ಒಳಮೀಸಲಾತಿ ಪ್ರತಿಭಟನೆ.ನ.30,ರಂದು
ಹೂವಿನಹಡಗಲಿ : ಪರಿಶಿಷ್ಟ ಜಾತಿಯ ಶೋಷಿತ ಸಮುದಾಯಗಳಿಗೆ ಒಳ ಮೀಸಲಾತಿ
ಜಾರಿಗೊಳಿಸಲು ಆಗ್ರಹಿಸಿ ಮಾದಿಗ ಮೀಸಲಾತಿ ಹೋರಾಟ ಸಮಿತಿಯಿಂದ. ನ 30ರಂದು ಪಟ್ಟಣದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಮುಖಂಡ. ಎಚ್ ಪೂಜಪ್ಪ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ
ಅವರು ಅಂದು ಬೆಳಗ್ಗೆ ಪಟ್ಟಣದ
ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನದಿಂದ ಮೆರವಣಿಗೆ ಆರಂಭಿಸಿ ಶಾಸ್ತ್ರಿ ವೃತ್ತದಲ್ಲಿ ಸಮಾವೇಶಗೊಳಲಿದೆ ಎಂದು ಹೇಳಿದರು
ಪರಿಶಿಷ್ಟ ಜಾತಿಯ 101 ಉಪ ಜಾತಿಗಳಲ್ಲಿ ಬಲಾಢ್ಯ ಸಮುದಾಯಗಳಷ್ಟೇ ಮೀಸಲಾತಿ ಲಾಭ ಪಡೆದಿವೆ. ಜನಸಂಖ್ಯೆ ಆಧಾ ರದಲ್ಲಿ ದಮನಿತರು ದುರ್ಬಲರಿಗೂ
ಮೀಸಲಾತಿ ಸಿಗಬೇಕು ಎಂದು
ನ್ಯಾಯಾಲಯ ಸ್ಪಷ್ಟವಾಗಿ ಹೇಳಿದೆ
ನಮ್ಮ ಹೋರಾಟ ಯಾವ ಸಮುದಾಯದ ವಿರುದ್ಧವೂ ಅಲ್ಲ
ಸುಪ್ರೀಂ ಕೋರ್ಟ್ ಆದೇಶದಂತೆ
ನೈಜ ಶೋಷಿತರಿಗೆ ಸಿಗಬೇಕಾದ
ಸಂವಿಧಾನಿಕ ಹಕ್ಕು ಕೇಳುತ್ತಿದ್ದೇವೆ ಎಂದರು
ಮಾದಿಗ ಒಳ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ
ಕೆ.ಉಚ್ಚೆಂಗೆಪ್ಪ ಮುಖಂಡ ಕೆ ಪುತ್ರೇಶ್. ಮಾತನಾಡಿ ಶತಮಾನಗಳಿಂದ ಶೋಷಣೆಗೆ ಒಳಗಾಗಿರುವ ಮಾದಿಗ ಸಮಾಜಕ್ಕೆ
ಸಿ.ಎಂ ಸಿದ್ದರಾಮಯ್ಯ ನ್ಯಾಯ ಕೊಡಿಸಬೇಕು ನಮ್ಮ ಸಮುದಾಯದ ನೋವು ಗೊತ್ತಿರುವುದರಿಂದ ಸಿ.ಎಂ ಗಟ್ಟಿ ನಿಲುವು ತಾಳುವ ವಿಶ್ವಾಸವಿದೆ
ವಿಳಂಬ ಮಾಡಿದರೆ ನಮ್ಮ ಸಮುದಾಯದ ಹೋರಾಟ ತೀವ್ರಗೊಳ್ಳಲಿದೆ ಎಂದರು
ಈ ಸಂದರ್ಭದಲ್ಲಿ. ಪಿ ನಿಂಗಪ್ಪ ಸುರೇಶ್ ಹಲಗಿ
ಜೆ.ಶಿವರಾಜ್ ಪಿ.ಎಂ ವಿಲ್ಸನ್ ಸ್ವಾಮಿ. ಮತ್ತು ಸ್ವಾಮಿ ಹೊ ಳಗುಂದಿ. ಹನುಮಂತು. ನಾಗರಾಜ್
ದುರುಗೇಶ್. ಇತರರು ಇದ್ದರು…
ವರದಿ, ಮ್ಯಾಗೇರ ಸಂತೋಷ ಹೂವಿನಹಡಗಲಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030