ದೇಶಪ್ರೇಮ ಬೆಳೆಸಿಕೊಳ್ಳಿ
ಉಪನ್ಯಾಸಕ ರಾಮಕೃಷ್ಣ ದೊಡ್ಡಮನಿ ಅಭಿಮತ
ಪಟ್ಟಣದ ಜಿ ಪಿ ಜಿ ಪದವಿ ಪೂರ್ವ ಕಾಲೇಜಿನಲ್ಲಿ ಸ್ವಾಗತ ಸಮಾರಂಭ
ಹೂವಿನ ಹಡಗಲಿ: ಯುವಕರು ದುಶ್ಚಟಗಳಿಗೆ ಬಲಿಯಾಗದೆ ಸಾಮಾಜಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು
ಉಪನ್ಯಾಸಕ ರಾಮಕೃಷ್ಣ ದೊಡ್ಡಮನಿ ಅಭಿಮತ ವ್ಯಕ್ತಪಡಿಸಿದರು.
ಪಟ್ಟಣದ ಜಿ ಪಿ ಜಿ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ನಡೆದ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮ ತಂದೆ ತಾಯಿಗಳನ್ನೇ ನಿಜವಾದ ಹೀರೋಗಳೆಂದು ಭಾವಿಸಬೇಕು .ದೇಶ ಪ್ರೇಮವನ್ನು ಬೆಳೆಸಿಕೊಳ್ಳುವುದರ ಮೂಲಕ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ಹೇಳಿದರು.
ಇದೇ ಸಂದರ್ಭದಲ್ಲಿ ಕಾಲೇಜಿನ ವಿವಿಧ ಸಂಘಗಳ ಉದ್ಘಾಟನೆಯನ್ನು ಸಿಡಿಎಂಸಿ ಉಪಾಧ್ಯಕ್ಷರಾದ ಕೆ ಪತ್ರೇಶ್ ನೆರವೇರಿಸಿದರು.
ಕಾಲೇಜಿನ ಪ್ರಾಚಾರ್ಯರಾದ ಕೋರಿ ಹಾಲೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಸ್ ಕೆ ಬಾಲಕಿಯರ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ಎ ಕೊಟ್ರಗೌಡ ಹಾಗೂ ಶಿಕ್ಷಕರಾದ ಸಿ ಚಂದ್ರಪ್ಪ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕಾಲೇಜಿನ ಉಪನ್ಯಾಸಕರಾದ ಶಬೀನಾ ಶಂಕರ್ ಬೆಟಗೇರಿ ವಿರೂಪಾಕ್ಷಪ್ಪ ಬಡಿಗೇರ್ ಪ್ರದೀಪ್ ಕುಮಾರ್ ಜೋಶಿ ಇರ್ಫಾನ ಬಾನು,ಎಂ ಶಿವಪ್ಪ, ಮಧು ನಾಯಕ್, ಮಹಮ್ಮದ್ ರಫಿ ಮತ್ತು ಜಿ ವಿಶ್ವ ನಂದಿನಿ ಮತ್ತು ಅತಿಥಿ ಉಪನ್ಯಾಸಕರು ಸಿಬ್ಬಂದಿ
ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.
ವರದಿ.. ಮ್ಯಾಗೇರಿ ಸಂತೋಷ ಹೂವಿನಹಡಗಲಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030