ಹೊನ್ನಾಳಿ 71ನೇ ಸಹಕಾರ ಸಪ್ತವನ್ನು ಗೊಲ್ಲರಹಳ್ಳಿಯ ತರಳಬಾಳು ಸಮುದಾಯ ಭವನದಲ್ಲಿ ಆಯೋಜನೆ ಮಾಡಲಾಯಿತು
ಮಾಜಿ ಪ್ರಧಾನಿ ಜವಾಹರಲಾಲ್ ನೇಹರೂ ಜನ್ಮ ದಿನಾಚರಣೆ ಅಂಗವಾಗಿ ನ.14ರಿಂದ ನ.20ರವರೆಗೆ ದೇಶದಲ್ಲಿ ಸಹಕಾರ ಸಪ್ತಾಹ ಆಚರಿಸಲಾಗುತ್ತಿದೆ ಎಂದು ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.
ತಾಲೂಕಿನ ಗೊಲ್ಲರಹಳ್ಳಿಯ ತರಳುಬಾಳು ಸಮುದಾಯ ಭವನದಲ್ಲಿ ಶುಕ್ರವಾರ 71ನೇ ಅಖಿಲ ಭಾರತ ಸಹಕಾರ,ಸಪ್ತಾಹ-2024 ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸಹಕಾರ ಸಂಘಗಳಲ್ಲಿ ಮಹಿಳೆಯರ ಪಾತ್ರ ಹಿರಿದಾ ಗಿದ್ದು, ಸಹಕಾರ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಹಕಾರ ಸಂಘಗಳು ನೌಕರಿಯಲ್ಲಿದ್ದವರ ಹಾಗೂ ಶ್ರೀಮಂತರ ಸಾಲಗಳನ್ನು ಮೊದಲು ವಸೂಲು ಮಾಡಬೇಕು. ಅನಂತರ ರೈತರ ಸಾಲ ವಸೂಲು ಮಾಡುವಂತೆ ಸಲಹೆ ನೀಡಿದರು.
ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಕೋಗುಂಡಿ ಬಕ್ಕೇಶಪ್ಪ, ಜಿಲ್ಲಾ ಸಹಕಾರ ಒಕ್ಕೂಟ ಅಧ್ಯಕ್ಷ ಸಿರಿಗೆರೆ ರಾಜಣ್ಣ, ಡಿಸಿಸಿ ಬ್ಯಾಂಕ್ ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ಕೆ.ಎನ್. ನಂಜುಂಡೇಗೌಡ, ಡಿಸಿಸಿ ಬ್ಯಾಂಕ್ ನಿರ್ದೇಶಕ ಡಿ.ಜಿ. ವಿಶ್ವನಾಥ್, ಶಿಮುಲ್ ನಿರ್ದೇಶಕ ಬಸವರಾಜಪ್ಪ ಮಾತನಾಡಿದರು.ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಕೆ.ಎಚ್.ಷಣ್ಮುಖಪ್ಪ ಅಧ್ಯಕ್ಷತೆ ವಹಿಸಿದ್ದರು. ಎಸ್‌ಎಂಎಫ್‌ಸಿ ಕಾಲೇಜು ಪ್ರಾಂಶುಪಾಲ ಪ್ರವೀಣ್ ದೊಡ್ಡಗೌಡ ಉಪನ್ಯಾಸ ನೀಡಿದರು. ಶಿಮುಲ್ ಉಪಾಧ್ಯಕ್ಷ ಚೇತನ್ ನಾಡಿಗೇರ್, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಡಿ.ಎಸ್.ಸುರೇಂದ್ರ ಗೌಡ, ಎಚ್.ಕೆ.ಬಸಪ್ಪ, ಶಿಮುಲ್ ನಿರ್ದೇಶಕ ಜಗದೀಶಪ್ಪ ಬಣಕಾರ್, ತಾಲೂಕು ಹಾಗೂ ಪಟ್ಟಣದ ವಿವಿಧ ಸಹಕಾರ ಸಂಘಗಳ ಅಧ್ಯಕ್ಷರು ಉಪಸ್ಥಿತರಿದ್ದರು. ಬ್ಯಾಂಕ್ ಕ್ಷೇತ್ರಾಧಿಕಾರಿ ವಿಜಯಕುಮಾರ್ ಸ್ವಾಗತಿಸಿ, ಶಿವ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಕಾರ್ಯದರ್ಶಿ ರುದ್ರೇಶ್ ನಿರೂಪಿಸಿದರು. ಮಾಡಿದರು ಈ ಸಂದರ್ಭದಲ್ಲಿ ಅನೇಕ ಸಹಕಾರ ಸಂಘದ ಕಾರ್ಯ ನಿರ್ವಹಿಸುವ ಸದಸ್ಯರುಗಳು ಭಾಗವಹಿಸಿದ್ದರು..
ವರದಿ. ಯುವರಾಜ್, ಹೊನ್ನಾಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030