ಹೊನ್ನಾಳಿ : ಎಂ.ಇ.ಎಸ್. ಮತ್ತು ಶಿವಸೇನೆಯನ್ನು ಕರ್ನಾಟಕದಿಂದ ನಿಷೇಧಿಸಲು ಒತ್ತಾಯಿಸಿ,ಹೋರಾಟ
ಬೆಳಗಾವಿಯಲ್ಲಿ ಇತ್ತೀಚೆಗೆ ಕಂಡಕ್ಟರ್ ಮೇಲೆ ನಡೆಸಿರುವ ಮಾರಣಾಂತಿಕ ಹಲ್ಲೆ ಹಾಗೂ ಸುಳ್ಳು ಫೋಕ್ಸ್ ಕೇಸ್ ದಾಖಲಿಸಿದ್ದು, ಬಲವಂತವಾಗಿ ಹೆಣ್ಣು ಮಗಳಿಂದ ಸುಳ್ಳು ಕೇಸ್ ದಾಖಲಿಸಿ ನಂತರ ವಾಪಾಸ್ ಪಡೆದಿರುತ್ತಾರೆ. ಕನ್ನಡ ಮಾತಾಡಿ ಎಂದು ಕಂಡಕ್ಟರ್ ಹೇಳಿದ್ದಕ್ಕೆ ತಿರುಗಿ ಕಂಡಕ್ಟನರ್‌ನನ್ನೇ ಮರಾಠಿ ಮಾತಾಡುವಂತೆ ಒತ್ತಾಯಿಸಿ ಹಲ್ಲೆ ನಡೆಸಿದ್ದಲ್ಲದೇ ಕನ್ನಡಿಗರಿಗೆ ಅವಮಾನ ಮಾಡುತ್ತಿದ್ದಾರೆ.
ಎಂ.ಇ.ಎಸ್. ಸಂಘಟನೆಯ ಕೆಲ ಮುಖಂಡರುಗಳು ಯಾವುದಾದರೊಂದು ರೀತಿಯಲ್ಲಿ ಪುಂಡಾಟಿಕೆ ಮತ್ತು ಉದ್ಧಟತನವನ್ನು ಪ್ರತೀ ಬಾರಿಯೂ ಮಾಡುತ್ತಲೇ ಬಂದಿದ್ದಾರೆ. ಇಂತಹ ಚಟುವಟಿಕೆಯನ್ನು ಸತತ ಮಾಡುತ್ತಿರುವ ಇಂತಹ ಪುಂಡರ ಓಟಿಗೋಸ್ಕರ ಯಾವ ರಾಜಕೀಯ ಧುರೀಣರೂ ಕೂಡ ಮಾತನಾಡದೇ ಇರುವುದು ವಿಪರ್ಯಾಸ. ಈ ಬಗ್ಗೆ ನಮಗೆ ತುಂಬಾ ವಿಷಾದವೆನಿಸುತ್ತಿದೆ.
ಅದೇ ರೀತಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಮೇಲೆ ಮರಾಠಿ ಮಾತನಾಡುವಂತೆ ಹಲ್ಲೆ ನಡೆಸಿದ ಘಟನೆಗಳು ನಡೆದಿವೆ
ದಶಕಗಳಿಂದಲೂ ಎಂಇಎಸ್ ಮತ್ತು ಶಿವಸೇನೆ ಬೆಳಗಾವಿ ಗಡಿಭಾಗದಲ್ಲಿ ಮರಾಠಿಗರು ಮತ್ತು ಕನ್ನಡಿಗರ ಮಧ್ಯೆ ಭಾಷಾ ಸಾಮರಸ್ಯವನ್ನು ಹದಗೆಡಿಸಿ ದ್ವೇಷದ ವಾತಾವರಣ ಮೂಡಿಸುತ್ತಿದ್ದಾರೆ. ಇದರಿಂದ ತಮ್ಮ ರಾಜಕೀಯ ಲಾಭ ಪಡೆದುಕೊಳ್ಳಲು ಸದಾ ಪ್ರಯತ್ನಿಸುತ್ತಲೇ ಇರುತ್ತಾರೆ.
ಈ ಕೃತ್ಯದಿಂದ ಕರ್ನಾಟಕದ ಎಲ್ಲಾ ಕನ್ನಡಿಗರಿಗೆ ಅವಮಾನವಾಗಿರುತ್ತದೆ. ಅಲ್ಲದೇ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಎಂ.ಇ.ಎಸ್. ಹಾಗೂ ಶಿವಸೇನೆಯ ಸಂಘಟನೆಗಳು ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಈ ಹಿಂದೆ ವಿಘ್ನಗೊಳಿಸಿರುತ್ತಾರೆ. ಇವರ ಈ ದುಷ್ಕೃತ್ಯಗಳಿಂದ ಬೇಸತ್ತ ಕನ್ನಡಪರ ಸಂಘಟನೆಗಳು ರೊಚ್ಚಿಗೆದ್ದು ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಇವರನ್ನು ಕರ್ನಾಟಕದಿಂದಲೇ ಗಡಿಪಾರು ಮಾಡಬೇಕು ಎಂದು ಸರ್ಕಾರವನ್ನು ಈಗಾಗಲೇ ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದರು.
ಆದ್ದರಿಂದ ರಾಜ್ಯ ಸರ್ಕಾರ ಕೂಡಲೇ ನಾಡದ್ರೋಹಿ ಸಂಘಟನೆಗಳಾದ ಎಂ.ಇ.ಎಸ್. ಹಾಗೂ ಶಿವಸೇನೆಯನ್ನು ರಾಜ್ಯದಿಂದ ನಿಷೇಧ ಮಾಡಬೇಕೆಂದು ಆಗ್ರಹಿಸುತ್ತೇನೆ..
ಒಂದು ವೇಳೆ ಎಂ.ಇ.ಎಸ್. ನಾಡದ್ರೋಹಿ ಸಂಘಟನೆಯನ್ನು ಕೂಡಲೇ ನಿಷೇಧ ಮಾಡದೇ ಇದ್ದಲ್ಲಿ ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಈ ಮೂಲಕ ಎಚ್ಚರಿಕೆ ನೀಡುತ್ತಿದ್ದೇವೆ,
ಈ ಸಂದರ್ಭದಲ್ಲಿ,
ಪ್ರದೀಪ್ ಮಾರಗೊಂಡನಹಳ್ಳಿ.. ತಾಲೂಕು ಅಧ್ಯಕ್ಷರು, ಮತ್ತು ಹೊಳೆಹರಳಹಳ್ಳಿ ಗ್ರಾಮ ಘಟಕದ ಅಧ್ಯಕ್ಷರಾದ ಅಣ್ಣಪ್ಪ . ಸೋಮೇಶ್ವರಯ್ಯ . ಸುಜಯ್ ಡಿ .ಮಧು. ಬಸವರಾಜ್. ಆಂಜನೇಯ. ಸುನಿಲ್. ಯಶವಂತ್ ಪ್ರಮೋದ್ ಅಭಿ ಮಂಜು ಮತ್ತು ನೂರಾರು ಕನ್ನಡ ಅಭಿಮಾನಿಗಳು ಪದಾಧಿಕಾರಿಗಳ ಸಹಕಾರದಿಂದ ಹೋರಾಟವು ಯಶಸ್ವಿಯಾಯಿತು..
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030