ಹೊಸಪೇಟೆಯಲ್ಲಿವೀರ ವನಿತೆ ಒನಕೆ ಓಬವ್ವ ಜಯಂತಿ ಆಚರಣೆ…
ದಿನಾಂಕ 11.11.2024 ಸೋಮವಾರ ಬೆಳಗ್ಗೆ 10ಕ್ಕೆ ಸ್ಥಳ ಛಲವಾದಿ ಕೇರಿ ಹೊಸಪೇಟೆ ವಿಜಯನಗರ ಜಿಲ್ಲೆ ಅಲ್ಲಿ ಅದ್ದೂರಿಯಾಗಿ ಆಚರಣೆ ಮಾಡಲಾಯಿತು. ಈ ಜಯಂತಿಯ ಉದ್ಘಾಟಕರಾಗಿ ಶ್ರೀಮಾನ್ಯ ಜಿಲ್ಲಾಧಿಕಾರಿಗಳಾದ ಎಂ ಎಸ್ ದಿವಾಕರ್ ವಿಜಯನಗರ ಜಿಲ್ಲೆ ಯವರು ಆಗಮಿಸಿದ್ದರು ವೀರಮಣಿಕೆಯ ಬಗ್ಗೆ ಮಾತನಾಡಿ ಎಲ್ಲಾ ಮಹಿಳೆಯರು ಓಬವ್ವನ ತರ ಶಕ್ತಿಶಾಲಿಯಾಗಿ ಇರಬೇಕು ಎಂದು ಮಕ್ಕಳಿಗೆ ಮತ್ತು ಮಹಿಳೆಯರಿಗೆ ಹೇಳಿದರು , ಹಾಗೆ ಶ್ರೀಹರಿ ಬಾಬು ಬಿಎಲ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ವೀರ ಒನಕೆ ಬಗ್ಗೆ ಮಾತನಾಡಿ ಮಕ್ಕಳಿಗೆ ನೀವು ಕೂಡ ಅವರಂತೆ ಧೈರ್ಯವಾಗಿರಬೇಕು ಕುಗ್ಗಬಾರದು ಅಂತ ಹೇಳಿ ಮಕ್ಕಳಿಗೆ ಹೇಳಿದರು.ಈ ಸಂದರ್ಭದಲ್ಲಿ ವಿಶೇಷ ಉಪನ್ಯಾಸಕರಾಗಿ ಆಗಮಿಸಿರತಕ್ಕಂಥ ಶ್ರೀ ಬಸವರಾಜ್ ಸಿ .ಅಮ್ಮನಕೇರಿ ಸರ್ಕಾರಿ ಪದವಿಪೂರ್ವ ಕಾಲೇಜ್ ಮರಿಯಮ್ಮನಹಳ್ಳಿ ಇವರು ಶ್ರೀ ಒನಕೆ ಓಬವ್ವ ನವರ ಬಗ್ಗೆ ಸಹ ಇವರವಾಗಿ ಅವರು ನಮ್ಮ ತವರು ಜಿಲ್ಲೆಯ ಗುಡೆಕೋಟೆಯ ಹೆಣ್ಣು ಮಗಳು ಅವರು ನಡೆದು ಬಂದ ಹಾದಿಯ ಬಗ್ಗೆ ಮತ್ತು ಅವರ ಹೋರಾಟದ ಬಗ್ಗೆ ಸಂಪೂರ್ಣವಾಗಿ ಸಹ ವಿವರವಾಗಿ ಮಹಿಳೆಯರಿಗೆ ಮತ್ತು ಒನಕೆ ಒಬ್ಬವನ ವೇಷ ಧರಿಸಿ ಬಂದಿರ್ತಕ್ಕಂತಹ ಮಕ್ಕಳಿಗೆ ಉಪನ್ಯಾಸ ನೀಡಿದರು ಶ್ರೀ ಶೃತಿ ಮೇಡಂ ತಹಶೀಲ್ದಾರ್ ಮತ್ತು ಮಮ್ತಾಜ್ ಬೇಗಂ 16ವಾರ್ಡ್ ಮೆಂಬರ್ . ಇವರು ಕೂಡ ಈ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಹಾಗೆ ಕರ್ನಾಟಕ ರಾಜ್ಯ ಚಲವಾದಿ ಮಹಿಳಾ ಮಹಾಸಭಾ ರಾಜ್ಯಾಧ್ಯಕ್ಷರಾದ ಡಾ. ಈರಮ್ಮ ಆರ್. ಇವರು ಒನಕೆ ಓಬವ್ವ ವೇಷ ಧರಿಸಿದ ಮಕ್ಕಳಿಗೆ ಸನ್ಮಾನ ಮತ್ತು ಸ್ಪೂರ್ತಿ ಮಹಿಳಾ ಸೇವಾ ಟ್ರಸ್ಟ್ ವತಿಯಿಂದ ಪ್ರಶಸ್ತಿ ಪತ್ರಗಳನ್ನ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಮಾನ್ಯ ಎಲ್ಲಪ್ಪ ಇಂಜಿನಿಯರ್ ಬಸ್ಸಪ್ಪ ಜಾನೇಕರ್ . AEE ಹಾಗೂ ಚಲವಾದಿ ಮುಖಂಡರಾದ ಕಮಲಪುರ್ ಈರಣ್ಣ,ರಾಮಚಂದ್ರಪ್ಪ, ಈರಣ್ಣ, ಹನುಮಂತಪ್ಪ, ವೀರಭದ್ರಪ್ಪ, ಚಲವಾದಿ ಸಮಾಜದ ತಾಲೂಕ ಅಧ್ಯಕ್ಷರಾದ ರಮೇಶ್ ಚಲವಾದಿ, ಹಾಗೂ ಛಲವಾದಿಯ ಏರಿಯಾ ಎಲ್ಲಾ ಚಲವಾದಿ ಬಂಧುಗಳು ಮಹಿಳೆಯರು ಮಕ್ಕಳು ಹಾಗೂ ಯುವಕರು ತುಂಬಾ ಉತ್ಸಾಹದಿಂದ ಈ ಕಾರ್ಯಕ್ರಮದಲ್ಲಿ
ಭಾಗವಹಿಸಿ ಯಶಸ್ವಿಯಾಗಿ ನಡೆಸಿ ಕೊಟ್ಟಿರುತ್ತಾರೆ. ಸ್ವಾಗತವನ್ನು ಬಸವರಾಜ್ ಅವರು ನಡೆಸಿಕೊಟ್ಟರು, ವಂದನ ಅರ್ಪಣೆ ರಾಮಚಂದ್ರಪ್ಪ ಅವರು ನಡೆಸಿಕೊಟ್ಟರು.
ವರದಿ… ಮ್ಯಾಗೇರಿ ಸಂತೋಷ ಹೂವಿನಹಡಗಲಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030