ಮಾನವ ಬಂದುತ್ವ ವೇದಿಕೆಯಿಂದ ಮಕ್ಕಳ ಹಕ್ಕುಗಳ ದಿನಾಚರಣೆ”
ಇಂದು 23.11.2024 ರಂದು ಕೊಟ್ಟೂರು ತಾಲೂಕಿನ ಬೇವೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾನವ ಬಂಧುತ್ವ ವೇದಿಕೆ ಮತ್ತು ಸದರಿ ಶಾಲೆಯ ಸಹಯೋಗದಲ್ಲಿ ಮುಖ್ಯಗುರುಗಳಾದ ಎಸ್.ಕೆಂಚಪ್ಪ ಇವರ ಅಧ್ಯಕ್ಷತೆಯಲ್ಲಿ “ಮಕ್ಕಳ ಹಕ್ಕುಗಳ ದಿನಾಚರಣೆ” ಆಚರಿಸಲಾಯಿತು.
ಮಾ.ಬ.ವೇದಿಕೆಯ ಮಹಿಳಾ ಘಟಕದ ಜಿಲ್ಲಾ ಸಂಚಾಲಕರಾದ ಜಿ.ಸರೋಜ ಮಕ್ಕಳ ಹಕ್ಕುಗಳ ಬಗ್ಗೆ ಅರಿವು ಮೂಡಿಸಿದರು.
ಹ.ಬೊ.ಹಳ್ಳಿ ತಾಲೂಕು ಸಂಚಾಲಕರಾದ ವೀರಣ್ಣ ಕಲ್ಮನಿ, ಕೊಟ್ಟೂರು ತಾಲೂಕು ಸಂಚಾಲಕರಾದ ಹೆಚ್.ಉಸ್ಮಾನ್ ಬಾಷ ಮತ್ತು ಶಿಕ್ಷಕರಾದ ಮಲ್ಲನಗೌಡ ಮಾತನಾಡಿದರು.
ಶಿಕ್ಷಕಿಯವರಾದ ಅಕ್ಕಮಹಾದೇವಿ ಮತ್ತು ಶಾಲಾ ಮಕ್ಕಳು ಭಾಗವಹಿಸಿದ್ದರು.
ಶಿಕ್ಷಕರಾದ ರವೀಂದ್ರರವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಣೆ ಮಾಡಿದರು.
ವಿವಿಧ ಕ್ರೀಢೆ ಮತ್ತು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ಶಾಲೆಯ ಗ್ರಂಥಾಲಯಕ್ಕೆ ‘ಸಂವಿಧಾನ ಓದು’ ಪುಸ್ತಕ ನೀಡಲಾಯಿತು.
ಶಾಲೆಯ ಶಿಕ್ಷಕರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಹೆಚ್.ಉಸ್ಮಾನ್ ಬಾಷ,
ತಾಲೂಕು ಸಂಚಾಲಕರು
ಮಾನವ ಬಂಧುತ್ವ ವೇದಿಕೆ, ಕೊಟ್ಟೂರು ತಾಲೂಕು…
ವರದಿ.. ಮ್ಯಾಗೇರಿ ಸಂತೋಷ ಹೂವಿನಹಡಗಲಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030