ಹೊನ್ನಾಳಿಯ ಬಾಲ ನಟ ಖ್ಯಾತಿಯ ವಿಶ್ವಾಸ್ ಬಿ.ಎಸ್ ನಟಿಸಿರುವ ಕಿರುಚಿತ್ರಕ್ಕೆ ಕಿರೀಟ
ಭಾರತೀಯ ನಟ ಖ್ಯಾತಿಯ
ಹೊನ್ನಾಳಿಯ ವಿಶ್ವಾಸ್ ಬಿ.ಎಸ್ ನಟಿಸಿರುವ ಕನ್ನಡ ಕಿರುಚಿತ್ರ ಸೂರ್ಯಕಾಂತಿ ಹೂಗೆ , ಮೊದಲೇ ಗೊತ್ತಾಗಿದ್ದು ಚಿತ್ರದಲ್ಲಿ ಅಜ್ಜಿಯ ಮೊಮ್ಮಗನ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ ಈ ಸಂಪೂರ್ಣ ಚಿತ್ರವೂ ವಿಶ್ವಾಸ್ ಬಿ.ಎಸ್ ರವರ ಧ್ವನಿ ಮತ್ತು ನಟನೆಯಲ್ಲಿರೂವುದು ವಿಶೇಷ. ಗೊಂದಲದಲ್ಲಿರುವ ಹಳ್ಳಿಯ ರಹಸ್ಯವನ್ನು ಬಿಡಿಸುವ ರಹಸ್ಯವನ್ನು ಹೊಂದಿರುವ ಮೊಮ್ಮಗನ ಪಾತ್ರದಲ್ಲಿ ನಟಿಸಿದ್ದಾರೆ,
ಈ ಕಿರುಚಿತ್ರ ಮೊದಲ ಬಾರಿಗೆ ಪ್ರತಿಷ್ಠಿತ ಕಾನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಪ್ರಥಮ ಬಹುಮಾನ ಗೆದ್ದುಕೊಂಡಿದೆ. ಆಸ್ಕರ್ 2025ರ ಲೈವ್ ಆಕ್ಷನ್ ಶಾರ್ಟ್ ಫಿಲಂ ವಿಭಾಗ ದಡಿ ಅರ್ಹತೆ ಪಡೆದಿದೆ. ಮೈಸೂರಿನ ಡಾಕ್ಟರ್ ಚಿದಾನಂದ ಎಸ್ ನಾಯಕ್ ನಿರ್ದೇಶನದಲ್ಲಿ 4 ದಿನದಲ್ಲಿ ಚಿತ್ರೀಕರಣ ಮಾಡಿದ್ದಾರೆ. ಪುಣೆಯ ಫಿಲಂ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (FTII ) ವಿದ್ಯಾರ್ಥಿ ವಿಭಾಗದ ಅಡಿಯಲ್ಲಿ ಈ ಕಿರು ಚಿತ್ರವನ್ನು ನಿರ್ಮಾಣ ಮಾಡಿದೆ . ಭಾರತೀಯ ನಟ ವಿಶ್ವಾಸ್ ಬಿ.ಎಸ್ ರವರು ಸುಮಾರು 16 ಕನ್ನಡ ಚಲನಚಿತ್ರದಲ್ಲಿ ಬಾಲ ನಟನಾಗಿ ನಟಿಸಿ ಈಗಾಗಲೇ ಖ್ಯಾತಿ ಪಡೆದಿರುತ್ತಾರೆ…
ವರದಿ. ಯುವರಾಜ್ ಹೊನ್ನಾಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030