ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹೊಳಲ್ಕೆರೆ ಪಟ್ಟಣ ಶಾಖೆ ವತಿಯಿಂದ ಶ್ರೀ ವೀರಭದ್ರ ಸ್ವಾಮಿ ದೇವಾಲಯದದಿಂದ ರೈತ ಸಂಘದ ಪದಾಧಿಕಾರಿಗಳು ಮೆರವಣಿಗೆ ಮೂಲಕ ಪಶು ಆಸ್ಪತ್ರೆಗೆ ತೆರಳಿ ಮುಂಭಾಗ ಪ್ರತಿಭಟನೆ ಮಾಡಿ ತಾಲೂಕು ವೈದ್ಯಾಧಿಕಾರಿಗಳ ಮುಖಾಂತರ ಪಶು ಸಂಗೋಪನಾ ಮತ್ತು ರೇಷ್ಮೆ ಇಲಾಖೆ ಸಚಿವರು ಕರ್ನಾಟಕ ರಾಜ್ಯ ಸರ್ಕಾರ ಇವರಿಗೆ ಮನವಿ ಸಲ್ಲಿಸಲಾಯಿತು, ಪಶು ಆಸ್ಪತ್ರೆಯಲ್ಲಿ ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆ ನೀಡುವ ಕುರಿತು, ಪಟ್ಟಣದಲ್ಲಿ ಎರಡು ತಿಂಗಳಿಂದ ಹಸುಗಳು ಹಾಗೂ ಕರುಗಳಿಗೆ ಗಂಟು ರೋಗ ಕಾಣಿಸಿಕೊಂಡು ಬಳಲುತ್ತಿವೆ ವೈದ್ಯಾಧಿಕಾರಿಗಳು ತಕ್ಷಣ ಚಿಕಿತ್ಸೆ ನೀಡುವ ಮೂಲಕ ಆರೋಗ್ಯ ಸುಧಾರಿಸುವುದು, ಬೇಡಿಕೆಗಳು :- 1)ಹೊಳಲ್ಕೆರೆ ತಾಲ್ಲೂಕಿನ ಪಶು ಆಸ್ಪತ್ರೆಗಳಲ್ಲಿ ಖಾಲಿ ಇರುವ ಪಶು ವೈದ್ಯಾಧಿಕಾರಿಗಳ ಹುದ್ದೆಗಳನ್ನು ನೇಮಕ ಮಾಡಿ ಮೂಲಭೂತ ಸೌಲಭ್ಯ ಕಲ್ಪಿಸುವುದು, 2)ಪಶು ಆಸ್ಪತ್ರೆಯ ಮುಂಭಾಗದ ನಾಮ ಫಲಕಗಳಲ್ಲಿ ವೈದ್ಯಾಧಿಕಾರಿಗಳ ಹೆಸರು,ದೂರವಾಣಿ ಸಂಖ್ಯೆ,ಸಮಯವನ್ನ ಹಾಕುವುದು, 3) ಸರ್ಕಾರದಿಂದ ಪಶು ಆಸ್ಪತ್ರೆಗೆ ಬರುವ ಮೇವಿನ ಬೀಜ,ಔಷಧಿಗಳು,ಮುಂತಾದ ಸೌಲಭ್ಯಗಳನ್ನು ಆಸ್ಪತ್ರೆ ಮುಂಭಾಗ ಸಾರ್ವಜನಿಕವಾಗಿ ಪ್ರಕಟಿಸುವುದು, 4)ಸಾಂಕ್ರಾಮಿಕ ರೋಗಗಳಾದ ಕಾಲು ಬಾಯಿ ಜ್ವರ,ಕರುಳು ಬೇನೆ, ಕಂದು ರೋಗಗಳಿಗೆ ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ನೀಡುವುದು, 5)ಜಾನುವಾರುಗಳಿಗೆ ಖಾಯಿಲೆ ಆದ ಸಂದರ್ಭದಲ್ಲಿ ಸ್ಥಳಕ್ಕೆ ಬೇಟಿ ನೀಡಿದಾಗ ಹೂರಗಡೆಯಿಂದ ಔಷಧಿಗಳನ್ನು ತರಿಸಿ ನೀಡುವುದನ್ನು ತಪ್ಪಿಸುವುದು, 6)ರಾಸುಗಳು ಆಕಸ್ಮಿಕವಾಗಿ ಮರಣ ಹೊಂದಿದರೆ ಸರ್ಕಾರದಿಂದ 10000 ರು ಸಹಾಯ ಧನ ಬರುವುದನ್ನು 30000 ಕ್ಕೆ ಏರಿಸುವುದು, ಈ ಪ್ರತಿಭಟನೆಯಲ್ಲಿ ಅಧ್ಯಕ್ಷ – ಎಸ್,ಸಿದ್ದರಾಮಪ್ಪ, ಪ್ರಧಾನಕಾರ್ಯದರ್ಶಿ-ಕೆ,ಎನ್,ಅಜಯ್,ಕಾರ್ಯಾಧ್ಯಕ್ಷ-ಅಣ್ಣಪ್ಪ,ನಿಕಟ ಪೂರ್ವ ಅಧ್ಯಕ್ಷ ಹೆಚ್,ಕೆ,ಲೋಕೇಶ್ ಖಜಾಂಚಿ-ಶಿವಮೂರ್ತಿ, ಉಪಾಧ್ಯಕ್ಷ-ಲೋಕಪ್ಪ,ಗುರುರಾಜ್,ದುಕ್ಕಡ್ಲೆಸೋಮಣ್ಣ,ರಾಜಪ್ಪ,ನೂರುಲ್ಲಾ,ಕುಮಾರಾಚಾರ್,ಸಂಜೀವ್,ಲೋಕಮಾನ್ಯ,ಕೆರೆಗುಂಡಿನಾಗರಾಜ್,ಬಸಣ್ಣ,ನೂರಾರು ರೈತರು ಇದ್ದರು…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030