ನಿಯಮಾನುಸಾರ ಆಡಳಿತ ಸಿಬ್ಬಂದಿಗಳಿಗೆ ಮುಂಬಡ್ತಿ ಆಗ್ರಹಿಸಿ ಹಮ್ಮಿಕೊಂಡಿದ್ದ ಹೋರಾಟವನ್ನು ತಾತ್ಕಾಲಿಕವಾಗಿ ಮುಂದೂಡಿರುವ,
ಕನ್ನಡ ವಿಶ್ವವಿದ್ಯಾಲಯದಲ್ಲಿ(ಹಂಪಿ )ಆಡಳಿತಾಂಗದ ವಿವಿಧ ವೃಂದಗಳಲ್ಲಿ ಖಾಯಂ ಆಗಿ ಕಾರ್ಯನಿರ್ವಸುತ್ತಿರುವ ಆಡಳಿತ ಸಿಬ್ಬಂದಿಗಳಿಗೆ ಮುಂಬಡ್ತಿ ಕೋರಿ ದಿನಾಂಕ 12.11.2024 ರಂದು ಆಡಳಿತ ಕಚೇರಿಯ ಮುಂಭಾಗದಲ್ಲಿ ಹೋರಾಟವನ್ನು ಹಮ್ಮಿಕೊಳ್ಳಲಾಗಿತ್ತು ಹೋರಾಟದ ಸಂದರ್ಭದಲ್ಲಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಯವರು 10 ದಿನಗಳ ಒಳಗಾಗಿ ಆಡಳಿತ ಸಿಬ್ಬಂದಿಯವರಿಗೆ ಮುಂಬಡ್ತಿಯನ್ನು ನೀಡುವುದಾಗಿ ಬರವಸೆ ನೀಡಿದರು ಹಾಗೂ ಕುಲಸಚಿವರು 10 ದಿನಗಳ ಒಳಗಾಗಿ ಇಲಾಖೆ ಮುಂಬಡ್ತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದಾಗಿ ಹಿಂಬರದ ನೀಡಿದ್ದಾರೆ ಕುಲಪತಿಯವರು ಮತ್ತು ಕುಲ ಸಚಿವರ ಭರವಸೆಗಳ ಹಿನ್ನೆಲೆಯಲ್ಲಿ ಹೋರಾಟವನ್ನು ದಿನಾಂಕ 22 11 2024 ವರಗೆ ತಾತ್ಕಾಲಿಕವಾಗಿ ಮುಂದೂಡಿರುತ್ತೇವೆ.
ಕನ್ನಡ ವಿಶ್ವವಿದ್ಯಾಲಯದ ಆಡಳಿತ ಸಿಬ್ಬಂದಿಗಳ ಮುಂಬಡ್ತಿ ಆಗ್ರಹಿಸಿ ಹಮ್ಮಿಕೊಂಡಿದ್ದ ಹೋರಾಟದಲ್ಲಿ ಜಿ ಶಿವಕುಮಾರ್ ,ಗ್ಯಾನಪ್ಪ ಬಡಿಗೇರ್, ಎಲ್ ನಾರಾಯಣ, ಎಚ್ ಶ್ರೀನಿವಾಸ್, ಗಂಡಿ ಬೋರಯ್ಯ, ಕಾಳಪ್ಪ ಬಡಿಗೇರ್, ಮತ್ತು ಸಿ ಬಸವರಾಜ, ಹನುಮೇಶ ಪತ್ತಾರ್, ಸಿ ವಾಗೀಶ, ಬಿ ಉಮಾಪತಿ, ಆರ್ ವಿ ದೇಶಪಾಂಡೆ ಇನ್ನೂ ಹಲವಾರು ಸಿಬ್ಬಂದಿಗಳು ಭಾಗವಹಿಸಿದ್ದರು. ಕರ್ನಾಟಕ ಸರ್ಕಾರಿ ಎಸ್ಸಿ/ ಎಸ್ಟಿ ನೌಕರ ಸಮನ್ವಯ ಸಮಿತಿಯ ಪದಾಧಿಕಾರಿಗಳಾದ ಗುಜ್ಜಲ್ ಶಿವಕುಮಾರ್ ಕಟಗಿ ಬಾಬು ಡಿ ಶ್ರೀಧರ್ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ್) ದ ಜಿಲ್ಲಾ ಸಂಚಲಕರಾದ ಹನುಮಂತಪ್ಪ ಮತ್ತು ಕಾರ್ಯಕರ್ತರು ಕನ್ನಡ ರಕ್ಷಣಾ ವೇದಿಕೆಯ ಕಮಲಾಪುರ ಅಧ್ಯಕ್ಷರಾದ ಭಾಷಾ, ಕೆಂಚಪ್ಪ ಅವರು ಭಾಗವಹಿಸಿದ್ದರು…
ವರದಿ… ಮ್ಯಾಗೇರಿ ಸಂತೋಷ್ ಹೂವಿನಹಡಗಲಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030