ರೈತರ ಪಹಣಿಯಲ್ಲಿ ವಕ್ಫ್ ಭೋರ್ಡ ಹೆಸರು ರೈತರ ಆಕ್ರೋಶ…!!!

Listen to this article

ರೈತರ ಪಹಣಿಯಲ್ಲಿ ವಕ್ಫ್ ಭೋರ್ಡ ಹೆಸರು ರೈತರ ಆಕ್ರೋಶ

ಹೊನ್ನಾಳಿ ಪಟ್ಟಣದಲ್ಲಿ 06-11-24, ಬುಧವಾರ ರಂದು
ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಹೊನ್ನಾಳಿ ಮತ್ತು ನ್ಯಾಮತಿ ವಿಧಾನ ಸಭಾ ಕ್ಷೇತ್ರದ ಎಲ್ಲಾ ರೈತ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ವಕ್ಫ್ ಬೋರ್ಡ್ ರೈತರ ಆಸ್ತಿಯನ್ನು ಕಬಳಿಸುತ್ತಿರುವುದರ ವಿರುದ್ಧ ಇಂದು ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ನಂತರ ತಾಲ್ಲೂಕ್ ಕಚೇರಿಯವರೆಗೆ ಪಾದಯಾತ್ರೆ ಮುಖಾಂತರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ನಮ್ಮ ಭೂಮಿ ನಮ್ಮ ಹಕ್ಕು ಇದು ವಕ್ಫ್ ಮಂಡಳಿಯ ಆಸ್ತಿಯಲ್ಲ ಎಂದು ಘೋಷಣೆ ಕೂಗುತ್ತಾ ರಕ್ತವನ್ನು ಕೊಟ್ಟೆವು ಭೂಮಿಯನ್ನು ಬಿಡೆವು ಎಂದು ಘೋಷಣೆ ಕೂಗುತ್ತಾ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಾ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು
ನಮ್ಮ ದೇಶದಲ್ಲಿ ಒಂದೆ ಸಂವಿಧಾನದ ಇರಬೇಕು ಅದರ ( ಎಲ್ಲರಿಗೂ ಒಂದೇ ನ್ಯಾಯ ) ಪ್ರಕಾರವೇ ಆಡಳಿತ ನಡೆಸಬೇಕು ನಮ್ಮ ಪೂರ್ವಜರ ಭೂಮಿ ನಮ್ಮದಾಗಿಯೆ ಇರಬೇಕು ಅದನ್ನ ಕಬಳಿಸುವ ಹಕ್ಕು ಅನ್ಯರಿಗೆ ಇರಬಾರದು , ಹಾಗೆಯೇ ಮಾನ್ಯ ಮುಖ್ಯಮಂತ್ರಿಗಳು ನೋಟಿಸ್ ಹಿಂಪಡೆಯುವದಾಗಿ ಹೇಳಿದ್ದರು ಅದು ಅಧಿಕೃತ ವಾಗಿ ಜಾರಿಯ ಆಗಬೇಕು ಆಡಳಿತ ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ ಶಾಸಕಾಂಗ ಮತ್ತು ಕಾರ್ಯಾಂಗ ವ್ಯವಸ್ಥೆಯಲ್ಲಿ ಸಾಮ್ಯತೆ ಕಂಡು ಬರುತ್ತಿಲ್ಲ ಅದು ಸರಿಯಾಗ ಬೇಕು ಕೂಡಲೇ ಅವಳಿ ತಾಲ್ಲೂಕಿನಲ್ಲಿ ಯಾವುದೆ ರೈತರ ಪಹಣಿಯಲ್ಲಿ ಯಾವುದೇ ಬದಲಾವಣೆ ಯಾಗಿದ್ದಲ್ಲಿ ಸರಿಪಡಿಸಬೇಕು ಹಾಗೂ ಯಾವುದೇ ಆಸ್ತಿಯನ್ನು ಅಕ್ರಮೀಸುವಾ ಅಧಿಕಾರವನ್ನು ವಕ್ಫ್ ಭೋರ್ಡ್ ಗೆ ಕೊಟ್ಟಿರುವ ಅಧಿಕಾರವನ್ನ ಕಾನೂನಿನ ಪ್ರಕಾರ ತಿದ್ದುಪಡಿ ತರಬೇಕು ಎಂದು ಆಗ್ರಹಿಸಿದರು ಈ ಸಂದರ್ಭದಲ್ಲಿ ನ್ಯಾಮತಿ ಮತ್ತು ಹೊನ್ನಾಳಿ ಅವಳಿ ತಾಲ್ಲೂಕಿನ ಗ್ರಾಮದ ರೈತರು ಭಾಗವಹಿಸಿ ಉಪ ವಿಭಾಗಾಧಿಕಾರಿಗಳದಾ ಅಭಿಷೇಕ್ ವಿ ಇವರಿಗೆ ಮನವಿಯನ್ನು ಸಲ್ಲಿಸಿದರು ಈ ಮನವಿಯನ್ನು ಪರಿಶೀಲಿಸಿ ರೈತರಿಗೆ ಅನುಕೂಲವಾಗುವ ರೀತಿ ಆದೇಶವನ್ನು ಕೇಂದ್ರ ಸರ್ಕಾರ ಕೂಡಲೇ ತಿದ್ದುಪಡಿ ಮಾಡಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಆಗ್ರಹಿಸಿದರು ಈ ಒಂದು ಸಂದರ್ಭದಲ್ಲಿ ರೈತ ಸಂಘದ ಮುಖಂಡರಾದ ಕರಿಬಸಪ್ಪ ಗೌಡ್ರು ಕರ್ನಾಟಕ ರಾಜ್ಯ ರೈತ ಸಂಘದ ಹಸಿರು ಸೇನೆ , ಕೆ.ಸಿ ಬಸಪ್ಪ ಅಖಂಡ ರೈತ ಸಂಘ ಹೊನ್ನಾಳಿ ತಾಲ್ಲೂಕು ಅಧ್ಯಕ್ಷರು, ಕರಿಬಸಪ್ಪ ಸುಂಕದಕಟ್ಟೆ ಜಿಲ್ಲಾ ಕಾರ್ಯದರ್ಶಿ ಅಖಂಡ ಕರ್ನಾಟಕ ರೈತ ಸಂಘ, ಬಸವರಾಜಪ್ಪ ಹಿರೇಮಠ ಗೌರವಾಧ್ಯಕ್ಷರು ಅಖಂಡ ರೈತ ಸಂಘ ಹೊನ್ನಾಳಿ, ಬಸವರಾಜಪ್ಪ ದೊಡ್ಡೇರಿ ಕರ್ನಾಟಕ ರಾಜ್ಯ ರೈತ ಹಸಿರು ಸೇನೆ ತಾಲ್ಲೂಕು ಅಧ್ಯಕ್ಷರು, ಕುರುವ ಗಣೇಶಪ್ಪ ಕಾರ್ಯಅಧ್ಯಕ್ಷರ ನ್ಯಾಮತಿ , ಉಮೇಶ್ ಬೆಳಗುತ್ತಿ ನಾಗಪ್ಪ ದಲಿತ ಸಂಘಟನೆಯ ಅನೇಕ ಮುಖಂಡರು ಸಂಘದ ಕಾರ್ಯಕರ್ತರು ಭಾಗಿಯಾಗಿದ್ದರು..

ವರದಿ. ಯುವರಾಜ್ ಹೊನ್ನಾಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend