ಕ.ರಾ.ಗ್ರಾ.ಪಂ ಸದಸ್ಯರ ಮಹಾ ಒಕ್ಕೂಟ ಕವಲೊಡೆದು ನೂತನವಾಗಿ ಕ.ರಾ.ಗ್ರಾ.ಪ. ಸದಸ್ಯರ ಕ್ಷೇಮಾಭಿವೃದ್ದಿ ಸಂಘ ಉದ್ಭವಿಸಿದೆ
ಹೊನ್ನಾಳಿ :ನಮ್ಮ ರಾಜ್ಯದ ಸ್ವಾಭಿಮಾನಿ ಗ್ರಾಮ ಪಂಚಾಯತಿ ಸದಸ್ಯರ ಧ್ವನಿಯಾಗಲು ಬೆಂಗಳೂರಿನ ಗಾಂಧಿ ಭವನದಲ್ಲಿ ಅಧಿಕೃತವಾಗಿ *ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ಸದಸ್ಯರ ಕ್ಷೇಮಾಭಿವೃದ್ಧಿ ಸಂಘ* ವನ್ನು ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಲಾಯಿತು.
ಸಂಘದ ಧೆಯೋದ್ದೇಶಗಳು ಗ್ರಾಮ ಪಂಚಾಯಿತಿಯು ಸ್ಥಳೀಯ ಸರ್ಕಾರವಾಗಿದ್ದು ಆಡಳಿತ ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ ಚುನಾಯಿತ ಪ್ರತಿನಿಧಿಗಳ ಜವಾಬ್ದಾರಿ ಅಧಿಕಾರಗಳ ಜವಾಬ್ದಾರಿಗಳು ಬೇರೆ ಬೇರೆಯಾಗಿದ್ದು ಇತ್ತೀಚಿನ ದಿನಗಳಲ್ಲಿ ಸದಸ್ಯರ ಅಧಿಕಾರವನ್ನು ಮೊಟಕುಗೊಳಿಸುವ ಹುನ್ನಾರು ಹೆಚ್ಚಾಗಿದ್ದು ಚುನಾಯಿತ ಪ್ರತಿನಿಧಿಗಳ ಅಧಿಕಾರವನ್ನು ಮೊಟಕುಗೊಳಿಸಿ ಮೇಲಿನ ಅಧಿಕಾರಿಗಳಿಗೆ ಹೆಚ್ಚಿನ ಅಧಿಕಾರವನ್ನು ಕೊಡುವಂತಹ ವ್ಯವಸ್ಥೆಗಳ ವಿರುದ್ಧ ಹೋರಾಟ ಮಾಡಿ
ಗ್ರಾಮ ಪಂಚಾಯತಿ ಸದಸ್ಯರಿಗೆ ನ್ಯಾಯ ಕೊಡಿಸುವುದು ಗ್ರಾಮ ಪಂಚಾಯಿತಿಗಳು ಸ್ವಂತ ಸಂಪನ್ಮೂಲ ಮತ್ತು ಅನುದಾನದಲ್ಲಿ ಸಂಬಂಧ ಪಟ್ಟ ಮೇಲಾಧಿಕಾರಿಗಳು ಹಸ್ತಕ್ಷೇಪ ಮಾಡುಲು ಅವೈಜ್ಞಾನಿಕವಾದ ಆದೇಶದ ಕೊಡುತ್ತಿರುವುದರ ವಿರುದ್ದ ಹೋರಾಡಿ ಸದಸ್ಯರ ಅಸ್ತಿತ್ವಕ್ಕೆ ದಕ್ಕೆಯಾಗದಂತೆ ನೋಡಿ ಕೊಳ್ಳುವುದರ ಮುಖಾಂತರ ಗ್ರಾಮ ಪಂಚಾಯತಿ ಸದಸ್ಯರ ಏಳಿಗೆಗೆ *ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ಸದಸ್ಯರ ಕ್ಷೇಮಾಭಿವೃದ್ಧಿ ಸಂಘ* ಸದಸ್ಯರ ಪರವಾಗಿ ದ್ವನೀಯಾಗಿ ನಿಲ್ಲುತ್ತದೆ ಸಂಘ ದಲ್ಲಿ ಸದಸ್ಯರಾಗಿರುವ ಜನಪ್ರತಿನಿಧಿಗಳಿಗೆ ಅಜೀವ ಪರ್ಯಂತ ಸದಸ್ಯರಾಗಿ ಇರುತ್ತರೆ ಎಂದು ಅಧ್ಯಕ್ಷರಾದ ಸಣ್ಣಕ್ಕಿ ಲಕ್ಷ್ಮಣ್ ತಿಳಿಸಿದರು ಉದ್ಘಾಟನೆ ನಂತರ ಮಾನ್ಯ ಆಯುಕ್ತರು ಕರ್ನಾಟಕ ರಾಜ್ಯ ಪಂಚಾಯತ್ ರಾಜ್ ಇಲಾಖೆ ಇವರಿಗೆ ತಮ್ಮ ಬೇಡಿಕೆಗಳನ್ನು ಇಡೇರಿಸುವಂತೆ ಮನವಿ ಮಾಡಿದರು
ಬೇಡಿಕೆಗಳು:
1. ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ತಕ್ಷಣವೇ ನಡೆಸಬೇಕು
2. ಪಂಚಾಯಿತಿಗಳ ಹಣಕಾಸು ವ್ಯವಹಾರವನ್ನು ಖಜಾನೆಯಿಂದ ಮುಕ್ತಗೊಳಿಸಿ ನೇರವಾಗಿ ಗ್ರಾಮ ಪಂಚಾಯಿತಿಗಳ ಬ್ಯಾಂಕ್ ಖಾತೆಗೆ ಅನುದಾನ ಬಿಡುಗಡೆ ಮಾಡಬೇಕು .
ಭ್ರಷ್ಟಾಚಾರ ನಿಯಂತ್ರಣಕ್ಕೆ ಸಂಬಂಧಿಸಿ ಜಿಲ್ಲಾ ಮಟ್ಟದ ಕುಂದು ಕೊರತೆ ನಿವಾರಣಾ ಪ್ರಾಧಿಕಾರದ ರಚನೆ ಮಾಡಬೇಕು
3. . ಗ್ರಾಮಗಳಿಂದ ಪ್ರತ್ಯೇಕವಾಗಿ ಇರುವ ಲಂಬಾಣಿ ತಾಂಡಾಗಳು, ಬುಡಕಟ್ಟು ಜನರ ಹಾಡಿಗಳು, ಪುನರ್ವಸತಿ ಕ್ಯಾಂಪ್ಸಗಳು, ಪರಿಶಿಷ್ಟ ಜಾತಿಯ ಕಾಲೋನಿಗಳಲ್ಲಿ ವಾಸಿಸುವಲ್ಲಿ ಜಿಲ್ಲಾಧಿಕಾರಿಗಳಿಗೆ ಸೂಕ್ತ ಆದೇಶ ಹೊರಡಿಸಿ ಅಗತ್ಯ ಇರುವ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಜನ ವಸತಿ ಸಭೆ ನಡೆಸಲು ಕ್ರಮ ವಹಿಸಬೇಕು.
4. ಗ್ರಾಮ ಪಂಚಾಯಿತಿ ಮಟ್ಟದ ಕೆಡಿಪಿ ಸಭೆಯು ಕಡ್ಡಾಯವಾಗಿ ನಡೆಸುವಹಾಗೆ ಆದೇಶದಂತೆ ಪಾಲಿಸಲು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು ಆದೇಶಿಸಬೇಕು
5. ಗ್ರಾಮ ಪಂಚಾಯಿತಿ ಮಟ್ಟದ 3 ಸ್ಥಾಯಿ ಸಮಿತಿಗಳು ಮತ್ತು ಪ್ರಕರಣ 61ಎ ಪ್ರಕಾರ ಸ್ಥಾಪಿಸಲಾಗಿರುವ ಎಲ್ಲಾ ಉಪ ಸಮಿತಿಗಳ ರಚನೆ, ಸಭೆಗಳು ಮತ್ತು ಪರಿಣಾಮಕಾರಿ ನಿರ್ವಹಣೆ ಮಾಡುವಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ನಿರ್ಲಕ್ಷ್ಯ ತೋರಿಸುತ್ತಿದ್ದಾರೆ. ಸಮಸ್ಯೆಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಸರಕಾರ ಮಾರ್ಗಸೂಚಿಗಳನ್ನು ಗೆಜೆಟ್ ಮೂಲಕ ಪ್ರಕಟಿಸಬೇಕು.
6. ಕಾಯಿದೆಯ 296ಎ-296ಐ ವರೆಗಿನ ಪ್ರಕರಣಗಳಲ್ಲಿ ಜಿಲ್ಲಾ ಮಟ್ಟದ ಕುಂದು ಕೊರತೆ ನಿವಾರಣೆಗಳ ಪ್ರಾಧಿಕಾರ ರಚನೆಗೆ ಅವಕಾಶ ಕಲ್ಪಿಸಲಾಗಿದೆ. ಪ್ರಾಧಿಕಾರದ ರಚನೆ ಮತ್ತು ಕಾರ್ಯನಿರ್ವಹಣೆಗೆ ಸ್ಪಷ್ಟವಾದ ವಿವರಣೆಯನ್ನು ಕಾಯಿದೆ ನೀಡಿದೆ. ಇದರ ರಚನೆಗೆ ಕ್ರಮ ವಹಿಸುವ ಮೂಲಕ ಪಂಚಾಯಿತಿಗಳಲ್ಲಿ ಭ್ರಷ್ಟಾಚಾರ ನಿಯಂತ್ರಣ ಮತ್ತು ಉತ್ತಮ ಆಡಳಿತವನ್ನು ಖಾತರಿ ಪಡಿಸಲು ಸಾಧ್ಯವಿದೆ.
7. 94ಸಿ ಆಡಿಯಲ್ಲಿ ಅರ್ಜಿ ಸಲ್ಲಿಸಿರುವ ಎಲ್ಲಾ ಗ್ರಾಮೀಣರಿಗೆ ಆಂದೋಲನದ ಮೂಲಕ ಹಕ್ಕುಪತ್ರ ವಿತರಣೆ ಮಾಡಿ ಇ-ಸ್ವತ್ತು ಮಾಡಿಸಿಕೊಳ್ಳು ಅವಕಾಶ ಕಲ್ಪಿಸಬೇಕು.
8. ಮಹಿಳಾ ಸದಸ್ಯರಿಗೆ ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ಪ್ರತ್ಯೇಕ ಸಹಾಯವಾಣಿಯನ್ನು ತೆರೆಯಬೇಕು.
9. ಪ್ರತಿ ತಿಂಗಳು ಪಿ.ಡಿ.ಓ. ಮತ್ತು ಅಧ್ಯಕ್ಷರ ಜಂಟಿ ಸಭೆಯನ್ನು ಕಾರ್ಯ ನಿರ್ವಾಹಕ ಅಧಿಕಾರಿಗಳು ನಡೆಸಬೇಕು.
10. ಪ್ರತಿ 6 ತಿಂಗಳಿಗೊಮ್ಮೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣ ಅಧಿಕಾರಿಗಳು ಪ್ರತಿ ತಾಲೂಕಿನಲ್ಲಿ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರುಗಳ ಮತ್ತು ಪಿ.ಡಿ.ಓ.ಗಳ ಜಂಟಿ ಸಭೆಯನ್ನು ಕರೆಯಬೇಕು. ಇದರಿಂದ ಸಾಕಷ್ಟು ಸಮಸ್ಯೆಗಳು ಇಲ್ಲಿಯೇ ಪರಿಹಾರ ಮಾಡಲು ಸಾಧ್ಯವಾಗುತ್ತದೆ.
11. ಆರೋಗ್ಯ ರಕ್ಷಾ ಸಮಿತಿ, ನೀರು ನೈರ್ಮಲ್ಯ, ಆರೋಗ್ಯ ನೈರ್ಮಲ್ಯ, ಬಾಲ ವಿಕಾಸ ಸಮಿತಿಯ ಅಧ್ಯಕ್ಷರುಗಳನ್ನು ಈ ಹಿಂದೆ ಇದ್ದಂತೆಯೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಸ್ಥಳೀಯ ಸದಸ್ಯರುಗಳನ್ನು ಅಧ್ಯಕ್ಷರಾಗಿ ಮಾಡಲು ವಿವಿಧ ಇಲಾಖೆಯ ಅಧಿಕಾರಿಗಳಿಗೆ ಆದೇಶ ಮಾಡಬೇಕು.
12. ಆಡಿಟ್, ಸೋಷಿಯಲ್ ಆಡಿಟ್ ಜಮಾ ಬಂದಿ ಈ ರೀತಿ ಇದ್ದು ಇದರಲ್ಲಿ ಯಾವುದಾದರು ಒಂದು ಆಡಿಟ್ ಪದ್ಧತಿಯನ್ನು ರದ್ದು ಪಡಿಸಬೇಕು. ಸೋಷಿಯಲ್ ಆಡಿಟ್ ರವರ ಕಿರುಕುಳವನ್ನು ತಪ್ಪಿಸಬೇಕು.
13. ಗ್ರಾಮ ಪಂಚಾಯತ್ ಆಡಳಿತಕ್ಕೆ ತಾಲ್ಲೂಕು ಪಂಚಾಯತ್ ಅಧಿಕಾರಿಗಳು, ಜಿಲ್ಲಾ ಪಂಚಾಯತ್ ಅಧಿಕಾರಿಗಳು ಇತರೆ ಯಾವುದೇ ಅಧಿಕಾರಿಗಳು ಹಸ್ತಕ್ಷೇಪಮಾಡುವುದನ್ನು ತಕ್ಷಣದಿಂದ ನಿಲ್ಲಿಸುವಂತೆ ಆದೇಶ ಮಾಡಬೇಕು
14. ಸುಮಾರು ವರ್ಷಗಳಿಂದ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಇರುವಂತಹ ಬಡವರಿಗೆ ವಸತಿ ಯೋಜನೆಯಲ್ಲಿ ಮನೆಗಳನ್ನು ನೀಡಬೇಕು
ಎಂದು 34 ಬೇಡಿಕೆಗಳನ್ನ ಸಲ್ಲಿಸಲಾಯಿತು ಎಂದು ಅಧ್ಯಕ್ಷರಾದ ಸಣ್ಣಕ್ಕಿ ಲಕ್ಷ್ಮಣ್ ಮತ್ತು ಉಪಾಧ್ಯಕ್ಷರಾದ ರೇಖ ಆರ್ ಲೋಕೇಶ್ ಲಿಂಗಾಪುರ, ಆರ್ ಎನ್ ಭುಜಂಗ ತಿಳಿಸಿದರು.
ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ಸದಸ್ಯರ ಕ್ಷೇಮಾಭಿವೃದ್ಧಿ ಸಂಘ ದ ಪದಾಧಿಕಾರಿಗಳು
ರಾಜ್ಯದ್ಯಕ್ಷರು ಸಣ್ಣಕ್ಕಿ ಲಕ್ಷ್ಮಣ್, ಉಪಾಧ್ಯಕ್ಷರು ರೇಖಾ ಲೋಕೇಶ್, ಪ್ರಧಾನ ಕಾರ್ಯದರ್ಶಿ ಶಶಿಧರ್, ಖಜಾಂಚಿ ಶಶಿಕಲಾ, ಸಂಘಟನಾ ಕಾರ್ಯದರ್ಶಿ ಆರ್ ಎನ್ ಭುಜಂಗ, ಸಹ ಕಾರ್ಯದರ್ಶಿ ರೇವಣ ಸಿದ್ದೇಶ್ವರ, ಎಂ ಬಾಬು, ಕಾನೂನು ಸಲಹೆಗಾರರು ಕ್ಯಾರ ವೆಂಕಟೇಶ್, ಸದಸ್ಯರು ಸೋಮಪ್ಪ ಇದ್ದರು …
ವರದಿ: ಹೊನ್ನಾಳಿ
ಯುವರಾಜ ಹಿರೇಮಠ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030