ಗಣೇಶ ಉತ್ಸವವನ್ನು ಸಂಭ್ರಮದಿಂದ ವಿಸರ್ಜಿಸಿದ ಉತ್ತಂಗಿ ಗ್ರಾಮಸ್ಥರು
ಹೂವಿನಹಡಗಲಿ ತಾಲೂಕಿನ ಉತ್ತಂಗಿ ಗ್ರಾಮದಲ್ಲಿ 9ನೇ ವರ್ಷದ ಗಣೇಶ ಸಂಭ್ರಮಾಚರಣೆ ಮಾಡಲಾಯಿತು. ಈ ಗ್ರಾಮದಲ್ಲಿ ವಿಶಿಷ್ಟ ರೀತಿಯಲ್ಲಿ ಜಾತಿಭೇದ ಕುಲ ಎಲ್ಲಾ ಮರೆತು ಸಾಲಾಗಿ ಹಬ್ಬ ಆಚರಣೆ ಮಾಡಲಾಯಿತು ಈ ಹಬ್ಬದ ಸಂಭ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಹಾಗೂ ಊರಿನ ಮುಖಂಡರು ಭಾಗವಹಿಸಿದ್ದರು. ಶಿವರಾಜ್, ಕೊಟ್ರೇಶ್, ಸಿದ್ದೇಶ, ಗಿರೀಶ್ ಸಂತೋಷ್, ಮಾತನಾಡಿ ಸಾಂಸ್ಕೃತಿಕ ಕಾರ್ಯಕ್ರಮಗಳ ಮುಖಾಂತರ ಪ್ರತಿಯೊಂದು ಏರಿಯಾದ ಗಣಪತಿ ವಿಗ್ರಹಗಳನ್ನು ಸಾಲಾಗಿ ಮೆರವಣಿಗೆ ಮುಖಾಂತರ ವಿಸರ್ಜಿಸಲು ಊರಿನ ಪ್ರಮುಖ ಗಣ್ಯರು ಮಹಾತ್ವರಾದ ಪಾತ್ರವಹಿಸಿದ್ದಾರೆ ಅವರಿಗೆ ಈ ಮುಖಾಂತರ ದನ್ಯವಾದಗಳನ್ನು ತಿಳಿಸಲು ಇಚ್ಛಿಸುತ್ತೇವೆ ಎಂದು ಯುವಕರು ಅಭಿಪ್ರಾಯ ವ್ಯಕ್ತಪಡಿಸಿದರು, ಇಂತಹ ಸಂಭ್ರಮಾಚರಣೆಗೆ ಪೋಲಿಸ್ ಇಲಾಖೆ ಕೂಡ ತುಂಬಾ ಸಹಕಾರ ನೀಡಿದ್ದು ಅವರಿಗೂ ಕೂಡನು ಧನ್ಯವಾದಗಳು ತಿಳಿಸಿ ಯುವಕರು ಗಣೇಶ ಉತ್ಸವವನ್ನು ಸಂಭ್ರಮದಿಂದ ಆಚರಿಸಿದರು ಗ್ರಾಮ ಪಂಚಾಯತಿ ಸದಸ್ಯರ ಮತ್ತು ಯುವಕರ ಮುಖಾಂತರ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕಾರಣವಾಯಿತು…
ವರದಿ.. ಮ್ಯಾಗೇರಿ ಸಂತೋಷ ಹೂವಿನಹಡಗಲಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030