ಹೊನ್ನಾಳಿ: ಹೊನ್ನಾಳಿ ಮತ್ತು ಶಿವಮೊಗ್ಗ. ಹೋಗುವುದು ಹರಸಾಹಸ ಪಡುವಂತಾಗಿದೆ
ಹೊನ್ನಾಳಿ ತಾಲೂಕು ಬರುತ್ತಿದ್ದಂತೆ ರಸ್ತೆ ತುಂಬಾ
ಗುಂಡಿಗಳ ರಾಶಿ ವಾಹನ ಸವಾರರು
ಮತ್ತು ದ್ವಿಚಕ್ರವಾಹನ ಸವಾರರಿಗೆ ಶಿವಮೊಗ್ಗದವರೆಗೂ ಗೋಳು ಕೇಳುವವರೇ ಇಲ್ಲ.
ಸಂಪರ್ಕ ಕಲ್ಪಿಸುವ 25 ಕಿ.ಮೀ. ದೂರದ ರಾಜ್ಯ ಹೆದ್ದಾರಿಯಲ್ಲಿ ಬಿದ್ದಿರುವ ಗುಂಡಿಗಳಿಂದ ವಾಹನಗಳು ನರ್ತನ ಮಾಡುತ್ತಿವೆ. ಇದರಿಂದ ಪ್ರಯಾಣಿಕರು ಜೀವ ಕೈಯಲ್ಲಿ ಹಿಡಿದು ಪ್ರಯಾಣಿಸುವಂತಾಗಿದೆ.! ಜನರ ಬದುಕು
ಹೌದು, ಹರಿಹರ ಮತ್ತು ಶಿವಮೊಗ್ಗ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ರಸ್ತೆ ಹೊನ್ನಾಳಿ ಮೂಲಕ ಹಾದು ಹೋಗಿದೆ. ಪ್ರತಿನಿತ್ಯ ಸಾವಿರಾರು ವಾಹನಗಳು. ಓಡಾಡುತ್ತಿವೆ. ಎರಡು ತಿಂಗಳಿಂದ ಸುರಿದ ಧಾರಾಕಾರ ಮಳೆಯಿಂದಾಗಿ ಹೊನ್ನಾಳಿಯಿಂದ ಕೃಷ್ಣಪ್ಪನಗರ ದಿಂದ, ದಿಡಗೂರು, ಹರಳಹಳ್ಳಿ, ಗೋವಿನಕೋವಿ, ಚೀಲೂರು, ಟಿ. ಗೋಪಗೊಂಡನಹಳ್ಳಿ ಹೊಳಲೂರು ಗ್ರಾಮಗಳವರೆಗೆ ಸುಮಾರು 30
ಕಿ.ಮೀ. ದೂರ ರಸ್ತೆಯಲ್ಲಿ ಗುಂಡಿಗಳದ್ದೇ ರಾಜ್ಯಭಾರ ಸದ್ದಾಗಿದ್ದು, ಗುಂಡಿಗಳನ್ನು ತಪ್ಪಿಸಲು ವಾಹನದ ಮತ್ತು ಮಾಲೀಕರು ಮತ್ತು ಚಾಲಕರಿಗೆ ಹರಸಾಹಸ ಪಡುವಂತಾಗಿದೆ.
ತಾಲೂಕಿನ ಚೀಲೂರು ಗ್ರಾಮದ ಪಕ್ಕ ಕೆರೆ ಏರಿಯಲ್ಲಿರುವ ರಸ್ತೆಯ ಮಧ್ಯೆ ಭಾಗದಲ್ಲಿ ಒಂದು ಅಡಿಯಷ್ಟು ಗುಂಡಿ ಬಿದ್ದರೂ ಐದಾರು ತಿಂಗಳಿಂದ ಈ ರಸ್ತೆಯಲ್ಲಿ ರಾಜ್ಯಕಾರಣಿಗಳು ಅಧಿಕಾರಿಗಳು ಇತ್ತ ಕಡೆ ಗಮನ ಹರ್ಷದಿರುವುದು ಇರುವುದು ಗುಂಡಿಗಳನ್ನು ಮುಚ್ಚುವ ಪ್ರಕ್ರಿಯೆ • ನಡೆದಿಲ್ಲ. ವಾಹನ ಚಾಲಕರಿಗೆ ಆಯಾ ತಪ್ಪಿದರೆ ವಾಹನಗಳು ಕೆರೆಗೆ ಬಿಳುವ ಸಾಧ್ಯತೆಗಳೇ ಹೆಚ್ಚಾಗಿದೆ.
ದಾವಣಗೆರೆ ಹೋಗುವ ಮಾರ್ಗ ದಲ್ಲಿ
ತಾಲೂಕಿನ ಮಾಸಡಿ ಗ್ರಾಮದ ಬಳಿ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ದಾಟುವಂತಿಲ್ಲ. ಇಲ್ಲಿ ಪೊಲೀಸ್ ಇಲಾಖೆಯಿಂದ ಬ್ಯಾರಿಕೇಡ್ ಹಾಕಿದ್ದು, ಎರಡು ಬದಿಯಿಂದ ಬರುವ ವಾಹನಗಳು ನಿಂತು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.
‘ಕಣ್ಮುಚ್ಚಿ ಕುಳಿತ ಜನಪತ್ರಿನಿಧಿಗಳು: ಅಧಿಕಾರಿಗಳು,
ಈ ರಸ್ತೆಯಲ್ಲಿ ಓಡಾಡದಂತಹ ವಾಹನಗಳು ಪರಿಸ್ಥಿತಿ ಹೇಳಲಾಗದಷ್ಟು ಕೆಟ್ಟು ನಿರ್ಮಾಣವಾಗಿದ್ದರೂ, ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಇತ್ತ ಗಮನ ಹರಿಸಿಲ್ಲ. ಅಲ್ಲದೇ, ಈ ರಸ್ತೆಯಲ್ಲಿ ಓಡಾಡಿದರೂ ನೋಡಿಯು ನೋಡದಂತೆ ವರ್ತಿಸುತ್ತಿರುವುದಕ್ಕೆ ಈ ಭಾಗದ ಗ್ರಾಮಸ್ಥರು, ವಾಹನ ಈ ಭಾಗದ ಶಾಸಕರಿಗೆ ಚಾಲಕರು ಹಿಡಿಶಾಪ ಹಾಕುತ್ತಿದ್ದಾರೆ.
ಜಿಲ್ಲಾಧಿಕಾರಿಗಳು ಕಳೆದ ತಿಂಗಳಲ್ಲಿ ಎರಡು ಬಾರಿ ಹೊನ್ನಾಳಿಗೆ ಭೇಟಿ ನೀಡಿದ್ದಾರೆ. ರಸ್ತೆ ಗುಂಡಿಗಳನ್ನು ನೋಡಿಯು ನೋಡದಂತೆ ಹೋಗಿದ್ದಾರೆ. ಕನಿಷ್ಠ ರಸ್ತೆ ಗುಂಡಿಗಳನ್ನು ಮುಚ್ಚಿ ಸಂಬಂಧಪಟ್ಟ ದುರಸ್ತಿಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸುವಂತೆ ಎಂಬುದು ಸಾರ್ವಜನಿಕರ ಗಂಭೀರ ಆರೋಪ. ಮಾಡಿದ್ದಾರೆ
ರಾತ್ರಿ ವೇಳೆ ದ್ವಿಚಕ್ರ ವಾಹನಗಳ ಸವಾರರು ಗುಂಡಿಗಳಲ್ಲಿ ಬಿದ್ದು ಕೈಕಾಲುಗಳನ್ನು ಮುರಿದುಕೊಂಡುಆಸ್ಪತ್ರೆಗಳಿಗೆ ದಾಖಲಾಗಿರುವ ಹಲವಾರು ಘಟನೆಗಳು ನಡೆದಿವೆ. ಅಷ್ಟೇ ಅಲ್ಲ, ಗುಂಡಿಗೆ ಬಿದ್ದಿರುವ ವಾಹನಗಳ ಟೈರ್‌ಗಳು ಪಂಚರ್ ಆಗಿ ರಾತ್ರಿಯಿಡೀ ಜಾಗರಣೆ ಮಾಡಿರುವ ಉದಾಹರಣೆಗಳು ಇವೆ.
ಈ ರಾಜ್ಯ ಹೆದ್ದಾರಿ ಮಾರ್ಗದ ಶಿವಮೊಗ್ಗ ಜಿಲ್ಲೆಯ ಗಡಿ ಭಾಗ ಮತ್ತು ಹರಿಹರ ತಾಲೂಕಿನ ಗಡಿ ಭಾಗದವರೆಗೆ ರಸ್ತೆ ಉತ್ತಮವಾಗಿದೆ. ಆದರೆ ಹೊನ್ನಾಳಿಯಿಂದ ಶಿವಮೊಗ್ಗಕ್ಕೆ ಸಂಪರ್ಕ ಕಲ್ಪಿಸುವ ಸುಮಾರು 30,ಕಿ.ಮೀ. ದೂರದ ರಸ್ತೆಯಲ್ಲಿ ಗುಂಡಿಗಳು ಬಿದ್ದು ರಸ್ತೆ ಹಾಳಾಗಿದೆ. ಆದರೆ ಪ್ರತಿನಿತ್ಯ ಸಾವಿರಾರು ವಾಹನಗಳು ಓಡಾಡುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ರಸ್ತೆ ದುರಸ್ತಿ ಮಾಡದಿರುವುದು ಕಂಡು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ…
ವರದಿ. ಯುವರಾಜ್ ಹೊನ್ನಾಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030