ನಕಲಿ ದಾಖಲೆ ಸೃಷ್ಟಿಸಿ ಮತ್ತು ಸಲ್ಲಿಸಿ ಸರ್ಕಾರಿ ಉದ್ಯೋಗ ಪಡೆದಿರುವ ಅಧಿಕಾರಿಯನ್ನು ಪಂಚಾಯತ್ ರಾಜ್ ಗ್ರಾಮ ಸ್ವರಾಜ್ ಕಾಯ್ದೆ 1993 ಕಾಲಂ 113 ರ ಪ್ರಕಾರ ಯಾವುದೇ ಒಬ್ಬ ಅಧಿಕಾರಿಯೂ ತಪ್ಪು ಮಾಡಿದಾಗ ಅಧಿಕಾರಿಯನ್ನು ತೆಗೆಯುವ ಅಧಿಕಾರ ಗ್ರಾಮ ಪಂಚಾಯಿತಿಗೆ ಇದೆ ಹಾಗಾಗಿ ಸಾಮಾನ್ಯ ಸಭೆಯಲ್ಲಿ ಚರ್ಚೆ ಮಾಡಿ ನಿರ್ಣಯ ತೆಗೆದುಕೊಳ್ಳಬೇಕೆಂದು ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ವಿಜಯನಗರ ಆದೇಶದ 30-11-2024 ರಂದು ನಡೆಯುವ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ನಿರ್ಣಯವನ್ನ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿ ಜಯ ಕರ್ನಾಟಕ ಸಂಘಟನೆ ವತಿಯಿಂದ ಪಿಡಿಒ ಮಾಲವಿ ಅವರ ಅನುಪಸ್ಥಿತಿಯಲ್ಲಿ ಕಂಪ್ಯೂಟರ್ ಆಪರೇಟರ್ ಸಂಗಣ್ಣ ಅವರು ಮನವಿಯನ್ನ ಸ್ವೀಕರಿಸಿದರು ಎಂದು ಜಯ ಕರ್ನಾಟಕ ಸಂಘಟನೆ ಗ್ರಾಮ ಘಟಕ ಶ್ರೀರಾಮನಗರ (ಕೋಗಳಿ ತಾಂಡ)ದ ಗ್ರಾಮ ಘಟಕ ಅಧ್ಯಕ್ಷ ಆರ್ ಪ್ರಕಾಶ್ ಹೇಳಿದರು ಮನವಿಯನ್ನ ಸ್ವೀಕರಿಸಿ ಮಾತನಾಡಿದ ಕಂಪ್ಯೂಟರ್ ಆಪರೇಟರ್ ಸಂಗಪ್ಪಣ್ಣ ಅವರು ನಮ್ಮನೆ ಸಭೆಯಲ್ಲಿ ಚರ್ಚೆ ಮಾಡಲು ಪಿಡಿಓ ಅವರಿಗೆ ನಿಮ್ಮ ಮನವಿಯನ್ನ ಸಲ್ಲಿಸುತ್ತೇನೆ ಎಂದು ಹೇಳಿದರು.ಈ ಸಂದರ್ಭದಲ್ಲಿ ತಾಲೂಕು ಉಪಾಧ್ಯಕ್ಷರು ಪ್ರಕಾಶ ಕೆ
ಸಂಘಟನೆ ಕಾರ್ಯದರ್ಶಿ ಜಾಡರ್ ದುರ್ಗಪ್ಪ, ಚಿಂತ್ರಪಳ್ಳಿ ಮಂಜುನಾಥ್ , ಸದಸ್ಯರು ಕೆ.ಬಿ.ಸಿದೇಶ್ ಇನ್ನು ಮುಂತಾದವರಿದ್ದರು…
ವರದಿ. ಮ್ಯಾಗೇರಿ ಸಂತೋಷ ಹೂವಿನಹಡಗಲಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030