ಸರ್ಕಾರದ ಮತ್ತು ಪೊಲೀಸ್ ಇಲಾಖೆಯ ವಿರುದ್ಧ
ತಹಶೀಲ್ದಾರ್ ಮುಖಾಂತರರಾಜ್ಯಪಾಲರಿಗೆ ಮನವಿ
ಸಲ್ಲಿಸಿದಂತಹ ಅಂಬೇಡ್ಕರ್ ಸ್ವಾಭಿಮಾನಿ ಸೇನೆ
ಹಿರಿಯೂರು:
ಮೈಸೂರು ಜಿಲ್ಲೆ. ಟಿ. ನರಸೀಪುರ ತಾಲ್ಲೂಕು ಗೋಪಾಲಪುರ ಗ್ರಾಮದ ಮಾದಿಗ ಜನಾಂಗದ ಗುಡಿಸಲುಗಳು ಸರ್ವೆನಂಬರ್ 7ರಲ್ಲಿ ಸುಮಾರು 216 ಗುಡಿಸಲುಗಳನ್ನು ಧ್ವಂಸಗೊಳಿಸಿದ ಸರ್ಕಾರದ ಮತ್ತು ಪೊಲೀಸ್ ಇಲಾಖೆ ವಿರುದ್ಧ ತಹಶೀಲ್ದಾರ್ ಮುಖಾಂತರ ರಾಜ್ಯಪಾಲರಿಗೆ ಶಿಸ್ತು ಕ್ರಮವಹಿಸುವಂತೆ ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಶುಕ್ರವಾರ ಮನವಿ ಸಲ್ಲಿಸಿದರು.
ಸರ್ಕಾರ ಹಾಗೂ ಪೊಲೀಸ್ ಇಲಾಖೆಯ ವಿರುದ್ಧ ತಮಟೆ ಚಳುವಳಿ ಹಮ್ಮಿಕೊಳ್ಳಲಾಗಿತ್ತು. ಸಾರ್ವಜನಿಕರ ಆಸ್ಪತ್ರೆ ಮುಂಭಾಗ ಇರುವ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ತಾಲ್ಲೂಕು ಕಚೇರಿಯವರಿಗೂ ಪಾದಯಾತ್ರೆ ನಡೆಸಿದರು.
ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಕೆ.ರಾಮಚಂದ್ರ, ಅಲ್ಪಸಂಖ್ಯಾತರ ಘಟಕ ಜಿಲ್ಲಾಧ್ಯಕ್ಷರಾದ ಸಾಧಿಕ್ ಸೀಮೆಎಣ್ಣೆ, ತಾಲ್ಲೂಕು ಅಧ್ಯಕ್ಷರಾದ ಆರ್.ಶಿವರಾಜಕುಮಾರ್ , ತಾಲ್ಲೂಕು ಉಪಾಧ್ಯಕ್ಷರಾದ ಲಕ್ಷ್ಮಣ್ ರಾವ್, ಓಂಕಾರಪ್ಪ, ನಿರಂಜನ್, ತಾಲ್ಲೂಕು ಸಂಘಟನಾ ಕಾರ್ಯದರ್ಶಿ ರಂಗಸ್ವಾಮಿ, ತಾಲ್ಲೂಕು ಕಾರ್ಯದರ್ಶಿ ಕೆಂಚಣ್ಣ ಮತ್ತು ಕೃಷ್ಣಪ್ಪ, ನಗರಾಧ್ಯಕ್ಷರಾದ ನವೀನ್, ಮಾನವ ಬಂಧುತ್ವ ವೇದಿಕೆಯ ತಾಲ್ಲೂಕು ಸಂಚಾಲಕರಾದ ಕೂನಿಕೆರೆಮಾರುತೇಶ್, ತಾಲ್ಲೂಕು ಕಾರ್ಯದರ್ಶಿ ಡೆನಿಲಾ, ರಫಿ, ನರಸಿಂಹಮೂರ್ತಿ, ಗುರುಮೂರ್ತಿ, ಸಂದೀಪ,ಅಬ್ಬೊ, ಸುದೀಪ, ಪ್ರಶಾಂತ್, ಸಾಗರ್, ತಿಪ್ಪೇಸ್ವಾಮಿ ಕಳವಿಭಾಗಿ, ಗುಳಗೊಂಡನಹಳ್ಳಿ, ಗ್ರಾಮಶಾಖೆ ಗೌರವಾಧ್ಯಕ್ಷರಾದ ಶಂಕರಪ್ಪ, ಲಕ್ಷ್ಮಣ ಕಳವಿಭಾಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030