ಹೂವಿನಹಡಗಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಸದ್ಬಳಕೆ ಮಾಡಿಕೊಳ್ಳಿ ತಿಲಕರಾಜ್…

ವರದಿ. ಧನಂಜಯ್
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸದ್ಭಳಕೆ ಮಾಡಿಕೊಳ್ಳಿ: ತಿಲಕರಾಜ್.
 ಹೂವಿನ ಹಡಗಲಿ: ಪಟ್ಟಣದ 18 ನೆಯ ವಾರ್ಡ ರಾಜೀವನಗರದ ಅಂಗನವಾಡಿ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೂವಿನಹಡಗಲಿ ವತಿಯಿಂದ ಸ್ವ ಸಹಾಯ ಸಂಘಗಳ ಅಭಿವೃದ್ಧಿ ಪಥದತ್ತ ಕೊಂಡೊಯ್ದ ಈ ಸಂಘಕ್ಕೆ ಗೌರವಾಭಿನಂದನೆ ಸಲ್ಲಿಸಿ, ಮಾತನಾಡಿದ ತಾಲೂಕು ಯೋಜನಾಧಿಕಾರಿ ತಿಲಕರಾಜ್ “ತಾಲೂಕಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದ್ಭಳಕೆ ಮಾಡಕೊಂಡಿರುವ,ಹಾಗೂ ಅತಿ ಹೆಚ್ಚು ವ್ಯವಹಾರ ನಡೆಸಿದ ಸ್ವ ಸಹಾಯ ಸಂಘ ಇದಾಗಿದೆ ಎಂದರು.                                ಸಂಘದಿಂದ ಬರುವ ಹಣದಿಂದ ವಿವಿಧ ಚಟುವಟಿಕೆಗಳಾದ ಕೊಳಿ ಸಾಕಾಣಿಕೆ, ಕುರಿ ಸಾಕಾಣಿಕೆ, ಹೈನುಗಾರಿಕೆ, ಮಹಿಳೆಯರು ಸೀರೆಗಳಿಗೆ ಡಿಸೈನ್ ಕರಕುಶಲತೆ ತೊಡಗಿಕೊಂಡು, ವಿವಿಧ ಉದ್ಯೋಗದ ಮೂಲಕ ಈ ಯೋಜನೆಯ ಸದ್ಭಳಕೆ ಮಾಡಿಕೊಂಡ ಸಂಘವೆಂದು ಹೆಮ್ಮೆಯಿಂದ ಹೇಳಬಹುದು. ಮುಂದಿನ ದಿನಮಾನಗಳಲ್ಲಿ ಈ ಸಂಘದಿಂದ ಹಣ ಪಡೆದು ಆರ್ಥಿಕ ಅಭಿವೃದ್ಧಿ ಹೊಂದಿ, ಸಮಾಜದಲ್ಲಿ ಗುರುತಿಸಿಕೊಳ್ಳುವ ನಿಟ್ಟಿನಲ್ಲಿ ನೀವು ಜವಾಬ್ದಾರಿಯಿಂದ ಸಂಘವನ್ನು ಬಹು ಎತ್ತರಕ್ಕೆ ಕೊಂಡೊಯ್ದ ಈ ಸಂಘಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಾಯ, ಸಹಕಾರ,ನೆರವು ಸದಾ ಕಾಲ ಇರುತ್ತದೆ ಎಂದು ಹೇಳಿದರು.”
 ಕ.ದ.ಸಂ.ಸ.ತಾಲೂಕು ಸಂಚಾಲಕಿ ಕೆ. ಲಲಿತಮ್ಮ ಮಾತನಾಡಿ ” ಮಹಿಳೆಯರು ಈ ಸಂಘದಿಂದ ಆರ್ಥಿಕ ಚುಕ್ಕಾಣಿ ಹಿಡಿದು, ಈ ಸಂಸ್ಥೆಯಿಂದ ಶಕ್ತಿ ಪಡೆದಿದ್ದಾರೆ. ಮಹಿಳೆಯರು, ನಾಲ್ಕು ಗೋಡೆಯ ಮದ್ಯೆ ಜೀವನ ನಡೆಸದೆ, ಅದರಾಚೆ ಬಂದು ವಿವಿಧ ಯೋಜನೆಗಳ ಸದುಪಯೋಗ ಪಡೆದುಕೊಂಡು, ಗ್ರಾಮೀಣ ಮಟ್ಟದಿಂದ ಹಿಡಿದು, ನಗರಗಳಲ್ಲಿ ಕೂಡಾ ಬಹುತೇಕ ಮಹಿಳೆಯರು, ಸಾಧನೆಯ ಶಿಖರ ಮುಟ್ಟಿದ್ದಾರೆ.ಮಹಿಳೆ ಅಬಲೆ ಅಲ್ಲ, ಸಬಲೆ ಎಂಬುದನ್ನು ಇಂದಿನ ದಿನಗಳಲ್ಲಿ ಮಹಿಳೆಯರು ಪ್ರತಿಯೊಂದು ಕ್ಷೇತ್ರಗಳಲ್ಲಿ ಗಣನೀಯ ಪ್ರಮಾಣದಲ್ಲಿ ಸಾಧಿಸಿದ್ದಾರೆ.ನಮ್ಮ ಸಂಘವನ್ನು ಗೌರವಿಸಿದ್ದು, ಹಬ್ಬದ ವಾತಾವರಣವನ್ನುಂಟು ಮಾಡಿದೆ ಎಂದು ಹೇಳಿದರು”.                             ಈ ಸಂದರ್ಭದಲ್ಲಿ ನಾಗತಿಬಸಾಪುರ ವಲಯ ಮೇಲ್ವಿಚಾರಕರು ನಾಗರತ್ನ, ಸೇವಾ ಪ್ರತಿನಿಧಿ ಟಿ.ದಡಾರಮ್ಮ, ಹಾಗೂ ಸ್ವ ಸಹಾಯ ಸಂಘಗಳ ಮಹಿಳೆಯರಾದ ನೀಲಮ್ಮ, ಅಂಜಿನಮ್ಮ, ಜರನಾಬೇಗಂ, ಎಂ.ಶಿಲ್ಪಾ, ಅಕ್ತರಭಾಮ,ಪಕ್ರುಮಾಬಿ, ಶಕುಂತಲಾ, ಖಾಸಿಂಬೀ,ಲಕ್ಷ್ಮೀ, ಇತರರು ಉಪಸ್ಥಿತರಿದ್ದರು.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *