ಹೊಳಲ್ಕೆರೆ. ಮಕ್ಕಳು ಪಠ್ಯದ ಜೊತೆಗೆ ಕ್ರೀಡೆ, ವಿವಿಧ ಕಲಾಕ್ಷೇತ್ರದಲ್ಲಿ ಹಾಗೂ ಮನರಂಜನೆಗಳಿಗೂ ಒತ್ತು ನೀಡಿದರೆ ಒಳಿತು ಎಂದು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಎನ್ ಶಿವಮೂರ್ತಿ ಅವರು ಹೇಳಿದರು. ತಾಲೂಕಿನ ಚನ್ನಸಮುದ್ರಗ್ರಾಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಹಾಗೂ ಪದನಿಮಿತ್ತ ಬ್ಲಾಕ್ ಯೋಜನಾ ಸಮನ್ವಯಾಧಿಕಾರಿಗಳ ಕಛೇರಿ ಕ್ಷೇತ್ರ ಸಂಪನ್ಮೂಲ ಕೇಂದ್ರ ಸರ್ವ ಶಿಕ್ಷಣ ಅಭಿಯಾನ ಹೊಳಲ್ಕೆರೆ ಸಮೂಹ ಸಂಪನ್ಮೂಲ ಕೇಂದ್ರ ಚನ್ನಸಮುದ್ರ ಶಾಲೆಯ ಆವರಣದಲ್ಲಿ ಬಿದರಿಕೆರೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಭಾ ಕಾರಂಜಿ ಮಕ್ಕಳ ಹಬ್ಬ ಮಕ್ಕಳಲ್ಲಿ ಇರುವ ಎಲ್ಲತರಹದ ಕಲೆಗಳನ್ನು ಅನಾವರಣಾ ಮಾಡುವುದಕ್ಕೆ ಪ್ರತಿಬಾ ಕಾರಂಜಿ ಮೂಲಕ ಅವಕಾಶ ಸಿಕ್ಕಂತಾಗಿದೆ ಎಂದರು.
ಇದೇ ವೇಳೆ ಮಾತನಾಡಿದ ಗ್ರಾಮ ಪಂಚಾಯತಿ ಅದ್ಯಕ್ಷರಾದ ದಾನವೇಂದ್ರ ದಾನೇಶ್. ಪ್ರತಿಭಾ ಕರಂಜಿಯ ಮೂಲಕ ಎಲ್ಲ ಮಕ್ಕಳು ತಮ್ಮಲ್ಲಿರುವ ಪ್ರತಿಬೆಗಳನ್ನು ಅನಾವರಣಾ ಮಾಡುತ್ತಾರೆ. ಒಬ್ಬರಲ್ಲಿ ಒಂದೊಂದು ರೀತಿಯವಕಲೆಗಳು ಇರುತ್ತವೆ ಕಲೆಗೆ ಯಾವಾಗಲೂ ಬೆಲ್ಲೆ ಇದ್ದೆ ಇರುತ್ತದೆ. ಪ್ರಶಸ್ತಿಯತ್ತ ಗಮನ ಹರಿಸದೆ ಉತ್ತಮವಾಗಿ ನಿಮ್ಮ ಪ್ರತಿಬೆಯನ್ನು ಶಿಸ್ತಿನಿಂದ ಅನಾವರಣಾ ಮಾಡಿದರೆ ಪ್ರಶಸ್ತಿ ಗಳು ಹರಸಿ ಬರುತ್ತವೆ. ಮಕ್ಕಳು ಒಳ್ಳೆಯ ಗುಣಗಳನ್ನು ಬೆಳಸಿಕೊಂಡು ಸಾಧನೆ ಮಾಡಬೇಕೆಂದು, ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ಪೋಷಕರೂ ಕೂಡ ಈ ನಿಟ್ಟಿನಲ್ಲಿ ತಮ್ಮ ಮಕ್ಕಳ ಕಲೆಗಳಿಗೆ ಪ್ರೋತ್ಸಾಹ ಕೊಡಬೇಕು ನಮ್ಮ ಗ್ರಾಮ ಪಂಚಾಯತಿ ವತಿಯಿಂದ ಕಾರ್ಯಕ್ರಮಕ್ಕೆ ಒಂದಷ್ಟು ನೆರವು ನೀಡಲಾಗಿದೆ ಮುಂದಿನ ದಿನಗಳಲ್ಲಿ ನಮ್ಮ ಪಂಚಾಯತಿಗೆ ಸಂಬಂದಿಸಿದ ಹಳ್ಳಿಗಳಲ್ಲಿ ಕ್ರೀಡೆ ಮನರಂಜನೆ ಕಲೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ನಾನು ವೈಯಕ್ತಿವಾಗಿ ನನ್ನ ಕೈಲಾದಷ್ಟು ಸಹಾಯ ಮಾಡೆ ಮಾಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ಸಿ ಆರ್ ಪಿ ಚಿದಾನಂದಪ್ಪ, ಎಸ, ಡಿ, ಎಂ ಸಿ ಸದಸ್ಯರಾದ ನಿರಂಜನಾ ಮೂರ್ತಿ, ಡಾ. ರವಿಕುಮಾರ್, ರುದ್ರಪ್ಪ, ಎನ್ ಸಿ ಜಯಂತಿ ಮುಖ್ಯೋಪಾಧ್ಯಾಯರು, ಬಾರತಿ ಮಲ್ಲಪ್ಪ, ಹಾಗೂ ಗ್ರಾಮ ಪಂಚಾಯತಿಯ ಸಿಬಂದಿ ಮತ್ತು ಎಲ್ಲ ಶಿಕ್ಷಕರು, ಊರಿನ ಮುಖಂಡರುಗಳು ಗ್ರಾಮಸ್ಥರು ಇದ್ದರು,
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ವತಿಯಿಂದ ನಿವೃತ್ತ ಯೋದರಿಗೆ ಹಾಗೂ ನಿವೃತ್ತಿ ಹೊಂದಿದ ಶಿಕ್ಷಕರುಗಳಿಗೆ ಸನ್ಮಾನಿಸಲಾಯಿತು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030