ರೈತರ ಜಮೀನಿಗೆ ಕಂಟಕ ವಾದ ವಕ್ಫ್ ಬೋರ್ಡ್ ವಿರುದ್ಧ ಹೊನ್ನಾಳಿ ತಾಲ್ಲೂಕು ಬಿಜೆಪಿ ಘಟದದಿಂದ ಪ್ರತಿಭಟನೆ…
ಹೊನ್ನಾಳಿ : ವಕ್ಫ್ ಆಸ್ತಿ ವಿಚಾರವಾಗಿ ಜಿಲ್ಲಾಡಳಿತ ರೈತರಿಗೆ ಕೊಟ್ಟಿರುವ ನೋಟೀಸ್ ಹಿಂಪಡೆಯುವ ಬದಲು ವಕ್ಸ್ ಮಂಡಳಿಯನ್ನೇ ರದ್ದು ಮಾಡಬೇಕು ಎಂದು ತಾಲೂಕು ಬಿಜೆಪಿ ಅಧ್ಯಕ್ಷರಾದ ಜೆ.ಕೆ.ಸುರೇಶ್ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ರೈತರ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಿಸಿರುವುದನ್ನು ಖಂಡಿಸಿ ಹಿರೇ ಕಲ್ಮಠದಿಂದ ತಾಲೂಕು ಕಚೇರಿಯ ವರೆಗೂ ಪ್ರತಿಭಟನೆ ನಡೆಸಲಾಯಿತು ಹಾಗೂ ವಕ್ಫ್ ಮಂಡಳಿಯನ್ನೇ ರದ್ದು ಮಾಡಬೇಕು ಎಂದು ಒತ್ತಾಯಿಸಿ ಸೋಮವಾರ ತಾಲೂಕು ಬಿಜೆಪಿ ಘಟಕದಿಂದ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ತಾಲೂಕಿನ ಸುಂಕದಕಟ್ಟೆ, ಟಿ.ಬಿ.ವೃತ್ತ ಹಾಗೂ ದಿಡಗೂರು ಹರಳಹಳ್ಳಿ ಸೇರಿದಂತೆ ರಾಜ್ಯದ ಉದ್ದಗಲಕ್ಕೂ ರೈತರ ಪಹಣಿಯಲ್ಲಿ ವಕ್ಫ್, ಆಸ್ತಿ ಎಂದು ನಮೂದಿಸಿರುವ ಹಿಂದೆ ಸಚಿವ ಜಮೀರ್ ಆಹ್ಮದ್ ಕೈವಾಡ ಇದೆ. ಕೂಡಲೇ ರೈತರ ಆಸ್ತಿಗೆ ಖನ್ನ ಹಾಕಲು ಹೊರಟಿರುವ ಸಚಿವ,ಸಚಿವ ಜಮೀರ್ ಅಹ್ಮದ್‌ನನ್ನು ,ಸಂಪುಟದಿಂದ ಕೈಬಿಡಬೇಕು ಎಂದು ಆಗ್ರಹಿಸಿದರು.ಬಿಜಾಪುರದಿಂದ ಆರಂಭಗೊಂಡ ವಕ್ಫ್ ಆಸ್ತಿ ವಿವಾದ ಇದೀಗ ಇಡೀ ರಾಜ್ಯಕ್ಕೆ ವ್ಯಾಪಿಸಿದೆ. ಇದರಿಂದ ನಮ್ಮ ಜಮೀನು ಎಲ್ಲಿ ವಕ್ಫ್ ಆಸ್ತಿ ಎಂದು ನಮೂದಿಸಿದಿಯೇ ಎಂಬ ಆತಂಕ ರೈತರನ್ನು ಕಾಡುತ್ತಿದೆ. ಕೇಂದ್ರ ಸರ್ಕಾರ ವಕ್ಫ್ ಮಂಡಳಿ ರದ್ದು ಮಾಡುವ ಮಸೂದೆಯನ್ನು ಕೂಡಲೆ ಜಾರಿಗೆ ತರಬೇಕೆಂದು ಮನವಿ ಮಾಡಿದರು.
ಬಿಜೆಪಿಯ ಜಿಲ್ಲಾ ಕಾರ್ಯದರ್ಶಿ ಅರಕೆರೆ ನಾಗರಾಜ್, ತಾಲೂಕು ಪ್ರಧಾನ ಕಾರ್ಯದರ್ಶಿ ಟಿ, ಪಿ, ಶಿವಾನಂದ, ನೆಲಹೊನ್ನೋ ಮಂಜುನಾಥ, ಬಿ.ಎಲ್.ಕುಮಾರಸ್ವಾಮಿ
ಟಿ, ಜಿ,ರಮೇಶ್‌ಗೌಡ, ಜಿ.ಪಂ. ಮಾಜಿ ಉಪಾಧ್ಯಕ್ಷ ಸುರೇಂದ್ರನಾಯ್ಕ, ಎಂ.ಪಿ.ರಾಜು, ಮಹೇಂದ್ರಗೌಡ, ನ್ಯಾಮತಿ ರವಿಕುಮಾರ್, ರಾಜು ಪಲ್ಲವಿ, ಅನಿಲ್, ಮಾರುತಿನಾಯ್ಕ, ಪುರಸಭೆ ಮಾಜಿ ಅಧ್ಯಕ್ಷ ಕೆ.ವಿ.ಶ್ರೀಧರ್, ಜುಂಜಾನಾಯ್ಕ ಅನೇಕ, ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದರು…
ವರದಿ, ಯುವರಾಜ್, ಹೊನ್ನಾಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030