ಜೀವನದಲ್ಲಿ ಶಾಂತಿ ನೆಮ್ಮದಿಯಿಂದ ಬದುಕಲು ಕಲಿಯಬೇಕು ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ..
ಹೂವಿನ ಹಡಗಲಿ ಒಳ್ಳೆಯವರ ಸಹವಾಸ ಮತ್ತು ಅವರ ವಿಚಾರ ನಮ್ಮೊಳಗೆ ಒಳ್ಳೆತನವನ್ನು ಬೆಳೆಸುತ್ತವೆ ಹಾಗಾಗಿ ಶರಣರು ಸತ್ಸಂಗ ಸದ್ವಿಚಾರಗಳಿಗೆ ಭಾರಿ ಪ್ರಾಶಸ್ತ್ಯ ನೀಡಿದರು ಎಂದು ಕೊಪ್ಪಳ ಗವಿಸಿದ್ದೇಶ್ವರ ಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಹೇಳಿದರು ಹೂವಿನ ಹಡಗಲಿ ತಾಲೂಕಿನ ಒಳಗುಂದಿ ಗ್ರಾಮದಲ್ಲಿ ಶ್ರೀ ವಿಘ್ನೇಶ್ವರ ಯುವಕರ ಸಂಘ ದ ಆಯೋಜಿಸಿದ ಸುವರ್ಣ ಗಣೇಶ ಮಹೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು ಜೀವನದಲ್ಲಿ ಶಾಂತಿ ನೆಮ್ಮದಿಯಿಂದ ಬದುಕಲು ನಾವು ಕಲಿಯಬೇಕು ಉಸಿರು ಇರೋವರೆಗೂ ನಾನು ನಮ್ಮದು ಎನ್ನುವುದು ಈ ದೇಹದಲ್ಲಿ ಉಸಿರು ನಿಂತ ಮೇಲೆ ಎಲ್ಲವನ್ನು ಬಿಟ್ಟು ಹೋಗುತ್ತೇವೆ. ಸೌಹಾರ್ದತೆ, ಏಕತೆ, ಸಮಾರಾಸ್ಯದಿಂದ ಜೀವನ ನಡೆಸಿದರೆ ಮಾತ್ರ ನಮ್ಮ ಬದುಕಿಗೆ ಒಂದು ಅರ್ಥ ಬರುತ್ತದೆ. ಎಂದರು ಅಡಗಲಿ ಗವಿಸಿದ್ದೇಶ್ವರ ಮಠದ ಡಾ ಹಿರಿ ಶಾಂತವೀರ ಮಹಾಸ್ವಾಮಿಗಳು ಮಾತನಾಡಿ ಹಬ್ಬಗಳು ನಮ್ಮ ಸಂಸ್ಕೃತಿ ಬಿಂಬಿಸುವ ಮಾನವೀಯ ಮೌಲ್ಯಗಳನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಒಳಗುಂದಿ ಗ್ರಾಮದ ಈ ಗಣೇಶೋತ್ಸವ ಕಳೆದ 50 ವರ್ಷಗಳಿಂದ ಸಾಮಾಜಿಕ ಕಳಕಳಿಯೊಂದಿಗೆ ಸಾಗಿ ಬಂದಿರುವುದು, ಹೆಮ್ಮೆಯ ವಿಷಯ ಎಂದರು. ಈ ಸಂದರ್ಭದಲ್ಲಿ ಅಪಾರ ಸಂಖ್ಯೆಯ ಭಕ್ತರು ಇದ್ದರು…
ವರದಿ ಮ್ಯಾಗೇರಿ ಸಂತೋಷ ಹೂವಿನಹಡಗಲಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030