ಹೊಳಲ್ಕೆರೆ. ತಾಲೂಕು ಪಂಚಾಯತಿ, ಪುರಸಭೆ, ಹಾಗೂ ಸಮಾಜ ಕಲ್ಯಾಣ ಇಲಾಖೆ ಹೊಳಲ್ಕೆರೆ ತಾಲೂಕು ಆಡಳಿತ ವತಿಯಿಂದ ಪಟ್ಟಣದ ತಾಲೂಕು ಕಛೇರಿಯಲ್ಲಿ ವಾಲ್ಮೀಕಿ ಜಯಂತಿಯನ್ನು ಗುರುವಾರ ಆಚರಿಸಲಾಯಿತು. ಈ ಸಂದರ್ಭದಲ್ಲಿ ಆಹಾರ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕರಾದ ಕುಬೇರಪ್ಪ ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ತಹಶಿಲ್ದಾರ್ ಬಿ ಬಿ ಫಾತೀಮಾ, ಪುರಸಭೆ ಮುಖ್ಯಾಧಿಕಾರಿ ರೇಣುಕಾದೇಸಾಯಿ, ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ವಿಶ್ವನಾಥ್, ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಾದ ಚನ್ನಬಸಪ್ಪ, ಕಛೇರಿಯ ವ್ಯವಸ್ಥಾಪಕರಾದ ಮೋಹನ್, ಕ್ರೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀನಿವಾಸ್, ಎಡಿ ಎಲ್ ಆರ್ ಸುಮಾ, ನಾಯಕ ಸಮಾಜದ ಮುಖಂಡರುಗಳಾದ ಸೂರೇಗೌಡ್ರು, ಲೋಹಿತ್, ರಂಗಸ್ವಾಮಿ, ಹೊರಕೇರಪ್ಪ, ತಿಪ್ಪೇಸ್ವಾಮಿ, ಮಂಜುನಾಥ್, ಹನುಮಂತಪ್ಪ, ಸೇರಿದಂತೆ ತಾಲೂಕಿನ ಎಲ್ಲ ಸಂಘಟನೆಯ ಸಮಿತಿ ಅದ್ಯಕ್ಷರು ಪದಾಧಿಕಾರಿಗಳು ನಾಗರೀಕ ಬಂದುಗಳು ಪುರಸಭೆಯ ಸದಸ್ಯರುಗಳು ಗ್ರಾಮ ಪಂಚಾಯತಿ ಅದ್ಯಕ್ಷರು ಉಪಾದ್ಯಕ್ಷರು ಸದಸ್ಯರುಗಳು ಹಾಗೂ ವಾಲ್ಮೀಕಿ ಸಮಾಜದವರು ತಾಲೂಕಿನ ಎಲ್ಲ ಸಂಘ ಸಂಸ್ಥೆಗಳು ಎಲ್ಲ ಇಲಾಖೆಯ ಮುಖ್ಯಸ್ಥರು ಹಾಗೂ ಸಿಬಂದಿ ವರ್ಗದವರು ಇದ್ದರು..
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030