ಲಿಂಗಾಪುರ ಗ್ರಾಮಪಂಚಾಯಿತಿ ಗೆ ಗೌಪ್ಯಾವಾಗಿ ಬೀಗಹಾಕಿ ಅವರ ಕೆಲಸ ಕಾರ್ಯಗಳಿಗೆ ತೆರಳಿದ ಸಾರ್ವಜನಿಕರು.
ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ಲಿಂಗಪುರ ಗ್ರಾಮದಲ್ಲಿ ಇಂದು ಊರ ಮುಖಂಡರಿಂದ ಗ್ರಾಮ ಪಂಚಾಯಿತಿಗೆ ಬೀಗ ಹಾಕಿ ಸಿಬ್ಬಂದಿಗಳನ್ನು ಕೆಲಸ ಮಾಡದಂತೆ ಹೊರಗೆ ನಿಲ್ಲಿಸಿದ್ದರು ಊರ ಮುಖಂಡರ ಬೀಗ ಹಾಕಿ ಊಟ ಮಾಡಲು ತಮ್ಮ ತಮ್ಮ ಮನೆಗೆ ತೆರಳಿದ್ದರು . ಸಿಬ್ಬಂದಿಗಳು ಬೀಗ ಹಾಕಿದವರು ಯಾರು ಎಂದು ಮುಕ್ತವಾಗಿ ಹೇಳಲು ಭಯಪಡುತ್ತಿದ್ದರು ಇದರಿಂದ ಬೇಸತ್ತ ಸಿಬ್ಬಂದಿಗಳು ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯ ಪ್ರತಿಯೊಬ್ಬ ಅಧ್ಯಕ್ಷರು ಹಾಗೂ ಸದಸ್ಯರುಗಳಿಗೆ ಗ್ರಾಮ ಪಂಚಾಯಿತಿಯ ಸಿಬ್ಬಂದಿಗಳು ಫೋನ್ನಲ್ಲಿ ಮಾಹಿತಿಯನ್ನು ನೀಡಿದ್ದರು ಆದರೂ ಸಹ ಕೆಲ ಆಡಳಿತ ಮಂಡಳಿಯ ಸದಸ್ಯರುಗಳು ಗೈರಾಗಿದ್ದರು ಅಧ್ಯಕ್ಷರು ಕೆಲವುತ್ತಿ ನಂತರ ಕಾರ್ಯಾಲಯಕ್ಕೆ ಆಗಮಿಸಿದರು ಹಾಗೂ ಉಪಾಧ್ಯಕ್ಷರು ಪ್ರಾರಂಭದಿಂದಲೂ ಉಪಸ್ಥಿತರಿದ್ದರು
ಆಡಳಿತ ಮಂಡಳಿಗೆ ವಿಷಯ ತಿಳಿಸುತ್ತಿದ್ದಂತೆಯೇ ಪೊಲೀಸ್ ಇಲಾಖೆಗೂ ಮಾಹಿತಿಯನ್ನ ನೀಡಿದರು. ಸ್ಥಳಕ್ಕೆ ಸಾಸ್ವೆಹಳ್ಳಿ ಉಪ ವಲಯದ ಪೊಲೀಸರನ್ನು ಕರೆಸಲಾಯಿತು. ಸಿದ್ದೇಶ್ ಹಾಗೂ ಮಂಜುನಾಥ್ ಕೂಡಲೆ ಸ್ಥಳಕ್ಕೆ ಆಗಮಿಸಿದರು ಗ್ರಾಮ ಪಂಚಾಯತಿ ಕಾರ್ಯಾಲಯಕ್ಕೆ ಬೀಗ ಹಾಕಿದ್ದನ್ನು ಕಂಡು ತಕ್ಷಣ ತಮ್ಮ ಮೇಲಾಧಿಕಾರಿಗಳಿಗೆ ವಿಚಾರ ತಿಳಿಸಿ ಅವರಿಂದ ಕಾನೂನು ಕ್ರಮವಾಗಿ ಮೇಲಧಿಕಾರಿಯ ಅನುಮತಿ ಪಡೆದು ಬೀಗ ಒಡೆದು ಸಿಬ್ಬಂದಿಗಳಿಗೆ ಕಾರ್ಯನಿರ್ವಹಿಸಲು ಅಡಚಣೆಯಾಗದಂತೆ ನೋಡಿಕೊಂಡರು. ಬೀಗ ಹೊಡೆದು ಸಿಬ್ಬಂದಿಯನ್ನು ಒಳಗೆ ಬಿಟ್ಟು ತಮ್ಮ ಕಾರ್ಯವನ್ನು ನಿರ್ವಹಿಸಲು ಹೇಳಿ ಇದಕ್ಕೆ ಸಂಬಂಧಪಟ್ಟಂತೆ ಗುಪ್ತವಾಗಿ ಗ್ರಾಮ ಪಂಚಾಯತಿ ಕಾರ್ಯಾಲಯಕ್ಕೆ ಬೀಗ ಹಾಕಿದವರ ಮಾಹಿತಿಯನ್ನು ಸಂಗ್ರಹಿಸಲಾಯಿತು . ಸಂಗ್ರಹಿಸುತ್ತಿದ್ದಂತೆಯೇ ಊರ ಗ್ರಾಮಸ್ಥರು ಹಾಗೂ ಮುಖಂಡರು ಗ್ರಾಮ ಪಂಚಾಯಿತಿ ಬಳಿ ಸೇರಿದರು ತದನಂತರ ಸಬ್ ಇನ್ಸ್ಪೆಕ್ಟರ್ ತಿಪ್ಪೇಶ್ ಸ್ವಾಮಿ ಹಾಗೂ ಪ್ರಸನ್ ರಕ್ಷಣಾ ಇಲಾಖೆಯಿಂದ ಹೆಚ್ಚುವರಿ ಆಗಿ ರಕ್ಷಣೆ ಗೋಸ್ಕರ ಗ್ರಾಮ ಪಂಚಾಯಿತಿಗೆ ಆಗಮಿಸಿ ಅಹಿತಕರ ಘಟನೆಯ ಬಗ್ಗೆ ಮಾಹಿತಿಯನ್ನು ಕಲೆಹಾಕಿದರು ಚರ್ಚಿಸಲು ಪ್ರಾರಂಭಿಸಿದಾಗ ಕೆಲವು ಮುಖಂಡರು ಊರಿನಲ್ಲಿ ಒತ್ತೂರಿ ಜಾಗಗಳನ್ನು ಕೆಲವು ಜನ ಆಕ್ರಮಿಸುತ್ತಿದ್ದು ಇದರ ಬಗ್ಗೆ ಸಂಬಂಧಪಟ್ಟ ಪಿಡಿಒ ಗೆ ಅರ್ಜಿಯನ್ನು ಕೊಟ್ಟಿದ್ದು ಈವರೆಗೂ ಯಾವ ಒತ್ತುವರಿಯನ್ನು ತೆರವುಗೊಳಿಸದ ಕಾರಣ ಈ ರೀತಿಯ ಕ್ರಮವನ್ನು ಕೈಗೊಂಡಿದೆ ಎಂದು ವಿಷಯ ತಿಳಿದು ಬಂದಿದೆ. ಆದರೆ ಪಿಡಿಒಗೆ ಮಾಹಿತಿ ಕಲೆ ಹಾಕಿದಾಗ ತಿಳಿದು ಬಂದಿದ್ದು ಈಗಾಗಲೇ ಒತ್ತುವರಿ ಮಾಡಿರುವವರಿಗೆ ಗ್ರಾಮ ಪಂಚಾಯಿತಿ ಕಾರ್ಯಾಲಯದಿಂದ ನೋಟಿಸ್ ನೀಡಿರುವುದನ್ನು ಸಾರ್ವಜನಿಕವಾಗಿ ಸಂಬಂಧಪಟ್ಟ ಊರ ಗ್ರಾಮಸ್ಥರು ಮತ್ತು ಮುಖಂಡರು ಹಾಗೂ ರಕ್ಷಣೆ ಇಲಾಖೆಗೆ ವಿಷಯವನ್ನು ತಿಳಿಸಿದರು. ಗ್ರಾಮದ ದೇವಸ್ಥಾನವನ್ನು ಕಟ್ಟಲು ಗ್ರಾಮದಲ್ಲಿರುವ ಗ್ರಾಮ ಪಂಚಾಯಿತಿಗೆ ಸೇರಲ್ಪಟ್ಟಿರುವ ಬಾವಿಯ ಜಾಗವನ್ನು ಹರಾಜು ಮಾಡಿ ಅಥವಾ ಮಾರಾಟ ಮಾಡಿ ಅದರಿಂದ ಬಂದ ಹಣವನ್ನು ದೇವಸ್ಥಾನ ಕಟ್ಟಲು ಗೌಪ್ಯವಾಗಿ ಚರ್ಚೆ ನಡೆಸಿರುತ್ತಾರೆ ಎಂಬ ಸುದ್ದಿಯು ಬಂದಿರುತ್ತದೆ ಆದರೆ ಗ್ರಾಮ ಪಂಚಾಯಿತಿಯ ಸ್ವತ್ತನ್ನು ಹರಾಜು ಹಾಕುವುದು ಮತ್ತು ಇತರರಿಗೆ ಮಾರಾಟ ಮಾಡುವ ಹಕ್ಕನ್ನು ಯಾವ ಜನಸಾಮಾನ್ಯರಿಗೆ ಆಗಲಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಅಥವಾ ಸದಸ್ಯರುಗಳಿಗೆ ಅಧಿಕಾರ ಹಾಗೂ ಅಧಿಕಾರಿಗಳಿಗಾಗಲಿ ಇರುವುದಿಲ್ಲ ಆದರೂ ಸಹ ಕೆಲವು ಮುಖಂಡರ ಗೌಪ್ಯವಾಗಿ ಮಾರಾಟ ಮಾಡಲು ಚರ್ಚೆ ನಡೆಸಿರುತ್ತಾರೆ ಎನ್ನಲಾಗಿದೆ. ಇಷ್ಟೆಲ್ಲಾ ಆದರೂ ಸಹ ಈ ಘಟನೆಯ ಬಗ್ಗೆ ಯಾರೊಬ್ಬರೂ ಸಹ ಪೊಲೀಸ್ ಇಲಾಖೆಗೆ ಲಿಖಿತ ರೂಪದಲ್ಲಿ ದೂರನ್ನು ಸಲ್ಲಿಸಿ ಇರುವುದಿಲ್ಲ ಮೌಖಿಕವಾಗಿ ಆಡಳಿತ ಸಿಬ್ಬಂದಿಯು ಪೊಲೀಸ್ ಇಲಾಖೆಗೆ ತಿಳಿಸಿದ್ದು ಸ್ವತಃ ತಾವೇ ಬಂದು ಬೀಗ ಓಡಿಸಿ ಆಡಳಿತ ಸಿಬ್ಬಂದಿ ವರ್ಗದವರಿಗೆ ತಮ್ಮ ಕಾರ್ಯವನ್ನು ನಿರ್ವಹಿಸಲು ಅನುವು ಮಾಡಿ ಕೊಟ್ಟಿರುತ್ತದೆ ಆದರೆ ಈ ಘಟನೆಯ ಬಗ್ಗೆ ಯಾವ ಕ್ರಮವನ್ನು ತೆಗೆದುಕೊಂಡಿದೆ ಎಂದು ಈವರೆಗೂ ತಿಳಿದು ಬಂದಿರುವುದಿಲ್ಲ ಎಂದು ಕೆಲಸ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು ಮತ್ತು ಒತ್ತುವರಿ ಮಾಡಿರುವ ಜನರು ಇಂದು ಗ್ರಾಮ ಪಂಚಾಯಿತಿ ಕಾರ್ಯಕ್ಕೆ ಬೀಗ ಹಾಕಿಸಿದ ಮುಖಂಡರುಗಳಲ್ಲಿ ಕೆಲವರು ಅವರೇ ಇಂತಹ ಎಷ್ಟೊ ಜಾಗವನ್ನು ಒತ್ತುವರಿ ಮಾಡಿರುತ್ತಾರೆ . ಅದರ ಬಗ್ಗೆ ಇಲ್ಲಿಯವರೆಗೂ ಯಾವ ಒಬ್ಬ ಆಡಳಿತ ವರ್ಗದವರಾಗಲಿ ಸಿಬ್ಬಂದಿಯಾಗಿ ಧ್ವನಿಯನ್ನು ಎತ್ತಿ ಇರುವುದಿಲ್ಲ ಕಾನೂನು ಎಂದರೆ ಎಲ್ಲರಿಗೂ ಸಮಾನವಾಗಿ ಇರಬೇಕೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು ಕೆಲವು ಮುಖಂಡರು ಒತ್ತುವರಿ ಮಾಡಿರುವ ಜಾಗವನ್ನು ಗ್ರಾಮ ಪಂಚಾಯಿತಿ ಕಾರ್ಯಾಲಯ ತನ್ನ ಕಾರ್ಯಕ್ಕೆ ವಶಪಡಿಸಿಕೊಂಡು ಎಲ್ಲರಲ್ಲೂ ಸಮಾನತೆಯ ಭಾವೈಕ್ಯತೆ ಮೂಡಿಸಬೇಕೆಂದು ಸಾರ್ವಜನಿಕರ ಅಭಿಪ್ರಾಯವಾಗಿತ್ತು.ಹಾಗೆ ಲಿಂಗಾಪುರ ಗ್ರಾಮಪಂಚಾಯತಿಯಲ್ಲಿ ಎರಡೆರಡು
P D O ಗಳು ಕಾರ್ಯ ನಿರ್ವಹಿಸುತ್ತಿದ್ದರು ಕೂಡ ಇಂತಹ ಗಂಭೀರಸಮಸ್ಯೆ ಎದುರಾಗಿರುವುದು ದುರಾದೃಷ್ಟಕರ.
ಇಲ್ಲಿ ಇಬ್ಬರು ಪಿ ಡಿ ಓ ಇದ್ದರು ಕೂಡ ಕೆಲಸ ಕಾರ್ಯ ಮಂದಗತಿಯಲ್ಲಿ ಸಾಗುತ್ತಿರುದಕ್ಕೆ ಕಾರಣವೇನು ಎನ್ನುವುದು ಸಾರ್ವಜನಿಕರಿಗೆ ಪ್ರಶ್ನೆಯಾಗಿ ಕಾಡುತ್ತಿದೆ…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030