ಮಲ್ಲಿಗೆ ನಾಡಲ್ಲಿ ಈದ್ ಮಿಲಾದ್ ಹಬ್ಬವನ್ನು ಸಂಭ್ರಮದಿಂದ ಆಚರಣೆ
ಹೂವಿನ ಹಡಗಲಿ ಪಟ್ಟಣದಲ್ಲಿ ಮುಸ್ಲಿಂ ಬಾಂಧವರು ಈದ್ ಮಿಲಾದ್ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿದ್ದರು.
ಪ್ರವಾದಿ ಮಹಮ್ಮದ್ ಪೈಗಂಬರ್ ಜನಿಸಿದ ದಿನವನ್ನು ಶಾಂತಿ ಸೌಹಾರ್ದತೆಯಿಂದ ನಗರದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮೂಲಕ ಮಹಮ್ಮದ್ ಪೈಗಂಬರ್ ಸಂದೇಶವನ್ನು ಸಾರುತ ರಸ್ತೆ ಮಧ್ಯದಲ್ಲಿ ಬರುವ ಜನರಿಗೆ ಹಾಲು ಹಣ್ಣು ಜ್ಯೂಸ್ ಪಾಕೆಟ್ ನೀರಿನ ಪಾಕೆಟ್ ಹಂಚುವುದರ ಮೂಲಕ ಸಮಾಜಕ್ಕೆ ಶಾಂತಿ ಸಂದೇಶ ಸಾರಿದರು. ಇಡೀ ಪಟ್ಟಣದ ಜನತೆ ಯಾವುದೇ ಜಾತಿ ಭೇದ ಭಾವವಿಲ್ಲದೆ ಮೆರವಣಿಗೆಯನ್ನು ಕಣ್ಣು ತುಂಬಿಕೊಂಡಿತ್ತು . ಮೆರವಣಿಗೆ ಸಹಕಾರ ನೀಡಿದ ಪೊಲೀಸ್ ಇಲಾಖೆಗೂ, ಎಲ್ಲಾ ಧರ್ಮದ ಬಾಂಧವರಿಗೂ ಧನ್ಯವಾದಗಳು ತಿಳಿಸಿದರು…
ವರದಿ ಮ್ಯಾಗೇರಿ ಸಂತೋಷ ಹೂವಿನಹಡಗಲಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030