ಮರಣ ಹೊಂದಿದ ಮಂಗಕ್ಕೆ ಧಾರ್ಮಿಕ ವಿಧಿ ವಿಧಾನದ ಮೂಲಕ ಅಂತ್ಯ ಸಂಸ್ಕಾರ
ಹಗರಿಬೊಮ್ಮನಹಳ್ಳಿ ತಾಲೂಕು ಸೊನ್ನ ಗ್ರಾಮದಲ್ಲಿ ಮೂರು ಮಂಗಗಳು ಗ್ರಾಮದಲ್ಲಿ ಇದ್ದವು ಅದರಲ್ಲಿ ಒಂದು ಮಂಗವು ಟ್ಯಾಕ್ಟರ್ ಸೈಲೆನ್ಸರ್ ಪೈಪ್ ಮುಟ್ಟಿ ತುಂಬಾ ಗಾಯವಾಗಿದ್ದ ಒಂದು ಮಂಗ ದಿನಾಂಕ 23 .11.24 ಅಂಬೇಡ್ಕರ್ ಕಾಲೋನಿಯ ರಾತ್ರಿ 11:30ಕ್ಕೆ ಈ ಗಾಳಮ್ಮ ಇವರ ಮನೆ ಹತ್ತಿರ ಗಾಯವಾದ ಆಂಜನೇಯ ಬಂದು ಮರಣ ಹೊಂದಿದನು, ಇದನ್ನು ಗಮನಿಸಿದ ಸೊನ್ನ ಗ್ರಾಮದ ಜನತೆ ಸತ್ತ ಮಂಗನನ್ನು ಆಂಜನೇಯ ಎಂದು ಜಳಕ ಮಾಡಿಸಿ ರಾತ್ರಿ ಭಜನೆ, ಸೋಬಾನ, ಹೀಗೆ ಬೆಳಗಿನ ಜಾವದವರೆಗೂ ನಡೆಸಿದರು ನಂತರ ಹಿಂದೂ ಧಾರ್ಮಿಕ ಪರಂಪರೆಯ ವಿಧಿ ವಿಧಾನಗಳ ಮೂಲಕ ಆಂಜನೇಯ ಸ್ವಾಮಿಯನ್ನು ಊರಿನ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮಾಡುವ ಮೂಲಕ ಅಂತ್ಯ ಸಂಸ್ಕಾರವನ್ನು ನೆರವೇರಿಸಿದರು. ದಲಿತ ಮುಖಂಡರಾದ ಡಿ ದುರುಗಪ್ಪ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರು ಮಾತನಾಡಿ ನಾವು ಮಂಗವನ್ನು ಆ ದೇವರ ರೂಪ ಆಂಜನೇಯ ಸ್ವಾಮಿ ಎಂದು ಯಾವಾಗಲೂ ಪೂಜಿಸ್ತಾ ಬಂದಿದ್ದೇವೆ ಹಾಗಾಗಿ ಇಡೀ ನಮ್ಮ ಕಾಲೋನಿಯ ಜನತೆ ಆ ಆಂಜನೇಯ ಸ್ವಾಮಿಯ ಆಶೀರ್ವಾದಕ್ಕೆ ಕೃಪಾರಾಗುತ್ತೇವೆ ಎಂದು ನನ್ನ ಭಾವನೆ ಅನಿಸಿದೆ.
ಅಂಬೇಡ್ಕರ್ ಸಂಘದ ಅಧ್ಯಕ್ಷರಾದ ಈ ಗುಡುದೇಶ್ ಮತ್ತು ಉಪಾಧ್ಯಕ್ಷರಾದ ಡಿ ಮಾಂತೇಶ್ ಹಾಗೂ ತಾಲೂಕ್ ದಲಿತ ಮುಖಂಡರಾದ ಎಂ ರವೀಂದ್ರ ಹಾಗೂ ಹಲಗೆ ವಾದ್ಯದ ಸಂಘದ ಸದಸ್ಯರು, ದಲಿತ ಕಾಲೋನಿ ಜನರ ಹಾಗೂ ಊರಿನ ಗ್ರಾಮಸ್ಥರ ಹಾಗೂ ಆಂಜನೇಯ ಸ್ವಾಮಿಯನ್ನು ಹಲಗೆವಾದ್ಯದಿಂದ ಮೆರವಣಿಗೆಯ ಮೂಲಕ ಅಂತ್ಯ ಸಂಸ್ಕಾರ ಮಾಡಲಾಯಿತು…
ವರದಿ. ಮ್ಯಾಗೇರಿ ಸಂತೋಷ ಹೂವಿನಹಡಗಲಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030