ಹೂವಿನಹಡಗಲಿ:ಬೆಳೆ ನಷ್ಟ ಪರಿಹಾರ, ಪಟ್ಟಾ ವಿತರಿಸುವಂತೆ ಸರ್ಕಾರಕ್ಕೆ ABRP ಒತ್ತಾಯ- ವಿಜಯನಗರ ಜಿಲ್ಲೆ ಹೂವಿನ ಹಡಗಲಿ: ಅನಾವೃಷ್ಠಿಯಿಂದಾಗಿರುವ ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ, ಹಾಗೂ ಸಾಗುವಳಿ ಮಾಡುತ್ತಿರುವ ಬಡ ರೈತರಿಗೆ ಪಟ್ಟ ವಿತರಿಸಬೇಕೆಂದು. ಸೇರಿದಂತೆ ವಿವಿದ ಬೇಡಿಕೆಗಳನ್ನು ಈಡೇರಿಸುವಂತೆ, ಅಖಿಲ ಭಾರತೀಯ ರೈತ ಪಾರ್ಟಿ(ABRP) ಸರ್ಕಾರಕ್ಕೆ ಒತ್ತಾಯಿಸಿದೆ.
ಅಕ್ಟೋಬರ್ 25 ರಂದು ಹೂವಿನ ಹಡಗಲಿಯಲ್ಲಿ, ABRP ರಾಜ್ಯ ಮಹಿಳಾಧ್ಯಕ್ಷೆ ಎಸ್.ಯಶೋಧ ರವರ ನೇತೃತ್ವದಲ್ಲಿ. ಪಕ್ಷದ ನೂರಾರು ಕಾರ್ಯಕರ್ತರು, ಸರ್ಕಾರಕ್ಕೆ ಹಾಗೂ ಮುಖ್ಯ ಮಂತ್ರಿಗಳಿಗೆ. ತಹಶಿಲ್ದಾರರ ಮುಖಾಂತರ, ಹೊಕ್ಕೊತ್ತಾಯ ಪತ್ರ ನೀಡಿದ್ದಾರೆ.
ತಾಲೂಕು ಕಚೇರಿ ಆವರಣದಲ್ಲಿ ಪಕ್ಷದ ನೂರಾರು ಕಾರ್ಯಕರ್ತರು ಜಮಾವಣೆಯಾಗಿ, ತಮ್ಮ ಹಕ್ಕೊತ್ತಾಯಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿ ಘೋಷಣೆ ಕೂಗಿದರು.
ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷೆ ಎಸ್.ಯಶೋಧ ಮಾತನಾಡಿ, ತಮ್ಮ ಹಕ್ಕೊತ್ತಾಯದ ಪತ್ರವನ್ನು ಓದಿದರು. ಮತ್ತು ತಾವು ಸರ್ಕಾರಕ್ಕೆ ಹಾಗೂ ಮುಖ್ಯ ಮಂತ್ರಿಗಳಿಗೆ, ತಮ್ಮ ಹಕ್ಕೊತ್ತಾಯಗಳನ್ನು ಈಡೇರಿಸುವಂತೆ ಕೋರಿದ್ದಾರೆ.
ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳಿಗೆ ತಾವು ತಹಶಿಲ್ದಾರರ ಮೂಲಕ , ರೈತರ ಹಿತಕ್ಕಾಗಿ ಮನವಿ ಮಾಡುತ್ತಿರುವುದಾಗಿ ತಿಳಿಸಿದರು.
ನಾಡಿನ ಎಲ್ಲಾ ರೈತರ ಪರ ಪಕ್ಷ ಹೋರಾಟ ಮಾಡುತ್ತಿದ್ದು, ಕಾರಣ ಸರ್ಕಾರ ಹಕ್ಕೊತ್ತಾಯಗಳನ್ನು ಶೀಘ್ರವೇ ಈಡೇರಿಸಬೇಕೆಂದು. ತಾವು ಈ ಮೂಲಕ ಮುಖ್ಯಮಂತ್ರಿಗಳಿಗೆ, ಹಾಗೂ ಸರ್ಕಾರಕ್ಕೆ ಒತ್ತಾಯಿಸುತ್ತಿರುವುದಾಗಿ ಅವರು ನುಡಿದರು. ಅವರು ಪಕ್ಷದ ಹಕ್ಕೊತ್ತಾಯ ಪತ್ರವನ್ನು, ತಹಶಿಲ್ದಾರರಾದ ಶರಣಪ್ಪರವರಿಗೆ ನೀಡಿದರು.
ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರಾದ ಕಕುಪ್ಪಿ ಎಮ್.ಬಸವರಾಜ, ವೀರಣ್ಣ ಕಡಾರಿ, ಪಿ. ಬಸವರಾಜ, ಮಲ್ಲಿಕಾರ್ಜುನ ಸ್ವಾಮಿ, ವೀರಮ್ಮ , ದೇವಕ್ಕ ಸೇರಿದಂತೆ. ಜಿಲ್ಲಾ ಹಾಗೂ ತಾಲೂಕು ಗ್ರಾಮೀಣ ಭಾಗಗಳ ಮುಖಂಡರು. ನೂರಾರು ಕಾರ್ಯಕರ್ತರು ಹಾಗೂ ರೈತ ಮಹಿಳೆಯರು ಉಪಸ್ಥಿತರಿದ್ದರು…
ವರದಿ. ಸಂತೋಷ ಮ್ಯಾಗೇರಿ ಹೂವಿನಹಡಗಲಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030