ಹೊಳಲ್ಕೆರೆ ತಾಲ್ಲೂಕಿನ ಚಿಕ್ಕಜಾಜೂರು ಗ್ರಾಮ ಪಂಚಾಯತಿ ಆಚರಣದಲ್ಲಿ ಮಂಗಳವಾರ ಆರೋಗ್ಯ ಶಿಭಿರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಜನರುಗಳು ಸಾಂಕ್ರಾಮಿಕ ರೋಗಗಳ ಬಗ್ಗೆ ಎಚ್ಚರವಹಿಸಬೇಕು ಬೇಕು ಎಂದು ಚಿಕ್ಕಜಾಜೂರು ಸಮುದಾಯ ಆರೋಗ್ಯ ವೈದ್ಯಾಧಿಕಾರಿ ಪ್ರದೀಪ್ ಚಿಕ್ಕಜಾಜೂರು ಗ್ರಾಮ ಪಂಚಾಯತಿಯಲ್ಲಿ ಹಮ್ಮಿ ಕೊಂಡಿದ್ದ ಆರೋಗ್ಯ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಸಾಂಕ್ರಾಮಿಕ ರೋಗಗಳು ನೀರಿನಿಂದ ಗಾಳಿಯಿಂದ ಹರಡುತ್ತವೆ ಶೀತ ಕೆಮ್ಮು ನೆಗಡಿ. ಬಂದಾಗ ಒಬ್ಬರಿಂದ ಒಬ್ಬರಿಗೆ ಹರಡುವುದನ್ನು ತಡೆಗಟ್ಟಲು ಮುಂಜಾಗ್ರತೆ ವಹಿಸಿ ಕೂಡಲೇ ಆಸ್ಪತ್ರೆಗೆ ಬಂದು ಚಿಕಿತ್ಸೆ ತೆಗೆದುಕೊಳ್ಳಿ ಚಿಕ್ಕಜಜೂರು ಭಾಗದಲ್ಲಿ ಸಾಂಕ್ರಮಿಕ ರೋಗಗಳನ್ನು ತಡೆಗಟ್ಟುಲು ಗ್ರಾಮ ಪಂಚಾಯತಿ ಹಾಗೂ ಆರೋಗ್ಯ ಇಲಾಖೆಯಿಂದ ಹಿಂದಿನಿಂದಲೂ ಬಹಳಷ್ಟು ಜಾಗೃತಿ ಕಾರ್ಯಕ್ರಮಗಳು ಆರೋಗ್ಯ ಶಿಭಿರಗಳನ್ನು ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು. ಇದೇ ದರ್ಭದಲ್ಲಿ ಮಾತನಾಡಿ ಮಾಜಿ ಗ್ರಾಮ ಪಂಚಾಯತಿ ಅದ್ಯಕ್ಷರಾದ ಡಿ ಸಿ ಮೋಹನ್ ಮಾತನಾಡಿ ಗ್ರಾಮ ಪಂಚಾಯತಿಗಳಲ್ಲಿ ಕೆಲಸ ಮಾಡುವ ಸಿಬಂಧಿಗಳ ಆರೋಗ್ಯದ ಬಗ್ಗೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರ ಕಾಳಜಿ ವಹಿಸುತ್ತಿದೆ ಈಗಾಗಿ ಪಂಚಾಯತಿಯ ಸಿಬಂದಿಗಳ ಆರೋಗ್ಯ ತಪಾಸಣೆ ಶಿಭಿರವನ್ನು ಚಿಕ್ಕಜೂಜೂರು ಗ್ರಾಮ ಪಂಚಾಯತಿಯಲ್ಲಿ ಗುಂಜಿಗನೂರು ಗ್ರಾಮ ಪಂಚಾಯತಿ ಸೇರಿದಂತೆ ನಾಲ್ಕು ಪಂಚಾಯತಿಗಳ ಸಿಬಂದಿಗಳಿಗೆ ಆರೋಗ್ಯ ತಪಾಸಣೆ ಶಿಭಿರವನ್ನು ಹಮ್ಮಿಕೊಳ್ಳಾಗಿದೆ ಎಲ್ಲ ಸಿಬಂದಿಗಳು ವೈದ್ಯರ ಹತ್ತಿರ ನಿಮ್ಮ ಆರೋಗ್ಯವನ್ನು ತಪಾಸಣೆ ಮಾಡಿಸಿಕೊಳ್ಳಿ ಎಂದು ಸಲಹೆ ನೀಡಿದರು ಚಿಕ್ಕಜಾಜೂರು ಗ್ರಾಮ ಪಂಚಾಯತಿ ವತಿಯಿಂದ ಜನರು ಹಾಗೂ ಸಾರ್ವಜನಿಕರ ಬಗ್ಗೆ ಬಹಳ ಕಾಳಜಿ ವಹಿಸಿದ್ದಾರೆ ಕರೋನ ಸಂದರ್ಭದಲ್ಲಿ ಗ್ರಾಮ ಪಂಚಾಯತಿಯ ಸಿಬಂಧಿಗಳು ಸದಸ್ಯರುಗಳು ಅದ್ಯಕ್ಷರುಗಳು ತುಂಬಾ ಎಚ್ಚರಿಕೆ ವಹಿಸಿ ಕರೋನವನ್ನು ಈ ಬಾಗದಲ್ಲಿ ತಡೆಗಟ್ಟುವಲ್ಲಿ ಹಗಲಿರುಳು ಶ್ರಮಿಸಿದರು. ಜನಸಾಮಾನ್ಯರು ತಮ್ಮ ಮನೆಯ ಸುತ್ತ ಮುತ್ತ ನೀರು ನಿಲ್ಲದಂತೆ ಕಸ ವಾಗದಂತೆ ನೋಡಿಕೊಳ್ಳಿ ಕಸವನ್ನು ಎಲ್ಲೆಂದರಲ್ಲಿ ಎಸೆಯಬೇಡಿ ನಿಮ್ಮ ಮನೆಯ ಮುಂದೆ ಬರುವ ಕಸದ ವಾನಗಳಿಗೆ ಹಸಿ ಕಸ ಒಣ ಕಸ ವಿಂಗಡಿಸಿ ಹಾಕಿದರೆ ಸಾಂಕ್ರಾಮಿಕ ರೋಗಗಳು ಬರದಂತೆ ತಡೆಗಟ್ಟಬಹುದು ಎಂದು ಸಲಹೆ ನೀಡಿದರು.ಇನ್ನು ಗುಂಜಿಗನೂರು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಪ್ರದೀಪ್ ಮಾತನಾಡಿ ಪಂಚಾಯತಿಯ ಸಿಬಂದಿಗಳ ಆರ್ಥಿಕ ಭ್ರದತೆಗಾಗಿ ಪ್ರಧಾನ ಮಂತ್ರಿ ಸುರಕ್ಷಾ ಭಿಮಾ ಯೋಜನೆ ಇದೆ ಎಲ್ಲ ಸಿಬಂದಿಗಳು ಇದರ ಸದಪಯೋಗಪಡಿಸಿಕೋಳ್ಳಿ ಎಂದು ಸಲಹೆ ನೀಡಿ ಅರ್ಜಿಗಳನ್ನು ವಿತರಿಸಿದರು. ಗ್ರಾಮ ಪಂಚಾಯತಿಯ ಸ್ಚಚ್ಚಾತಾ ಸಿಬಂಧಿಗಳಿಗೆ ಸ್ವಚ್ಚತಾ ಕಿಟ್ ಗಳನ್ನು ತಾಲೂಕು ಪಂಚಾಯತಿ ಕಾರ್ಯ ನಿರ್ವಾಕ ಅಧಿಕಾರಿಗಳಾದ ವಿಶ್ವನಾಥನ್ ವಿತರಿಸಿದರು. ಶಿಭಿರದಲ್ಲಿ ಪಂಚಾಯತಿಯ ಸಿಬಂದಿಗಳನ್ನು ಆರೋಗ್ಯ ಇಲಾಖೆಯ ವೈದ್ಯಾದಿಕಾರಿಗಳು ಬಿ ಪಿ ಶುಗರ್ ಆರೋಗ್ಯ ತಪಾಸಣೆ ನಡೆಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ತಾಲೂಕು ಪಿ ಡಿ ಓ ಸಂಘದ ಅದ್ಯಕ್ಷರಾದ ಜಯಪ್ಪ, ಮಾಜಿ ಗ್ರಾಮ ಪಂಚಾಯತಿ ಅದ್ಯಕ್ಷರಾದ ಡಿ ಸಿ ಮೋಹನ್, ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ವಿಶ್ವನಾಥ್, ತಾಲೂಕು ಐ ಸಿ ಕೋಡಿನೇಟರ್ ಉಮಾಶಂಕರ್, ತಾಲೂಕು ಪಂಚಾಯತಿ ಯೋಜಾನಾಧಿಕಾರಿಗಳಾದ ಸುರೇಶ್, ಗುಂಜಿಗನೂರು ಗ್ರಾ. ಪಂ ಅಭಿವೃದ್ಧಿ ಅಧಿಕಾರಿಗಳಾದ ಪ್ರದೀಪ್ ಹಾಗೂ ಪಂಚಾಯತಿ ಸದಸ್ಯರುಗಳು, ಸಿಬಂಧಿಗಳು, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು ಗ್ರಾಮಸ್ಥರು ಇದ್ದರು…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030