ಮೋರಗೇರಿ ಗ್ರಾ ಪಂ, ಉಪಚುನಾವಣೆಯಲ್ಲಿ ಜಯಶಾಲಿಯಾದ ದಿದ್ಗಿ ಜ್ಯೋತಿ ನಾಗರಾಜ್…
ಹಗರಿಬೊಮ್ಮನಹಳ್ಳಿ ತಾಲೂಕು, ಮೋರಗೇರಿ ಗ್ರಾಮ ಪಂಚಾಯಿತಿ 2ನೇ ಕ್ಷೇತ್ರದ ಸದಸ್ಯ ಸ್ಥಾನಕ್ಕೆ ನ. 23 ರಂದು ನಡೆದ ಉಪಚುನಾವಣೆಯಲ್ಲಿ ದಿದ್ಗಿ ಜ್ಯೋತಿ ನಾಗರಾಜ್ 137 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿದ್ದ ದಿದ್ಗಿ ಅಂಜಿನಮ್ಮ ಜಗನ್ನಾಥ್ ಅಕಾಲಿಕ ಮರಣದಿಂದ ತೆರುವಾದ ಸದಸ್ಯ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಮೃತರ ಸೊಸೆಯಾದ ದಿದ್ಗಿ ಜ್ಯೋತಿ ನಾಗರಾಜ್ ಹಾಗೂ ಪೂಜಾರ್ ಹುಲಿಗೆವ್ವ ರವಿ ಸ್ಪರ್ಧಿಸಿದ್ದರು ಮತದಾನದ ವೇಳೆ 754 ಮತಗಳು ಚುನಾವಣೆಗೊಂಡಿದ್ದವು ಅವುಗಳಲ್ಲಿ ಪೂಜಾರ್ ಹುಲಿಗೇಮ್ಮ ರವಿ 298 ಮತಗಳನ್ನು ಪಡೆದಿದ್ದಾರೆ ದಿದ್ಗಿ ಜ್ಯೋತಿ ನಾಗರಾಜ್ 437 ಮತಗಳನ್ನು ಪಡೆದು ವಿಜಯಶಾಲಿಯಾಗಿದ್ದಾರೆ ಉಳಿದ 19 ಮತಗಳಲ್ಲಿ 4 ಕುಲಗೆಟ್ಟರೆ 15 ಮತದಾರರು ಬ್ಯಾಲೆಟ್ ಪೇಪರ್ ನಲ್ಲಿ ಖಾಲಿ ಬಿಟ್ಟಿದ್ದಾರೆ ಫಲಿತಾಂಶದ ಬಳಿಕ ಮೋರಗೇರಿ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದರು ಈ ಸಂದರ್ಭದಲ್ಲಿ ದಿದ್ಗಿ ಜ್ಯೋತಿ ನಾಗರಾಜ್ ಮಾತನಾಡಿ ಮೋರಗೇರಿಯ 2ನೇ ಕ್ಷೇತ್ರದ ಜನರು ನಮ್ಮ ಅತ್ತೆಯ ಮೇಲೆ (ದಿದ್ಗಿ ಅಂಜಿನಮ್ಮ ಜಗನ್ನಾಥ್) ನಂಬಿಕೆ ಇಟ್ಟಿದ್ದಾರೋ ಆ ನಂಬಿಕೆಯಿಂದ ನನ್ನನ್ನು ಆಯ್ಕೆ ಮಾಡಿ ಗ್ರಾಮ ಪಂಚಾಯಿತಿಗೆ ಹಾರಿಸಿ ಕಳಿಸಿದ್ದಾರೆ ಅವರ ನಂಬಿಕೆಯನ್ನು ಉಳಿಸಿಕೊಳ್ಳುತ್ತೇವೆ ವಾರ್ಡಿನ ಅಭಿವೃದ್ಧಿ ಮಾಡಲು ನಾವು ಬದ್ಧರಾಗಿದ್ದೇವೆ ಆಯ್ಕೆ ಮಾಡಿ ಗ್ರಾಮ ಪಂಚಾಯಿತಿಗೆ ಕಳಿಸಿದ್ದ ಎಲ್ಲಾ ಮತದಾರರಿಗೂ ಹೃತ್ಪೂರ್ವಕವಾದ ಧನ್ಯವಾದಗಳು ತಿಳಿಸುತ್ತೇನೆ. ಈ ಸಂದರ್ಭದಲ್ಲಿ ಭಾಗವಹಿಸಿದ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರಾದ ಕೆ ನಾಗಪ್ಪ ಕೆ ಸೋಮಶೇಖರ್ ದಿದ್ಗಿ ನಾಗರಾಜ್ ಮೇಟಿ ಗುರುವಣ್ಣ, ಎಂ ಎಲ್ಲಪ್ಪ, ದಂಡಪ್ಪ ಉಚ್ಚೆಂಗೆಪ್ಪ ಪಕೀರಪ್ಪ ಎಂ ಸುರೇಶ ಅಯ್ಯಪ್ಪ ಸಿ ಮೈಲಪ್ಪ ಜಿ ಹನುಮಂತಪ್ಪ ಇನ್ನು ಇತರರು ಸಂಭ್ರಮದಲ್ಲಿ ಭಾಗವಹಿಸಿದ್ದರು,..
ವರದಿ. ಮ್ಯಾಗೇರಿ ಸಂತೋಷ ಹೂವಿನಹಡಗಲಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030