ದುಡಿಯೋಣ ಬಾ ಅಭಿಯಾನ, ಆರೋಗ್ಯ ಶಿಬಿರ, ಉದ್ಯೋಗ ಚೀಟಿ ಪರಿಷ್ಕರಣೆ ಹಾಗೂ ಸ್ತ್ರೀ ಚೇತನ ಅಭಿಯಾನಕ್ಕೆ ಚಾಲನೆ…!!!

ದುಡಿಯೋಣ ಬಾ ಅಭಿಯಾನ, ಆರೋಗ್ಯ ಶಿಬಿರ, ಉದ್ಯೋಗ ಚೀಟಿ ಪರಿಷ್ಕರಣೆ ಹಾಗೂ ಸ್ತ್ರೀ ಚೇತನ ಅಭಿಯಾನಕ್ಕೆ ಚಾಲನೆ…
ಹೂವಿನಹಡಗಲಿ ಕ್ಷೇತ್ರದ ವ್ಯಾಪ್ತಿಗೆ ಬರುವ ಗದ್ದಿಕೇರಿ ಗ್ರಾಮ ಪಂಚಾಯತಿ ಪಿ ಡಿ ಓ
ನಿಂಗಪ್ಪ ಎಂ.ಇವರು “ದುಡಿಯೋಣ ಬಾ ಅಭಿಯಾನ, ಆರೋಗ್ಯ ಶಿಬಿರ, ಉದ್ಯೋಗ ಚೀಟಿ ಪರಿಷ್ಕರಣೆ ಹಾಗೂ ಸ್ತ್ರೀ ಚೇತನ ಅಭಿಯಾನಕ್ಕೆ ಚಾಲನೆ” ನೀಡಿ ಮಾತನಾಡಿದರು.
ನರೇಗಾ ಯೋಜನೆಯಡಿ ಕೆಲಸ ಮಾಡುವ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯೋಜನೆಯ ಲಾಭವನ್ನು ಪಡೆದುಕೊಳ್ಳಬೇಕು ಈಗಾಗಲೇ ಸ್ತ್ರೀಚೇತನ, ಕೆಲಸದ ಬೇಡಿಕೆ, ಅಭಿಯಾನದ ಮೂಲಕ ಜಾಗೃತಿ, ಜಿಲ್ಲೆಯಲ್ಲಿ ಜಾಗೃತಿ ಕಾರ್ಯಕ್ರಮ ಕೈಗೊಂಡಿದ್ದು. *ದುಡಿಯೋಣ ಬಾ* ಅಭಿಯಾನವು ಇದಕ್ಕೆ ಪೂರಕವಾಗಲಿದೆ.”ಅಭಿಯಾನದಡಿ ಮೇ ತಿಂಗಳಲ್ಲಿ ಎಲ್ಲಾ ಕೂಲಿಕಾರರಿಗೂ ನಿರಂತರವಾಗಿ ಎಲ್ಲಾ ಕುಟುಂಬಗಳಿಗೆ 100 ದಿನ ಕೆಲಸ ನೀಡುವುದು.. ಬೇಸಿಗೆಕಾಲ ಹೆಚ್ಚಾಗಿರುವುದರಿಂದ ಕೂಲಿಕಾರರು ಆರೋಗ್ಯ ತಪಾಸಣಾ ಶಿಬಿರದಲ್ಲಿ ತಮ್ಮ ಆರೋಗ್ಯದ ಕುರಿತು ಚಿಕಿತ್ಸೆ ಪಡೆಯುವುದು. ಕಾಮಗಾರಿ ಸ್ಥಳದಲ್ಲಿ ಕುಡಿಯುವ ನೀರು, ಪ್ರಥಮ ಚಿಕಿತ್ಸಾ ಸೌಲಭ್ಯ, ನೆರಳಿನ ವ್ಯವಸ್ಥೆ ಕಲ್ಪಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ತಿಳಿಸಿದರು. ಉದ್ಯೋಗ ಚೀಟಿಯಲ್ಲಿ ಹೆಸರು ನೋಂದಾಯಿಸಿದೆ ಇರುವ 18 ವರ್ಷ ಮೇಲ್ಪಟ್ಟ ಎಲ್ಲರೂ ಉದ್ಯೋಗ ಚೀಟಿಯಲ್ಲಿ ನೋಂದಣಿ ಮಾಡಿಸುವುದು. ಮೃತ ಪಟ್ಟ ವ್ಯಕ್ತಿಗಳು, ಮದುವೆಯಾಗಿ ಬೇರೆ ಊರಿಗೆ ಹೋದವರು ಹೆಸರುಗಳನ್ನು ಉದ್ಯೋಗ ಚೀಟಿಯಿಂದ ತೆಗೆದು ಹಾಕುವುದು ಹಾಗೂ ವಿಶೇಷ ವರ್ಗದ ಜನರಿಗೆ ವಿಶೇಷ ಉದ್ಯೋಗ ಚೀಟಿ ಒದಗಿಸುವ ಕುರಿತು ಮಾಹಿತಿ ನೀಡಿದರು ಒಟ್ಟು 370 ಜನರು ಶಿಬಿರದಲ್ಲಿ ಆರೋಗ್ಯ ತಪಾಸಣೆ ಮಾಡಿಸಿದರು,
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಉಪಾಧ್ಯಕ್ಷರು ಛಲವಾದಿ ರಾಮಪ್ಪ, ಸದಸ್ಯರಾದ ಪೂಜಾರ ಸುರೇಶ್, ಕಾರ್ಯದರ್ಶಿಗಳಾದ ಮಹೇಶ್ವರ , ಎಸ್ ಡಿ ಎ ನಾಗರಾಜ್ , TAE ಗಣೇಶ್ ,, BFT ಮೈಲಪ್ಪ, ಡಿ ಈ ಓ ಈಶ್ವರ ಆರೋಗ್ಯ ಇಲಾಖೆ ಸಿಬ್ಬಂದಿಗಳು, ಗ್ರಾಮ ಪಂಚಾಯತಿ ಸಿಬ್ಬಂದಿಗಳು, ಕಾಯಕ ಬಂಧುಗಳು, ಕೂಲಿಕಾರರು ಉಪಸ್ಥಿತರಿದ್ದರು…


ವರದಿ ಮ್ಯಾಗೇರಿ ಸಂತೋಷ ಹೂವಿನಹಡಗಲಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *