ಹೊಳಲ್ಕೆರೆ. ತಾಲ್ಲೂಕಿನ ಚಿಕ್ಕಜಾಜೂರಿನಲ್ಲಿ ಶನಿವಾರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನಾ ಕಚೇರಿ ವ್ಯಾಪ್ತಿಯಲ್ಲಿ “ತಾಲೂಕು ಮಟ್ಟದ ಒಕ್ಕೂಟ ಪದಾಧಿಕಾರಿಗಳ ಸಮಾವೇಶ ” ಜರುಗಿತು.
ಸಮಾವೇಶದ ಉದ್ಘಾಟನೆ ಮಾಡಿ ಮಾತನಾಡಿದ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರು, ಗಣ್ಯರಾದ ಶ್ರೀ ದೇವರಾಜ್ ಅವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗ್ರಾಮದ ಸರ್ವತೋಮುಖ ಅಭಿವೃದ್ಧಿ ಗೆ ಶ್ರಮಿಸುತ್ತಿದ್ದು, ಗ್ರಾಮೀಣ ಪ್ರದೇಶದ ಜನರು ಸಂಘದ ಸದಸ್ಯರಾಗುವ ಮೂಲಕ ನೆಮ್ಮದಿಯಾಗಿ ಜೀವನ ನಡೆಸುವಂತಾಗಿದೆ, ನಮ್ಮ ಗ್ರಾಮಕ್ಕೂ ಕ್ಷೇತ್ರದಿಂದ ಸಾಕಷ್ಟು ಅನುದಾನ ಸಿಕ್ಕಿದೆ, ಅದಕ್ಕಾಗಿ ಪೂಜ್ಯರಿಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದು ಅಭಿಪ್ರಾಯ ಪಟ್ಟರು..
ಕಾರ್ಯಕ್ರಮ ದಲ್ಲಿ ಹೊಳಲ್ಕೆರೆ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರು, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರು ಶ್ರೀ ಮೋಹನ್ ನಾಗರಾಜ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಗ್ರಾಮಾಭಿವೃದ್ಧಿ ಯೋಜನೆಯ ಸದುಪಯೋಗ ಪಡೆದುಕೊಂಡು ಜೀವನ ನಿರ್ವಹಣೆ ಮಾಡುತ್ತಿರುವ, ಹಾಗೂ ಉತ್ತಮ ವಾಗಿ ಪರಿವರ್ತನೆ ಹೊಂದಿದ ಅನೇಕ ಕುಟುಂಬಗಳ ಉದಾಹರಣೆ ಸಮೇತ ವಿವರಣೆ ನೀಡಿದರು. ಎಲ್ಲಾ ಪದಾಧಿಕಾರಿಗಳು ಸಂಸ್ಥೆ ಯ ಕಾರ್ಯಕ್ರಮ ಗಳ ಬಗ್ಗೆ ಸವಿವರವಾಗಿ ತಿಳಿದುಕೊಂಡು ತಮ್ಮ ವ್ಯಾಪ್ತಿಯ ಎಲ್ಲಾ ಸದಸ್ಯರಿಗೆ ಮಾಹಿತಿ ನೀಡುವ ಬಗ್ಗೆ ತಿಳಿಸಿದರು..
ಕಾರ್ಯಕ್ರಮದಲ್ಲಿ ಬ್ಯಾಂಕ್ ಆಫ್ ಬರೋಡ ಹೊಳಲ್ಕೆರೆ ಶಾಖೆಯ ಮ್ಯಾನೇಜರ್ ಮಧು ಭಾಗವಹಿಸಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬ್ಯಾಂಕ್ ನ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿರುವ ಬಗ್ಗೆ, ಬ್ಯಾಂಕ್ ಖಾತೆ ತೆರೆಯುವ, ಬ್ಯಾಂಕ್ ನಿಂದ ಸಂಘಗಳಿಗೆ ವ್ಯವಹಾರ ಕೊಡಿಸುವ, ಹಾಗೂ ಮರುಪಾವತಿ ಯ ಸಂಪೂರ್ಣ ಜವಾಬ್ದಾರಿ ನಿರ್ವಹಣೆ ಮಾಡುತ್ತಿರುವ ಬಗ್ಗೆ ಮಾಹಿತಿ ನೀಡಿ, ಕಂತು ಬಾಕಿ ಆಗದಂತೆ ನೋಡಿಕೊಳ್ಳಲು ತಿಳಿಸಿದರು..
ಕಾರ್ಯಕ್ರಮದಲ್ಲಿ ಜಿಲ್ಲಾ ನಿರ್ದೇಶಕರಾದ ದಿನೇಶ್ ಪೂಜಾರಿ ಮಾತನಾಡಿ ಕ್ಷೇತ್ರದ ಹಿನ್ನೆಲೆ, ಗ್ರಾಮಾಭಿವೃದ್ಧಿ ಯೋಜನೆಯ ಪ್ರಾರಂಭದ ಮೂಲ ಉದ್ದೇಶ, ಯೋಜನೆಯ ಹಲವಾರು ಕಾರ್ಯಕ್ರಮ ಗಳ ಬಗ್ಗೆ ದಶ ಅಂಶಗಳ ಬಗ್ಗೆ, ಮಾಸಿಕ ವರದಿ, ಮರುಪಾವತಿ ಚೀಟಿ, ಬಡ್ಡಿ ಲೆಕ್ಕಾಚಾರ ಮಾಡುವ ವಿಧಾನ, cc ಖಾತೆಯ ವಿಶೇಷತೆ, ಸಂಘಗಳಿಗೆ ಲಾಭಂಶ ಹೇಗೆ ಬರುತ್ತದೆ ಅನ್ನುವ ಸಂಪೂರ್ಣ ಮಾಹಿತಿ ನೀಡಿದರು…
ತಾಲೂಕು ಯೋಜನಾಧಿಕಾರಿಗಳು ತಾಲೂಕಿನ ಸಾಧನೆಯ ಅಂಕಿ ಸಂಖ್ಯೆ ಸಮೇತ ವರದಿ ನೀಡಿ, ಕಾರ್ಯಕ್ರಮ ಕ್ಕೆ ಆಗಮಿಸಿದ ಎಲ್ಲರಿಗೂ ಸ್ವಾಗತ ಬಯಸಿದರು…
ಸಮಾವೇಶ ದಲ್ಲಿ ತಾಲೂಕಿನ ಎಲ್ಲಾ ಮೇಲ್ವಿಚಾರಕ ಶ್ರೇಣಿ ಸಿಬ್ಬಂದಿಗಳು, ಕಚೇರಿ ಮ್ಯಾನೇಜರ್, ಕಚೇರಿ ಸಿಬ್ಬಂದಿಗಳು, ತಾಲೂಕಿನ ಸೇವಾಪ್ರತಿನಿಧಿ ಗಳು, vle ಗಳು, ಉಪಸ್ಥಿತರಿದ್ದರು.. 6 ವಲಯದ 59 ಒಕ್ಕೂಟ ಗಳ ಪದಾಧಿಕಾರಿಗಳು ಭಾಗವಹಿಸಿ ಮಾಹಿತಿ ಪಡೆದುಕೊಂಡರು…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030