ದೇವದಾಸಿ ಪದ್ಧತಿ ಬಗ್ಗೆ ಮಾಹಿತಿ ತಿಳಿದು ದಿಗ್ಗಭ್ರಮೆಯಾದೆ ಎಂದ ಜಿಲ್ಲಾಧಿಕಾರಿಗಳು…
ಹೊಸಪೇಟೆ, ವಿಜಯನಗರ ಜಿಲ್ಲೆ ಸಖಿ ಟ್ರಸ್ಟ್ ವತಿಯಿಂದ
ಆಯೋಚಿಸಿರುವ
ದೇವದಾಸಿ ತಾಯಂದಿರ ಮತ್ತು ಮಕ್ಕಳ ಘನತೆ ಮತ್ತು ಸುಸ್ಥಿರತೆಯ ಸಮಾವೇಶ
ಉದ್ಘಾಟನಾಯನ್ನು ಜಿಲ್ಲೆ ಆಧಿಕಾರಿಗಳಾದಂತಹ ಎಮ್. ಎಸ್ ದಿವಾಕರ ರವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ವಿಜಯನಗರ ಜಿಲ್ಲೆಯ ಜಿಲ್ಲಾ ಅಧಿಕಾರಿಗಳಾದಂತಹ ಎಮ್ . ಎಸ್ ದಿವಾಕರ ಅವರು ದೇವದಾಸಿ ತಾಯಂದಿರ ಮತ್ತು ಮಕ್ಕಳ ಘನತೆ ಮತ್ತು ಸುಸ್ಥಿರತೆ ಸಮಾವೇಶದ ಕುರಿತು ಸಖಿಟ್ರಸ್ಟ್ ಮಾಡುವಂತಹ ಕೆಲಸದ ಬಗ್ಗೆ ಒಂದು ಘಂಟೆ ಸಖಿ ನಿರ್ದೇಶಕರ ಹತ್ತಿರ ಈ ವ್ಯವಸ್ಥೆಯ ಬಗ್ಗೆ ಚರ್ಚೆ ಮಾಡಿ, ನಾನು ಈ ಉಚ್ಚಂಗಿ ದುರ್ಗದವರಾಗಿದ್ದರಿಂದ ದೇವದಾಸಿ ನಿಂತು ಹೋಗಿದೆ ಅಂದುಕೊಂಡಿದ್ದೆ ಆದರೆ ಸಖಿಯಿಂದ ನನಗೆ ದೇವದಾಸಿ ಪದ್ಧತಿ ಬಗ್ಗೆ ಮಾಹಿತಿ ನೀಡಿದಾಗ ನಾನು ದಿಗ್ಗಭ್ರಮೆಯಾದೆ ವಿಜಯನಗರ ಜಿಲ್ಲೆಯಲ್ಲಿ 10,000 ಸಾವಿರ ದೇವದಾಸಿ ತಾಯಿಂದರು ಇದ್ದಾರೆ ,ಸಾಕ್ಷರತೆಯಲ್ಲಿ ತುಂಬಾ ಹಿಂದೂಳಿದಿದ್ದಾರೆ
ದೇಶದ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಹೆಣ್ಣುಮಕ್ಕಳು ಗೌರವದಿಂದ ಕಾಣಬೇಕು
ನಾವು ಉಚ್ಚಿಂಗೆದುರ್ಗದ ಹಾಲಂ ಎಂಬ ತೋಪಿನಲ್ಲಿ ದೇವದಾಸಿ ಪದ್ಧತಿ ಇಂತಹ ಆಚರಣೆಗಳನ್ನು ನಾವು ನಿಲ್ಲಿಸಿದ್ದಿವಿ ,ಈ ಬಗ್ಗೆ ಸಖಿ ಸಂಸ್ಥೆ ಅರಿವಿನ ಕಾರ್ಯ ನಿರ್ವಹಿಸುತ್ತದೆ. ದೇವದಾಸಿಮಕ್ಕಳು ಅವಮಾನಕ್ಕೆ ಹಿಂಜರಿಯದೆ ಮುನ್ನುಗ್ಗಿ ಶಿಕ್ಷಣವನ್ನು ಪಡೆದುಕೊಂಡು ತಾವು ತಮ್ಮ ಕುಟುಂಬವನ್ನು ಬದಲಾವಣೆ ಮಾಡಬೇಕು.
ಇತಂಹ ಕಾರ್ಯಕ್ರಮವನ್ನು ಮಾಡುವಾಗ ದೇವದಾಸಿ ಆಗುಂತಹ ಮಹಿಳೆಯರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗಬೇಕು, ಜೊತೆಗೆ ಆರೋಗ್ಯ ದೃಷ್ಟಿಯಿಂದ ಕೂಡ ಇದು ಒಳ್ಳೆಯದು ಅಲ್ಲ ನನ್ನ ಸಹಾಯ ನಿಮಗೆ ಯವಾಗಲೂ ಇದ್ದೆ ಇರುತ್ತೆ ಹಾಗೂ ಶಿಕ್ಷಣಕ್ಕಾಗಿ ದೇವದಾಸಿ ತಾಯಂದಿರ ಮಕ್ಕಳಿಗೆ ಮೀಸಲಾತಿ ಇದೆ ಅದನ್ನು ಉಪಯೋಗಿಸಿಕೊಳ್ಳಿ ಎಂದು ಹೇಳಿದರು.ಭಾಗ್ಯ ಮತ್ತು ಸಖಿ ಸಿಬ್ಬಂದಿಗಳಿಗೆ ವಂದಿಸುತ್ತ ತಮ್ಮ ಮಾತುಗಳನ್ನು ಮುಗಿಸಿದರು.
ಕಾಮಾಕ್ಷಿ ನಾಗೇನಹಳ್ಳಿ ದೇವದಾಸಿ ಕುಟುಂಬದಿಂದ ಬಂದಂತಹ ಯುವತಿ ಇವರು ಈ ಕಾರ್ಯಕ್ರಮದ ಕುರಿತು ತಮ್ಮ ಅನುಭವವನ್ನು ಅಂಚಿಕೊಂಡರು.
“ನನ್ನನ್ನು ದೇವದಾಸಿ ಮಾಡುವ ಆಲೋಚನೆ ಇತ್ತು ಈ ಪದ್ದತಿ ನಮಗೆ ವಂಶ ಪರಂಪರೆಯಿಂದ ಬಂದಿದೆ, ಆಗ ನನಗೆ ಸಖಿ ಪರಿಚಯ ಆಯ್ತು ಅತಂಹ ಸಮಯದಲ್ಲಿ ಸಖಿಯಿಂದ ಸಿಕ್ಕ ಕಾರ್ಯಾಗಾರಗಳು ಜೊತೆಗೆ ಏಕ್ಸ್ ಪೋಜರ್ ನನ್ನ ಬದುಕಿನ ಆಲೋಚನೆಯನ್ನು ಬದಲಾಯಿಸುವ ಜೊತೆಗೆ ಶಿಕ್ಷಣ ಎನ್ನುವದು ಹುಲಿಯ ಹಾಲಿನಂತೆ ಕುಡಿದವರು ಘರ್ಜಿಸಲೇಬೇಕು ಎನ್ನುವ ಅಂಬೇಡ್ಕರ್ ಅವರ ಮಾತು ನನ್ನ ಬದುಕಿನಲ್ಲಿ ತುಂಬಾ ಪ್ರಭಾವ ಬೀರಿತು”ಹೇಳಿದರು.
ಎಸ್. ಪಿ .ಶ್ರೀ ಹರಿ ಬಾಬು ಅವರ ಮಾತು
ಸಖಿ ಈ ಕಾರ್ಯಕ್ರಮಕ್ಕೆ ನನಗೆ ಆಹ್ವಾನ ನೀಡಿತು, ದೇವದಾಸಿ ನಿರ್ಮೂಲನೆ ಕಾಯ್ದೆ 1982 ಕಾನೂನು ಯಾಕೆ ಇಷ್ಟೊಂದು ಚಾಲ್ತಿಯಲ್ಲಿ ಇಲ್ಲದೆ ಇರುವದಕ್ಕೆ ಈ ಪದ್ದತಿ ಇನ್ನು ಜೀವಂತವಾಗಿದೆ ಕೆಲವು ಇಲಾಖೆಗಳ ನಿರ್ಲಕ್ಷ್ಯವೆ ಎದ್ದುಕಾಣುತ್ತದೆ. ನಾನು ಒಬ್ಬ ಪೊಲೀಸ್ ಅಧಿಕಾರಿಯಾಗಿ ನಿಮಗೆ ಏನು ಸಹಾಯಬೇಕು ಮತ್ತು ನಿಮ್ಮ ಸಂಸ್ಥೆ ಏನು ಕಾನೂನು ನೆರವು ಬೇಕು ನಮ್ಮನ್ನು ಕೇಳಿ ನಾವು ನಿಮ್ಮ ಜೊತೆಗೆ ಕೈಜೋಡಿಸುತ್ತವೆ. ಈಂತಹ ಕಾರ್ಯಕ್ರಮಗಳು ದೇವದಾಸಿ ಪದ್ದತಿ ಅಳ ಆಗಲ ತಿಳಿದುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಸರ್ಕಾರದಿಂದ ಸಿಗುವ ಸೌಲಭ್ಯಗಳು ಎಲ್ಲಾ ತಾಯಂದಿರಿಗೂ ಮತ್ತು ಮಕ್ಕಳಿಗೆ ಸಿಗಬೇಕು ಎಂದು ಹಾರೈಸುತ್ತೇನೆ.
ಹೆಚ್ ಅಂಜೀನಮ್ಮ ಸಹಾಶಿಕ್ಷಿಕಿ ಕಾಲುವಿ ತಾಂಡ, ಹೂವಿನ ಹಡಗಲಿ.
ಸಖಿ ನನಗೆ 17 ವರ್ಷದ ಹಿಂದಿನಿಂದಲೂ ಪರಿಚಯ, ನನ್ನ ಶಿಕ್ಷಣಕ್ಕೆ ಸಖಿ ಮೂಲ ಕಾರಣ ನನ್ನ ಕುಟುಂಬ ಬದಲಾವಣೆಗೆ ಜೊತೆಗ ನನಗೆ ಆತ್ಮ ಧೈರ್ಯ ಕಾರ್ಯಗಾರಳು ನನಗೆ ಬೆಳಲಿಕ್ಕೆ ಸಹಾಯ ಮಾಡಿದೆ.
ಅಧ್ಯಕ್ಷೀಯ ಭಾಷಣ ಡಾ. ಆರ್ . ವಿ ಚಂದ್ರು ಶೇಖರ ನ್ಯಾಷನಲ್ ಲಾ ಸ್ಕೂಲ್ ಬೆಂಗಳೂರು .
ಇವರ ಮಾತು ದೇವದಾಸಿ ಪದ್ದತಿಯನ್ನು ನಿರ್ಮೂಲನೆ ಮಾಡಲು ಮೊದಲು ನಾವು ಇತಂಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜೊತೆಗೆ ಬೇರೆವರನ್ನು ಪಾಲ್ಗೊಳ್ಳುವಂತೆ ಮಾಡುವುದು ತುಂಬಾ ಮುಖ್ಯ ಯಾಕೆಂದರೆ ಇಲ್ಲಿ ಬಂದಿರುವಂತಹ ಅಧಿಕಾರಿಗಳನ್ನು ನೋಡಿ ಮಕ್ಕಳು ಅವರು ಕೂಡ ದೊಡ್ಡ ದೊಡ್ಡ ಕನಸು ಕಾಣಲು ಸಾಧ್ಯವಾಗುತ್ತೆ. ದೇವದಾಸಿ ಇವತ್ತಿಗೆ ಕೊನೆಯಾಗಬೇಕಾದರೆ ಸಾಲ ಮಾಡಿ ಅಥವಾ ಕೂಲಿ ಮಾಡಿ ಮಕ್ಕಳ ನಾವು ಶಿಕ್ಷಣ ಕೊಡಿಸಬೇಕು ಜೊತೆಗೆ ಇಂಗ್ಲಿಷ್ ಮೀಡಿಯಂ ಶಾಲೆಗಳಲ್ಲಿ ಓದಿಸುವುದು ತುಂಬಾ ಅಗತ್ಯ ವಾಗಿದೆ, ನಾವು ದೇವರು, ಪೂಜೆ ಅಂತ ಹಲವಾರು ಕಾರ್ಯಕ್ರಮಗಳಿಗೆ ಹಣವನ್ನು ಖರ್ಚು ಮಾಡುತ್ತೆ ಹಾಗಾಗಿ ಇಂತಹ ಕಾರ್ಯಕ್ರಮಗಳಿಗೆ ಹಣವನ್ನು ಬಳಸದೆ ಮಕ್ಕಳ ಶಿಕ್ಷಣಕ್ಕೆ ಹಣವನ್ನು ಖರ್ಚು ಮಾಡುವುದು ಅಮೂಲ್ಯವಾದದ್ದು.
ದೇವದಾಸಿ ತಾಯಂದಿರ ಮಕ್ಕಳಿಗೆ ವಿದ್ಯಾ ಮತ್ತು ಕೌಶಲ್ಯ ತುಂಬಾ ಈ ಎರಡನ್ನು ಕಿತ್ತಿಕೊಳ್ಳಲು ಯಾರಿಂದಲೂ ಆಗಲ್ಲ ಹಾಗಾಗಿ ಶಿಕ್ಷಣ ತುಂಬಾ ಮುಖ್ಯ ಎಂದರು.
ಈ ಕಾರ್ಯಕ್ರಮದಲ್ಲಿ 6 ತಾಲೂಕಿನ ದೇವದಾಸಿ ತಾಯಂದಿರ ಮತ್ತು ಮಕ್ಕಳಿಗೆ ಹೊಲಿಗೆ ತರಬೇತಿ ಯಂತ್ರ ಮತ್ತು ಸರ್ಟಿಫಿಕೇಟ್ ವಿತರಿಸಲಾಯಿತು
ದೇವದಾಸಿ ತಾಯಂದಿರ ಮಕ್ಕಳ ಯುವಜನರಿಗೆ ಶೈಕ್ಷಣಿಕ ಧನಸಹಾಯವನ್ನು ಚೆಕ್ ನೀಡುವ ಮೂಲಕ ನೆರವೇರಿತು.ಕಾರ್ಯಕ್ರಮ ನಿರೂಪಿಸಿದ್ದು ಭೂಮಿಕಾ ಮತ್ತು ರಾಧಾ ಎಂ.
ವಂದನಾರ್ಪಣೆ ಮಾಡಿದ್ದು ಉಷಾ ಹೆಚ್, ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣಕ್ಕೆ ಹೋಗುವ ದೇವದಾಸಿ ಮಕ್ಕಳಿಗೆ ಶೈಕ್ಷಣಿಕ ಧನ ಸಹಾಯ, ನಿರುದ್ಯೋಗ ಯುವತಿಯರಿಗೆ ಹೊಲಿಗೆ ಮಷಿನ್, ಸರ್ಟಿಫಿಕೇಟ್ ವಿತರಣೆ ಮಾಡಿ, ಆಯ ಕ್ಷೆತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ದೇವದಾಸಿ ತಾಯಂದಿರು ಮತ್ತು ಮಕ್ಕಳಿಗೆ ಸನ್ಮಾನ ಮಾಡಲಾಯಿತು.
ಜಂಗಮ ಕಲೆಕ್ಟೀವ್ , ಕೋಡಿಹಳ್ಳಿ ಅವರಿಂದ “ಬಾಬ್ ಮಾರ್ಲಿ ” ಎಂಬ ನಾಟಕದ ಮುಖಾಂತರ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು…
ವರದಿ.. ಮ್ಯಾಗೇರಿ ಸಂತೋಷ.. ಹೂವಿನಹಡಗಲಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030