ಯಾದವ್‌ ಇತರರಿದ್ದರು.
ಬಾಕ್ಸ್..
ಹಿರಿಯೂರು ತಾಲ್ಲೂಕಿನ ಕಾಟಪ್ಪನಹಟ್ಟಿ ಗ್ರಾಮಕ್ಕೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ ಕೊಡುವಂತೆ ಒತ್ತಾಹಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

Leave a Reply

Your email address will not be published. Required fields are marked *