ತಿಪ್ಪಾಪುರ ಗ್ರಾಮದ ರೈತರ ಹೊಲದಲ್ಲಿ ಕ್ಷೇತ್ರೋತ್ಸವ ಹಾಗೂ ರೈತರಿಗೆ ಸನ್ಮಾನ…!!!

ತಿಪ್ಪಾಪುರ ಗ್ರಾಮದ ರೈತರ ಹೊಲದಲ್ಲಿ ಕ್ಷೇತ್ರೋತ್ಸವ ಹಾಗೂ ರೈತರಿಗೆ ಸನ್ಮಾನ

 

ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ತಿಪ್ಪಾಪುರ ಗ್ರಾಮದ ಖಲಂದರ್ ರವರ ಜಮೀನಿನಲ್ಲಿ ನೂಜೀವೀಡು ಸಂಸ್ಥೆಯ ಕ್ರಾಂತಿ-4144 ಎಂಬ ತಳಿಯ ಕ್ಷೇತ್ರೋತ್ಸವವನ್ನು ಹಮ್ಮಿಕೊಳ್ಳಲಾಯಿತು
ಕಂಪನಿಯ ಮ್ಯಾನೇಜರ್ ಆದ ಪಿಜಿ ಶಿವಕುಮಾರ್ ರವರು ಮಾತನಾಡಿ ಕ್ರಾಂತಿ ತಳಿಯು ಅತ್ಯುತ್ತಮ ತಳಿಯಾಗಿದ್ದು ಕಿತ್ತಳೆ ಬಣ್ಣದ ಆಕರ್ಷಕ ಮತ್ತು ಅಗಲವಾದ ಕಾಳುಗಳಿಂದ ಕೂಡಿರುತ್ತದೆ. ತೆನೆಯ ತುದಿಯವರೆಗೂ ಕಾಳು, ಸಮಾನಾಂತರ ತೆನೆಗಳು ಹೊಂದಿದ್ದು ರೋಗದ ಸಹಿಷ್ಣತೆ ಹೊಂದಿರುತ್ತದೆ ಎಂದು ರೈತರಿಗೆ ಮನವರಿಕೆ ಮಾಡಿದರು ಹಾಗೂ ಪ್ರಗತಿಪರ ರೈತರಿಗೆ ಸನ್ಮಾನ ಮಾಡಿದರು ಕಾರ್ಯಕ್ರಮದ ಮುಖ್ಯ ಅತಿಥಿ, ಗ್ರಾಮದ ಪ್ರಗತಿಪರ ರೈತರಾದ ಮಂತ್ರೋಡಿ ಜಗದೀಶ್ ರವರು ಮಾತನಾಡಿ ಕ್ರಾಂತಿ ತಳಿಯನ್ನು ಸತತವಾಗಿ ಮೂರು ವರ್ಷಗಳಿಂದ ಬೆಳೆಯುತ್ತಿದ್ದು ಈ ತಳಿಯು ಪ್ರತಿ ಎಕರೆಗೆ ಸರಾಸರಿ 40 ರಿಂದ 42 ಕ್ವಿಂಟಲ್ ಗಳಷ್ಟು ಇಳುವರಿ ಬಂದಿದೆ ಎಂದು ಹೇಳಿದರು ಹಾಗೆಯೇ ಎಲ್ಲಾ ರೈತರಿಗೂ ಈ ತಳಿಯ ಬಗ್ಗೆ ಮಾಹಿತಿಯನ್ನು ನೀಡಿದರು.
ಈ ಕ್ಷೇತ್ರೋತ್ಸವದಲ್ಲಿ ಮಹಾವೀರ್ ಟ್ರೇಡರ್ಸ್ ಲಾಲ್ ಚಂದ್ ಹೊಳಗುಂದಿಯ ವಿಶ್ವವಿಜಯ ಟ್ರೇಡರ್ಸ್ ಕಾಶಿನಾಥ್, ವಿವೇಕಾನಂದ ಟ್ರೇಡರ್ಸ್ ಶೇಖರ್, ಸಂಸ್ಥೆಯ ಹಾಲೇಶ್, ಹೊನ್ನೂರ್ ವಲಿ, ನಾಗರಾಜ್ ಮತ್ತು ರೈತರಾದ ಪ್ರಭಾಕರ್, ಕೋಟೆಪ್ಪ ಸೇರಿದಂತೆ ಅನೇಕ ರೈತರು ಪಾಲ್ಗೊಂಡಿದ್ದರು…

ವರದಿ. ಮ್ಯಾಗೇರಿ ಸಂತೋಷ ಹೂವಿನಹಡಗಲಿ

Leave a Reply

Your email address will not be published. Required fields are marked *