ಬೆಂಗಳೂರು.ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನ ರಾಜ್ಯ ಮಂಡಳಿ ಸಂಚಾಲಕರ ಸಭೆ ಮಲ್ಲೇಶ್ವರಂ ಘಾಟೆ ಭವನದ ಕಛೇರಿಯಲ್ಲಿ ನಡೆಯಿತು ಸಭೆಯನ್ನು ಉದ್ದೇಶಿಸಿ ರಾಷ್ಟ್ರೀಯ ಮಂಡಳಿ ಸದಸ್ಯರಾದ ಕಾ:ಡಾ: ಮಹೇಶ್ ಕುಮಾರ್ ರಾಠೋಡ್ ರವರು ಮಾತನಾಡಿ ಕೇಂದ್ರ ಸರ್ಕಾರ ದಲಿತರನ್ನು ಕಡೆಗಣಿಸುತ್ತಿದ್ದು.ಭಾರತ ದೇಶದಲ್ಲಿ ಬ್ರಿಟಿಷ್ ಆಡಳಿತ ನಡೆಯುತ್ತಿದೆ ಏನೋ ಅನಿಸುತ್ತದೆ.ಏಕೆಂದರೆ ಇತ್ತೀಚಿನ ರಾಜಕೀಯ ಬೆಳವಣಿಗೆಗಳನ್ನು ನೋಡಿದರೆ ದಲಿತರ ಮೇಲೆ ಮಾರಾಣಾಂತಿಹ ಹಲ್ಲೆ.ಮಹಿಳೆಯರ ಮೇಲಿನ ಹಲ್ಲೆ. ಪದೆ ಪದೇ ನಡಿಯುತ್ತಿದ್ದರು ಕಂಡು ಕಾಣದಂತೆ ವರ್ತಿಸುತ್ತಿದೆ.ರಕ್ಷಣೆ ಕೊಡುವ ಸರ್ಕಾರಗಳೇ ಈ ರೀತಿ ಮಾಡಿದರೆ ಮುಂದಿನ ಪೀಳಿಗೆಯ ಗತಿ ಏನು.ಹಾಗೂ ರಾಜ್ಯದಲ್ಲಿಯೂ ಕೂಡ ಮೋನ್ನೆ ಮೋನ್ನೆ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಸಂಗನಾಳ ಗ್ರಾಮದಲ್ಲಿ ದಲಿತ ಯುವಕ ಈರಪ್ಪ ಬಂಡಿಹಾಳ್ ಇವರನ್ನು ಮುದುಕಪ್ಪ ಹಡಪದ ಎಂಬ ವ್ಯಕ್ತಿ ದಲಿತ ಎಂಬ ಕಾರಣಕ್ಕೆ ಕ್ಷೌರ ಮಾಡಲು ನಿರಾಕರಿಸಿ ಕೋಲೆ ಮಾಡಿರುವ ಘಟನೆ ನಡೆದಿದೆ.ಹಾಗೂ ಸರ್ಕಾರದಲ್ಲಿ ಹಲವಾರು ವಿವಿಧ ಯೋಜನೆಗಳಿಗೆ ದಲಿತರ ಹಣ ವರ್ಗಾವಣೆ.ಮತ್ತು ಬಳಕೆ ಮಾಡಿದವರನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು.ಇದೆ ರೀತಿಯೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದಲಿತ ಹಕ್ಕುಗಳ ಕಸಿಯಲು ಹೊದರೆ ಮುಂದಿನ ದಿನಗಳಲ್ಲಿ.ಪಾರ್ಲಿಮೇಂಟ್ ಚಲೋ ಹೋರಾಟ ಮಾಡಲಾಗುವುದೆಂದರು.ಹಾಗೂ ರಾಜ್ಯ ಉಸ್ತುವಾರಿ ಸಂಚಾಲಕರಾದ ಕಾಮ್ರೇಡ್ ಡಾ.ಕೆ.ಎಸ.ಜನಾರ್ದನ ರವರು ಮಾತನಾಡಿ ನವೆಂಬರ್ ತಿಂಗಳಲ್ಲಿ ದಲಿತ ಹಕ್ಕುಗಳ ಆಂದೋಲನ ರಾಜ್ಯ ಸಮ್ಮೇಳನ ದಾವಣಗೆರೆಯಲ್ಲಿ ನಡೆಸಲಾಗುವುದು. ಅದರ ಪೂರ್ವಕವಾಗಿ ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಸಮ್ಮೇಳನ ಮಾಡುವಂತೆ ತಿಳಿಸಿದರು . ಸಭೆಯಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷದ ರಾಜ್ಯ ಕಾರ್ಯದರ್ಶಿಗಳಾದ ಕಾಮ್ರೇಡ್ ಸಾತಿ ಸುಂದರೇಶ್.ದಲಿತ ಹಕ್ಕುಗಳ ಆಂದೋಲನ ರಾಜ್ಯ ಸಂಚಾಲಕರಾದ ವಿಜಯನಗರ ಜಿಲ್ಲೆಯ ಹಲಗಿ ಸುರೇಶ. ದಾವಣಗೆರೆ ಜಿಲ್ಲೆಯ ಅವರಗೇರಿ ವಾಸು.ಬಳ್ಳಾರಿ ಜಿಲ್ಲೆಯ ಶೇಖರ್ ಬಾಬು.ಕೊಡಗು ಜಿಲ್ಲೆಯ ರಮೇಶ್ ಮಾಯಮುಡಿ.ಬೆಂಗಳೂರು ಜಿಲ್ಲೆಯ ಗೋರವಯ್ಯ.ಬಾಡದ ವೀರಣ್ಣ.ಗುಲ್ಬರ್ಗ ಜಿಲ್ಲೆಯ ಅನೀಲ ಕುಮಾರ್. ಹಾಗೂ ಅನೇಕ ಜಿಲ್ಲೆಯ ಮುಖಂಡರು ಭಾಗವಹಿಸಿದ್ದರು…
ವರದಿ. ಸಂತೋಷ ಮ್ಯಾಗೇರಿ ಹೂವಿನಹಡಗಲಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030