ರಾಜ್ಯ ಮಟ್ಟದ ದಸರಾ ಕಲಾ ಪ್ರದರ್ಶನಕ್ಕೆ ಕಲಾಕೃತಿಗಳ ಆಹ್ವಾನ…!!!

Listen to this article

ರಾಜ್ಯ ಮಟ್ಟದ ದಸರಾ ಕಲಾ ಪ್ರದರ್ಶನಕ್ಕೆ ಕಲಾಕೃತಿಗಳ ಆಹ್ವಾನ

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವ.. 2024ರಲ್ಲಿ ಲಲಿತಕಲೆ ಮತ್ತು ಕರಕುಶಲ ಉಪಸಮಿತಿ ವತಿಯಿಂದ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು, ಸಿದ್ಧಾರ್ಥನಗರ, ಮೈಸೂರು ಸಂಸ್ಥೆಯ ಆವರಣದಲ್ಲಿ 04/10/2024 ರಿಂದ 07/10/2024 ರವರೆಗೆ ನಡೆಯುವ ರಾಜ್ಯ ಮಟ್ಟದ ದಸರಾ ಕಲಾ ಪ್ರದರ್ಶನಕ್ಕೆ ಕಲಾಕೃತಿಗಳನ್ನು ಆಹ್ವಾನಿಸಲಾಗಿದೆ.

ಚಿತ್ರಕಲೆ, ಶಿಲ್ಪಕಲೆ,‌ ಗ್ರಾಫಿಕ್ಸ್ ಕಲೆ, ಛಾಯಚಿತ್ರ, ಅನ್ವಯ ಕಲೆ ವಿಭಾಗಗಳಲ್ಲಿ ವೃತ್ತಿಪರ ಹಾಗೂ ಹವ್ಯಾಸಿ ವಿಭಾಗಗಳಿರುತ್ತದೆ. ಸಾಂಪ್ರದಾಯಿಕ ಚಿತ್ರಕಲೆ, ಸಾಂಪ್ರದಾಯಿಕ ಶಿಲ್ಪಕಲೆ, ಕರಕುಶಲ ಕಲೆ / ಇನ್ಲೇ ವಿಭಾಗಗಳಲ್ಲಿ ಹವ್ಯಾಸಿ ವಿಭಾಗವಿರುವುದಿಲ್ಲ. ಎಲ್ಲಾ ವಿಭಾಗಗಳಲ್ಲಿ ಅತ್ಯುತ್ತಮ ಮೂರು ಕಲಾಕೃತಿಗಳಿಗೆ ಬಹುಮಾನಗಳನ್ನು ನೀಡಲಾಗುವುದು.

ಕಲಾಕೃತಿಗಳನ್ನು 30/09/2024 ರೊಳಗೆ ಬೆಳಗ್ಗೆ 10:30ರಿಂದ ಸಂಜೆ 5:30ರವರೆಗೆ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು (ಕಾವಾ) , ಸಿದ್ಧಾರ್ಥನಗರ, ಮೈಸೂರು – 570011, ಸಂಸ್ಥೆಯ ಕಛೇರಿ ಅವಧಿಯಲ್ಲಿ ಸಲ್ಲಿಸುವುದು. ಕಲಾಕೃತಿಗಳನ್ನು ಸಲ್ಲಿಸುವ ಕಲಾವಿದರು ಸಂಪೂರ್ಣ ವಿವರವನ್ನು ಸ್ವಯಂ ದೃಢೀಕರಣದೊಂದಿಗೆ ಉಪಸಮಿತಿಗೆ ತಲುಪಿಸುವುದು.


ವರದಿ.. ಮ್ಯಾಗೇರಿ ಸಂತೋಷ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend