ಪತ್ರಕರ್ತರ ವಿವಿಧ ಬೇಡಿಕೆಗಳಈಡೇರಿಕೆಗಾಗಿ ಸರ್ಕಾರಕ್ಕೆ ಒತ್ತಾಯ…
ಚನ್ನಗಿರಿ ತಾಲೂಕಿನ ಕ,ಕಾ, ಪತ್ರಕರ್ತ ಸಂಘದ ಸದಸ್ಯರು ಇಂದು ಚನ್ನಗಿರಿ ಯಲ್ಲಿ ತಾಲ್ಲೂಕು ದಂಡಾಧಿಕಾರಿಯವರಿಗೆ ಮನವಿ ಸಲ್ಲಿಸಿದರುಸರ್ಕಾರದ ವತಿಯಿಂದ ಜಿಲ್ಲಾ ಮತ್ತು ರಾಜ್ಯ ಮಟ್ಟದ ಪತ್ರಕರ್ತರಿಗೆ ವಾರ್ತಾ ಇಲಾಖೆಯಿಂದ ಎಸ್ಸಿ-ಎಸ್ಪಿ ವರ್ಗದವರಿಗೆ ಪ್ರೋತ್ಸಾಹಿಸುವ ಸಲುವಾಗಿ ಮೀಡಿಯಾ ಕಿಟ್ ವಿತರಿಸುತ್ತಿರುವುದು ಶ್ಲಾಘನೀಯ. ಅದರಂತೆ ಎಲ್ಲಾ ವರ್ಗದ ಪತ್ರಕರ್ತರು ಸಮಾನವಾಗಿ ಕಾರ್ಯನಿರ್ವಹಿಸುತ್ತಿದ್ದು, ಮೀಡಿಯಾ ಕಿಟ್ ಗೂ ಎಲ್ಲಾ ವರ್ಗದ ಪತ್ರಕರ್ತರನ್ನು ಪರಿಗಣಿಸಬೇಕು
ಇತ್ತೀಚೆಗೆ ಸರ್ಕಾರದಿಂದ ಪತ್ರಕರ್ತರಿಗೆ ಬಸ್ ಪಾಸ್ ವಿತರಿಸುವ ಯೋಜನೆ ಕಾರ್ಯರೂಪಕ್ಕೆ ತಂದಿದ್ದು, ಹಲವಾರು ಷರತ್ತುಗಳನ್ವಯ ಬಸ್ ಪಾಸ್ ನೀಡುತ್ತಿರುವುದು ಜಟಿಲವಾಗಿದೆ. ಈ ಷರತ್ತುಗಳನ್ನು ಸಡಿಲಗೊಳಿಸಿ ರಾಜ್ಯದ ಎಲ್ಲಾ ಪತ್ರಕರ್ತರಿಗೂ ಬಸ್ ಪಾಸ್ ವಿತರಿಸಲು ಕ್ರಮ ಕೈಗೊಳ್ಳಬೇಕು. ಸಮಾಜದಲ್ಲಿ ನಡೆಯುತ್ತಿರುವ ಅಂಕುಡೊಂಕುಗಳನ್ನು ತಿದ್ದಿ ನ್ಯಾಯದ ಪರ ಹೋರಾಡುತ್ತಿರುವ ಪತ್ರಕರ್ತರು ಆಕಸ್ಮಿಕವಾಗಿ ಮರಣ ಹೊಂದಿದವರಿಗೆ ಕನಿಷ್ಠ 25 ಲಕ್ಷ ರೂ.ಗಳನ್ನು ಸರ್ಕಾರ ವತಿಯಿಂದ ಪರಿಹಾರ ರೂಪದಲ್ಲಿ ನೀಡಬೇಕು.
ಬೇಡಿಕೆಗಳು :-
1) ಮೀಡಿಯಾ ಕಿಟ್ ಗೆ ಎಸ್ಸಿ,ಎಸ್ಪಿ ವರ್ಗದವರೊಳಗೊಂಡಂತೆ ಎಲ್ಲಾ ವರ್ಗದ ಪತ್ರಕರ್ತರನ್ನು ಪರಿಗಣಿಸಬೇಕು.
ಒಬ್ಬ ಪತ್ರಕರ್ತರ ಉಚಿತ ಬಸ್ ಪಾಸ್‌ವಿತರಣೆಗೆ ಸರ್ಕಾರ ನೀಡಿರುವ ಷರತ್ತುಗಳನ್ನು ಸಡಿಲಗೊಳಿಸಿ ರಾಜ್ಯದ ಎಲ್ಲಾ ಮಟ್ಟದ ಪತ್ರಕರ್ತರಿಗೂ ಬಸ್ ಪಾಸ್ ವಿತರಣೆಗೆ ಕ್ರಮ ಕೈಗೊಳ್ಳಬೇಕು.
3) ಸರ್ಕಾರದ ನಾಲ್ಕನೇ ಅಂಗವಾಗಿ ಕಾರ್ಯ ನಿರ್ವಹಿಸುತ್ತಿರುವ ಪತ್ರಿಕಾ ರಂಗದಲ್ಲಿ ಆಕಸ್ಮಿಕವಾಗಿ ಮರಣ ಹೊಂದಿದ್ದ ಪತ್ರಕರ್ತರಿಗೆ 25 ಲಕ್ಷ ರೂ.ಗಳನ್ನು ಸರ್ಕಾರ ನೀಡಬೇಕು.
4) ವಾರ್ತ ಇಲಾಖೆಯಿಂದ ಪತ್ರಕರ್ತರ ಸದಸ್ಯತ್ವ ನೊಂದಣಿ ನಿಯಮಗಳನ್ನು ಸರಳೀಕರಣಗೊಳಿಸಿ ‘ಗ್ರಾಮೀಣ ಬಿಡಿ ಸುದ್ದಿ ಸಂಗ್ರಹಗಾರರಿಗೂ ಅವಕಾಶ ಕಲ್ಪಿಸಬೇಕು.
ಈ ಸಂದರ್ಭದಲ್ಲಿ ಅಧ್ಯಕ್ಷರು ಅಣ್ಣೋಜಿ ರಾವ್, ಶಿವಲಿಂಗಪ್ಪ,ಶಶೀಂದ್ರ, ಕಾಶಿ ಸ್ವಾಮಿ,..
ವರದಿ. ಯುವರಾಜ್ ಹೊನ್ನಾಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030