ನೂರಾರು ದೀಪಗಳ ಮಧ್ಯೆ ಮಿಂದೆದ್ದ ವೀರಭದ್ರ
ಹೊನ್ನಾಳಿ : ಕ್ಯಾಸಿನಕೆರೆ ಗ್ರಾಮದಲ್ಲಿ ಕಾರ್ತಿಕ ಮಾಸದ ಸೋಮವಾರ ಈ ದಿನ ಎಲ್ಲಾ ವೀರಭದ್ರೇಶ್ವರ ದೇವಸ್ಥಾನಗಳಲ್ಲಿ ದೀಪೋತ್ಸವ ಮಾಡುವುದು ಸಂಪ್ರದಾಯವಾಗಿದ್ದು ಈ ಭಾರಿ ಹೊಸ ಮೂರ್ತಿ ಪ್ರತಿಷ್ಠಾಪನೆಗೊಂಡಿದ್ದರಿಂದ ಗ್ರಾಮದ ಮಹಿಳೆಯರು ದೇವಸ್ಥಾನಕ್ಕೆ ಆಗಮಿಸಿ ದೀಪ ಬೆಳಗಿಸಿಟ್ಟು ಮತ್ತೊಂದು ದೀಪವನ್ನು ತಮ್ಮ ಮನೆಗಳಿಗೆ ತೆಗೆದುಕೊಂಡು ಹೋಗಿ ದೇವರ ಬೆಳಕನ್ನು ಮನೆಯಲ್ಲಿ ಬೆಳಗಿಸಿ ಪುನೀತರಾದರು ಈ ದೀಪಗಳ ಮಧ್ಯೆ ಶ್ರೀ ವೀರಭದ್ರೇಶ್ವರ ಕಂಗೊಳಿಸಿದರು ಎಲ್ಲರಿಗೂ ಶ್ರೀ ವೀರಭದ್ರೇಶ್ವರ ಬೆಳಕಾಗಿ ಬಾಳಲ್ಲಿ ಬರಲೆಂದು ಆಶೀರ್ವಾದ ಪಡೆದರು. ಶ್ರೀ ವೀರಭದ್ರೇಶ್ವರಗೆ ಜಯವಾಗಲಿ ನಿನ್ನ ಪವಾಡ ಅಂದಿಗುಂಟು ಇಂದಿಗಿಲ್ಲ ಎನ್ನುವವರಿಗೆ ನೀನೆ ಗಂಡ ಕಡೆ ಕಡೆ ಎಂದು ಜೈಕಾರ ಕೂಗುತ್ತಾ ದೀಪೋತ್ಸವವನ್ನು ಆಚರಿಸಿದರು…
ವರದಿ: ಯುವರಾಜ ಹಿರೇಮಠ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030