ಹೊನ್ನಾಳಿ :ಬಿಜೆಪಿಯ ಭ್ರಮೆಗೆ ತಕ್ಕ ಪಾಠ ಕಲಿಸಿದ ಮತದಾರರು ಎಂದ, ರಾಜ್ಯ ಹಿಂದುಳಿದ ವರ್ಗಗಳ ಉಪಾಧ್ಯಕ್ಷರು ಎಚ್.ಎ ಉಮಾಪತಿ
ರಾಜ್ಯದಲ್ಲಿ ಮೂರು ವಿಧಾನಸಭಾ ಕ್ಷೇತ್ರಗಳಿಗೆ ನಡೆದ
ಉಪಚುನಾವಣೆಯಲ್ಲಿ ನಿರೀಕ್ಷೆಯಂತೆಯೇ ಫಲಿತಾಂಶ ಬಂದಿದೆ. ಮೂರೂ ಕಡೆ , ಕಾಂಗ್ರೆಸ್ ಸರಕಾರವನ್ನು ಬೀಳಿಸುವ ಭ್ರಮೆಯಲ್ಲಿ ತೇಲಾಡುತ್ತಿದ್ದ ಬಿಜೆಪಿಗೆ ಪ್ರಬುದ್ಧ ಮತದಾರರು ತಕ್ಕ ಉತ್ತರ ಕೊಟ್ಟಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ರಾಜ್ಯ ಹಿಂದುಳಿದ ವರ್ಗಗಳ ಉಪಾಧ್ಯಕ್ಷರಾದ ಎಚ್ ಎ ಉಮಾಪತಿ,ಹೇಳಿದ್ದಾರೆ. ಉಪಚುನಾವಣೆ ಫಲಿತಾಂಶ ಹೊರಬಿದ್ದ ಬಳಿಕ ಮಾತನಾಡಿದ ಅವರು, ಮಾಜಿ ಪ್ರಧಾನಿ ದೇವೇಗೌಡರು ಕೂಡ ಸಿದ್ದರಾಮಯ್ಯನವರ ಸರಕಾರವನ್ನು ಬೀಳಿಸುವ ಮಾತುಗಳನ್ನಾಡಿದ್ದರು. ಆದರೆ ಚನ್ನಪಟ್ಟಣದ ಜನ ಅವರ ಮೊಮ್ಮಗನ ವಿರುದ್ದ ಜನಾದೇಶ ನೀಡಿದ್ದಾರೆ ಎಂದಿದ್ದಾರೆ. ರಾಜ್ಯದ ಕಾಂಗ್ರೆಸ್ ಸರಕಾರವನ್ನು ಯಾರೂ ಕಿತ್ತೊಗೆಯಲಾರರು. ಆ ಶಕ್ತಿ ಇರುವುದು ಜನರಿಗೆ ಮಾತ್ರ. ಈ ಫಲಿತಾಂಶ ಅದನ್ನು ಎತ್ತಿ ತೋರಿಸಿ, ಸ್ಪಷ್ಟ ಸಂದೇಶ ನೀಡಿದೆ ಎಂದು ಅವರು ವಿಶ್ಲೇಷಿಸಿದ್ದಾರೆ. ಶಿಗ್ಗಾಂವಿಯಲ್ಲಿ ಕೂಡ ಬಿಜೆಪಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಪುತ್ರನನ್ನೇ ಬಿಜೆಪಿ ಕಣಕ್ಕೆ ಇಳಿಸಿತ್ತು. ಅಲ್ಲಿ ನಮ್ಮ ಪಕ್ಷದಿಂದ ಅಲ್ಪಸಂಖ್ಯಾತ ಸಮುದಾಯದವರು ಅಭ್ಯರ್ಥಿ ಆಗಿದ್ದರು. ಮತದಾರರು ಅವರ ಪರವಾಗಿ ಜನಾದೇಶ ನೀಡಿದ್ದಾರೆ. ಕಾಂಗ್ರೆಸ್ ಪಕ್ಷ ಎಲ್ಲ ಆಹಿಂದ ವರ್ಗದ ಜನ ಸಮುದಾಯಗಳಿಗೂ ಸಮಾನ ಅವಕಾಶ ನೀಡುತ್ತ ಬಂದಿದೆ ಎಂದು ಅವರು ಮೊದಲನೇದಾಗಿ ಗೆಲುವಿಗೆ ಕಾರಣಕರ್ತರೆಂದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ರಾಜ್ಯದ ಮೂಲೆ ಮೂಲೆಯಿಂದ ಬಂದಂತ ಸಚಿವರು ಶಾಸಕರು ಪಕ್ಷದ ಅಭಿಮಾನಿಗಳು ಪಕ್ಷ ನೀಡುವ ಗ್ಯಾರಂಟಿ ಎಲ್ಲವೂ ನಿಲ್ಲುತ್ತಾರೆ ಎಂದು ಈ ಸಮಯದಲ್ಲಿ ಬಹಳಷ್ಟು ಉದಾಹರಣೆಯನ್ನು ತೆಗೆದುಕೊಂಡು ಪಕ್ಷವನ್ನು ಸೋಲಿಸಲು ಹುನ್ನಾರ ನಡೆಸಿದರು ಮತದಾರ ಪ್ರಭುಗಳು ಯಾವುದನ್ನು ಲೆಕ್ಕಿಸದೆ ಇದು ಧರ್ಮಕ್ಕೆ ಸಿಕ್ಕ ಜಯ ಎಂದು ವಿವರಿಸಿದ್ದಾರೆ…
ವರದಿ. ಯುವರಾಜ್ ಹೊನ್ನಾಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030