ಜಿಲ್ಲಾಮಟ್ಟದ ಖೋ ಖೋ ಟೂರ್ನಮೆಂಟ್ ಪಂದ್ಯಾವಳಿ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಮೋರಿಗೇರಿ ಗ್ರಾಮದಲ್ಲಿ ಜಿ. ಎನ್. ಬಾಯ್ಸ್ ಮೋರಿಗೇರಿ ಇವರಿಂದ 2ನೇ ಬಾರಿಗೆ ಜಿಲ್ಲಾ ಮಟ್ಟದ ಖೋ ಖೋ ಟೂರ್ನಮೆಂಟ್ ಪಂದ್ಯಾವಳಿಗಳನ್ನು ಗ್ರಾ.ಪಂ ಅಧ್ಯಕ್ಷರಾದ ಸಿ.ಉದಯ ಕುಮಾರ್ಇವರು ಉದ್ಘಾಟಿಸಿದರು, ಅಧ್ಯಕ್ಷರು ಮಾತನಾಡಿ ಟೂರ್ನಿಯಲ್ಲಿ ಸೋಲು, ಗೆಲುವು,ಮುಖ್ಯವಲ್ಲ ಭಾಗವಯಿಸುವುದೆ ಭಾಗ್ಯ, ವಿದ್ಯಾರ್ಥಿಗಳಿಗೆ ದೈಹಿಕ ಮತ್ತು ಮಾನಸಿಕ ಸದೃಢತೆಯನ್ನು ಬೆಳೆಸುವುದರ ಹೊರತಾಗಿ, ಕ್ರೀಡೆಗಳಲ್ಲಿ ಭಾಗವಹಿಸುವುದು ಮತ್ತು ದೇಹದ ಸದೃಢತೆಯನ್ನು ಕಾಪಾಡಿಕೊಳ್ಳುವುದು ಅನೇಕ ಹೇಳಲಾಗದ ಪ್ರಯೋಜನಗಳನ್ನು ನೀಡುತ್ತದೆ. ವಿದ್ಯಾರ್ಥಿಗಳಿಗೆ ಜೀವನವನ್ನು ರೂಪಿಸುವಲ್ಲಿ ಶಿಕ್ಷಣವು ಪ್ರಮುಖ ಪಾತ್ರ ವಹಿಸುವಂತೆಯೇ, ಕ್ರೀಡೆಗಳು ಸಹ ಯಶಸ್ಸಿನ ಉತ್ತಮ ಮೂಲವಾಗಿದೆ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು .ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯರಾದ, ಎನ್. ಮಹೇಶ್ವರ ಗೌಡ್ರು, ಸಿ ಶೇಖರಪ್ಪ, ಕೆ.ನಾಗರಾಜ್. ಶ್ರೀಧರ್, ಗ್ರಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷರಾದ ಪಿ. ಹನುಮೇಶ್. ಎಸ್.ಡಿ.ಎಂ.ಸಿ.ಅಧ್ಯಕ್ಷರಾದ ಬಾವಿ ಮಲ್ಲಪ್ಪ, ಸುತ್ತಮುತ್ತಲಿನ 30ಕ್ಕೂ ಹೆಚ್ಚು ತಂಡಗಳು, ದೈಹಿಕ ಶಿಕ್ಷಕರು, ಶಿಕ್ಷಣ ಪ್ರೇಮಿಗಳು, ಕ್ರೀಡಾಭಿಮಾನಿಗಳು, ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ…ಮ್ಯಾಗೇರಿ ಸಂತೋಷ ಹೂವಿನಹಡಗಲಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030