ಚಿತ್ರಲಿಂಗೇಶ್ವರ ಸ್ವಾಮಿಯ ಅಂಬಿನೋತ್ಸವ ಅದ್ದೂರಿಯಾಗಿ ನೆರವೇರಿತು
ಹೊಳಲ್ಕೆರೆ : ತಾಲ್ಲೂಕಿನ ಚಿತ್ರಹಳ್ಳಿಯಲ್ಲಿ ನೆಲೆಸಿರುವ ಕಾಡುಗೊಲ್ಲರ ಆರಾಧ್ಯ ದೈವ ಎಂದು ಖ್ಯಾತಿ ಪಡೆದಿರುವ ಚಿತ್ರಲಿಂಗೇಶ್ವರ ಸ್ವಾಮಿಯ ಅಂಬಿನೋತ್ಸವ ಶನಿವಾರ ಅದ್ದೂರಿಯಾಗಿ ನೆರವೇರಿತು.
ಉತ್ಸವ ಪ್ರಯುಕ್ತ ಉತ್ಸವದ ಹಿಂದಿನ ದಿನ ದೇವರುಗಳನ್ನು ಹಳ್ಳಕ್ಕೆ ಕರೆದುಕೊಂಡು ಹೋಗಿ ವಿಶೇಷ ಪೂಜೆ ಮಾಡಿ. ಮಾರನೆಯ ದಿನ ಅಂಬಿನೋತ್ಸವ ಮಾಡಲಾಗುತ್ತದೆ.
ಕಾಡುಗೊಲ್ಲರ ಆರಾಧ್ಯ ದೈವ : ಶತಮಾನಗಳ ಹಿಂದೆ ಅಲೆಮಾರಿಗಳಾದ ಕಾಡುಗೊಲ್ಲರು ಅನಾದಿಕಾಲದಿಂದಲೂ ಚಿತ್ರಹಳ್ಳಿ ಗೊಲ್ಲರಹಟ್ಟಿಯಲ್ಲಿ ದೇಗುವ ನಿರ್ಮಿಸಿಕೊಂಡು ಚಿತ್ರಲಿಂಗೇಶ್ವರ ಸ್ವಾಮಿ ಹಾಗೂ ರಂಗನಾಥ ಸ್ವಾಮಿಯನ್ನು ಆರಾಧನೆ ಮಾಡುತ್ತಿದ್ದರು. ಪ್ರತಿ ವರ್ಷ ನಡೆಯುವ ವಿಜಯದಶಮಿಯಂದು ನಡೆಯುವ ಅಂಬಿನೋತ್ಸವಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತ ಸಾಗರವೆ ಹರಿದು ಬರುತ್ತದೆ. ಹರಕೆ ಕಟ್ಟಿಕೊಂಡ ಭಕ್ತರು ಹರಕೆ ತೀರಿಸುತ್ತಾರೆ.
ಬುಡಕಟ್ಟು ಸಂಸ್ಕೃತಿಯ ಕಾಡುಗೊಲ್ಲರು ನಾಗರಿಕ ಸಮಾಜದಿಂದ ದೂರ ಸರಿದು ಕಾಡುಗಳ ಅಂಚಿನಲ್ಲಿ ಪಶುಸಂಗೋಪನೆ ಕುರಿ ಮೇಕೆ ಸಾಕಾಣಿಕೆ ಮಾಡುತ್ತಿದ್ದರು. ದೈವವೇ ಜೀವನ ಎಂದು ಭಾವಿಸಿದ್ದ ಕಾಡುಗೊಲ್ಲರು ಚಿತ್ರಲಿಂಗೇಶ್ವರ ಸ್ವಾಮಿಯನ್ನು ಪ್ರತಿಷ್ಠಾಪಿಸಿ ಆರಾಧಿಸತೊಡಗಿದರು.ವಿಶೇಷವಾಗಿ ಹಾವು.ಚೇಳು ಕಚ್ಚಿದಾಗ ಸ್ವಾಮಿಯನ್ನು ಭಕ್ತಿಯಿಂದ ಸ್ಮರಿಸಿದರೆ ಸಾವು ಸಂಭವಿಸದು ಎಂಬ ನಂಬಿಕೆ ಭಕ್ತರಲ್ಲಿದ್ದು ಅನೇಕ ಜನರು ಇಲ್ಲಿಗೆ ಬಂದು ವಾಸಿಯಾಗಿದ್ದಾರೆ. ವಿಷಜಂತುಗಳು ಕಚ್ಚಿ ಗುಣವಾದವರು ಚಿತ್ರಲಿಂಗೇಶ್ವರ ಸ್ವಾಮಿಗೆ ಬೆಳ್ಳಿ ಅಥವಾ ತಾಮ್ರದ ತಗಡಿನ ಹಾವು.ಚೇಳಗಳ ಮೂರ್ತಿ ಮಾಡಿಸಿ ಅರ್ಪಿಸುವ ವಾಡಿಕೆ ಇಂದಿಗೂ ಮುಂದುವರೆದಿದೆ. ಅಂಬಿನೋತ್ಸವ ಸಂದರ್ಭದಲ್ಲಿ ಹೊಳಲ್ಕೆರೆ ತಹಶಿಲ್ದಾರ್ ಬಿ ಬಿ ಫಾತೀಮಾ. ಪೊಲೀಸ್ ಇನ್ಸ್ ಪೆಕ್ಟರ್ ಚಿಕ್ಕಣ್ಣ. ಚಿತ್ರಹಳ್ಳಿ ಗೇಟ್ ಪೊಲೀಸ್ ಠಾಣೆ ಪಿಎಸ್ಐ ಕಾಂತರಾಜ್. ಗ್ರಾಮದ ಮುಖಂಡರಾದ ದೇವೇಂದ್ರಪ್ಪ. ಸಾಮಾಜಿಕ ಹೋರಾಟಗಾರರಾದ ಶ್ರೀಧರ್ ಚಿತ್ರಹಳ್ಳಿ.ಪಂಚಾಯತಿ ಸದಸ್ಯರಾದ ಭಾಗ್ಯಮ್ಮ ಶಿವಣ್ಣ, ಗ್ರಾಮದ ಮುಖಂಡರು ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಬಂದಿದ್ದ ಭಕ್ತರು ಇದ್ದರು..
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030