ಹೊಳಲ್ಕೆರೆ ತಾಲ್ಲೂಕು ಮದ್ದೇರು ಗ್ರಾಮ ಪಂಚಾಯಿತಿಯಲ್ಲಿ 2024-25ನೇ ಸಾಲಿನ (01-04-2023 ರಿಂದ 31-03-2024 ರವರಿಗೆ ಅನುಸ್ಟಾನಗೊಂಡ ಕಾಮಗಾರಿಗಳ )ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಮತ್ತು 15 ನೇ ಹಣಕಾಸು ಆಯೋಗದ ಗ್ರಾಮ ಪಂಚಾಯಿತಿ ಆವರಣದಲ್ಲಿ ಸಾಮಾಜಿಕ ಪರಿಶೋಧನಾ ಗ್ರಾಮ ಸಭೆಯು ನಡೆಯಿತು ಮದ್ದೇರು ಗ್ರಾಮ ಪಂಚಾಯಿತಿಯಲ್ಲಿ ನರೇಗಾ ಯೋಜನೆಯಡಿ ಮನೆ ನಿರ್ಮಾಣ,ದನದ ಕೊಟ್ಟಿಗೆ, ಕುರಿಶೆಡ್,ಇಂಗು ಗುಂಡಿ, ಸಾಮುದಾಯಿಕ ಕಾಮಗಾರಿಗಳಾದ ನಮ್ಮ ಹೊಲ ನಮ್ಮ ದಾರಿ,ರಾಜ ಕಾಲುವೆ ನಿರ್ಮಾಣ, ನಾಲ ಅಭಿವೃದ್ಧಿ,ಶಾಲೆಗಳಿಗೆ ಮಳೆ ನೀರು ಕೊಯ್ಲು,ಕಾಪೌಂಡ್ ನಿರ್ಮಾಣ,ತೋಟಗಾರಿಕಾ ಇಲಾಖೆಯಿಂದ ನುಗ್ಗಿ ಬೆಳೆ,ಡ್ರಾಗನ್ ಪ್ರೂಟ್,ಸೀಬೆ ಬೆಳೆ, ಕಾಳು ಮೆಣಸು,ಎಲೆ ಬಳ್ಳಿ, ತೆಂಗು ಬಾಳೆ,ಕೃಷಿ ಇಲಾಖೆಯಿಂದ ಬದು ನಿರ್ಮಾಣ, ಅರಣ್ಯ ಇಲಾಖೆಯ ಜಮೀನುಗಳಲ್ಲಿ ತೇಗ,ಹಲಸು,ನಿಂಬೆ, ಕರಿ ಬೇವು ಬೆಳೆ, 15 ನೇ ಹಣ ಕಾಸು ಆಯೋಗದಡಿ ಚರಂಡಿ ಸ್ವಚ್ಚತೆ,ಶಾಲೆಗಳಿಗೆ ಬಣ್ಣ ಹಚ್ಚುವುದು,ಮುಂತಾದ ಕಾಮಗಾರಿಗಳನ್ನು ಮಾಡಲು ಅವಕಾಶವಿದೆ ಎಂದು ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಶ್ರೀಮತಿ ಉಷಾದೇವಿ ತಿಳಿಸಿದರು, ಸ್ವಾಗತ- ರಂಗನಾಥ್ ನಿರೂಪಣೆ – ರಾಜಶೇಖರ್, ಕೆ,ಎನ್. ಕಾಮಗಾರಿಗಳ ವಿವರ ಓದುವುದು ತಿಪ್ಪೇರುದ್ರಸ್ವಾಮಿ ಎಂ, ಡಿ ಮಾಡಿದರು, ಛಾಯಾಗ್ರಾಹಕ – ಉಮೇಶ್,ಅಧ್ಯಕ್ಷರು – ಯುವರಾಜ್, ಪಿ,ಡಿ,ಓ,- ಮುರಳಿ, ಕಾರ್ಯದರ್ಶಿ ವೆಂಕಟೇಶ್,D E O ಲಕ್ಷ್ಮೀ, ಶರತ್,ತಾಲೂಕು ಸಾಮಾಜಿಕ ಪರಿಶೋಧನಾ ಕಾರ್ಯಕ್ರಮ ವ್ಯವಸ್ಥಾಪಕರಾದ ಶ್ರೀಮತಿ ಕೆ, ಸಿ,ಉಷಾದೇವಿ,ಗ್ರಾಮ ಪಂಚಾಯಿತಿ ಸದಸ್ಯರಾದ ಲೋಕೇಶ್,ಗೋವಿಂದ ನಾಯ್ಕ,ಶಾರದಮ್ಮ,ಜಗದೀಶ್,ರವಿ,V R P ಗಳಾದ ಲೋಹಿತ್,ಕರಿಯಮ್ಮ ಸುತ್ತ ಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು..
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030