ಮಂಗಗಳ ಹಾವಳಿ ನಿರ್ಲಕ್ಷ ತೋರುತ್ತಿರುವ ಅರಣ್ಯ ಅಧಿಕಾರಿಗಳು…!!!

ಮಂಗಗಳ ಹಾವಳಿ ನಿರ್ಲಕ್ಷ ತೋರುತ್ತಿರುವ ಅರಣ್ಯ ಅಧಿಕಾರಿಗಳು
ಹಗರಬೊಮ್ಮನಹಳ್ಳಿ ತಾಲೂಕಿನ ಸೊನ್ನ ಗ್ರಾಮದಲ್ಲಿ ಮಂಗಗಳ ಗುಂಪುಗಳಿಂದ ಜನರಿಗೆ ತುಂಬಾ ತೊಂದರೆ ನೀಡುತ್ತಿದ್ದು ಜನಗಳು ಭಯ ಬೀತೆಯಿಂದ ಓಡಾಡುವ ಸಂದರ್ಭ ಉಂಟಾಗಿದೆ ಮಕ್ಕಳನ್ನು ಶಾಲೆಗೆ ಕಳುಹಿಸಲು ದೊಣ್ಣೆಗಳನ್ನು ಹಿಡಿದುಕೊಂಡು ಕಳಿಸುವ ಪರಿಸ್ಥಿತಿ ಬಂದಿದೆ ಕಳೆದ ವಾರದಲ್ಲಿ 8ನೇ ತರಗತಿಯ ವಿದ್ಯಾರ್ಥಿ ಎಂ ವಿನಾಯಕ ನಿಗೆ (14)ಮಂಗಗಳ ಗುಂಪು ದಾಳಿ ಮಾಡಿ ಬಲಗೈ ತುಂಬಾ ಗಾಯವಾಗಿದ್ದು.ಮತ್ತು ಮುಖದ ಮೇಲೆ ಸಣ್ಣಪುಟ್ಟ ಗಾಯಗಾಳಗಿದ್ದು. ವಿಚಾರಿಸಲು ಯಾವ ಅಧಿಕಾರಿಯಾಗಲಿ ಬಂದು ಮಗುವಿನ ಆರೋಗ್ಯ ಬಗ್ಗೆ ವಿಚಾರಿಸಿ ಇರುವುದಿಲ್ಲ. ಮಂಗಗಳ ಗುಂಪುನ್ನು ಊರಿನಿಂದ ಕಾಡಿಗೆ ಕಳಿಸುವಂತೆ ಗ್ರಾಮದ ಜನರು ಮನವಿ ಮಾಡಿದರು ಅಧಿಕಾರಿಗಳು ನಿರ್ಲಕ್ಷ ತೋರುತ್ತಿದ್ದಾರೆ. ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ಅರಣ್ಯ ಅಧಿಕಾರಿಗಳ ಕಚೇರಿ 2012 ರಿಂದ ಇಲ್ಲಿಯವರೆಗೆ ತೆಗೆದೇ ಇಲ್ಲ ಹಗರಿ ಬೊಮ್ಮನಹಳ್ಳಿಯಲ್ಲಿ ಅರಣ್ಯ ಕಚೇರಿ ಎಲ್ಲಿದೆ ಅಂತ ಗೊತ್ತಾಗದೆ ಗ್ರಾಮದ ಜನರು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಮಂಗಗಳ ಗುಂಪಿನ ಹಾವಳಿಯ ಬಗ್ಗೆ ತಿಳಿಸಿದರು, ಪಂಚಾಯತಿ ಅಧಿಕಾರಿಗಳು ಮಂಗಗಳ ಗುಂಪನ್ನು ಕಾಡಿನ ಕಡೆಗೆ ಓಡಿಸುತ್ತೇವೆ ಎಂದು ಸಾರ್ವಜನಿಕರಿಗೆ ಮನವಿ ಮಾಡಿದರು ಆದರೆ ಇಲ್ಲಿಯವರೆಗೂ ಯಾವ ಕೆಲಸನೂ ಆಗದೆ ಅರಣ್ಯ ಇಲಾಖೆ ಎಲ್ಲಿದೆ ಎಂದು ತಿಳಿಯದೆ, ಮಂಗಗಳ ಗುಂಪಿನ ಹಾವಳಿ ತಡೆಯಲಾರದೆ ಜನರು ತುಂಬಾ ಭಯಭೀತಿಯಿಂದ ಓಡಾಡುವ ಪರಿಸ್ಥಿತಿ ಬಂದಿದೆ. ಕೂಡಲೆ ಸಂಬಂಧಪಟ್ಟ ಅರಣ್ಯ ಅಧಿಕಾರಿಗಳು ಗ್ರಾಮಕ್ಕೆ ಬೇಟೆಕೊಟ್ಟು ಸಾರ್ವಜನಿಕರ ಸಭೆ ನಡೆಸಿ ಅರಣ್ಯ ಅಧಿಕಾರಿಗಳ ಕಚೇರಿ ಎಲ್ಲಿದೆ ಎಂದು ತಿಳಿಸಬೇಕು, ಜೊತೆಗೆ ಮಂಗಗಳ ಗುಂಪನ್ನು ಕಾಡಿನ ಕಡೆಗೆ ಮರಳಿಸುವಂತೆ ಸಾರ್ವಜನಿಕರು ಮನವಿ ಮಾಡಿಕೊಳ್ಳುತ್ತಿದ್ದಾರೆ,..

ವರದಿ ಮ್ಯಾಗೇರಿ ಸಂತೋಷ್ ಹೂವಿನಹಡಗಲಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *