ನೂತನ ರೋಟರಿ ಸದಸ್ಯರ ಪದಗ್ರಹಣ ಸಮಾರಂಭ ನೂತನಅಧ್ಯಕ್ಷರಾಗಿ ಕೆ.ಎ.ವರುಣ್ ಅಧಿಕಾರ ಸ್ವೀಕಾರ…!!!

Listen to this article

ನಗರದ ರೋಟರಿ ಸಂಸ್ಥೆಯ 2025-26 ನೇ ಸಾಲಿನ
ನೂತನ ರೋಟರಿ ಸದಸ್ಯರ ಪದಗ್ರಹಣ ಸಮಾರಂಭ
ನೂತನಅಧ್ಯಕ್ಷರಾಗಿ ಕೆ.ಎ.ವರುಣ್ ಅಧಿಕಾರ ಸ್ವೀಕಾರ
ಹಿರಿಯೂರು :
ರೋಟರಿ ಸಂಸ್ಥೆ ಅಂತರಾಷ್ಟ್ರೀಯ ಮಟ್ಟದ ದೊಡ್ಡ ಸಾಮಾಜಿಕ ಸೇವಾಸಂಸ್ಥೆಯಾಗಿದ್ದು, ಸೂರ್ಯಚಂದ್ರರು ಇರುವವರೆಗೆ ರೋಟರಿಸಂಸ್ಥೆ ಇರುತ್ತದೆ. ಪಲ್ಸ್ ಪೋಲಿಯೋ ನಿರ್ಮೂಲನೆಗೆ ರೋಟರ್ ಇಂಟರ್ ನ್ಯಾಷನಲ್ ಸಂಸ್ಥೆ ಹೆಚ್ಚು ಒತ್ತು ಕೊಡುತ್ತಿರುವುದರಿಂದ ಪಲ್ಸ್ ಪೋಲಿಯೋ ಮುಕ್ತ ಭಾರತವಾಗಿದೆ ಎಂಬುದಾಗಿ ರೋಟರಿ ಜಿಲ್ಲಾ ಗವರ್ನರ್ ರೊಟೇರಿಯನ್ ಪಿ.ಹೆಚ್.ಎಫ್. ಎಂ.ಕೆ.ರವೀಂದ್ರ ಅವರು ಹೇಳಿದರು.
ನಗರದ ರೋಟರಿ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ 2025-2026 ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ, ಅವರು ಮಾತನಾಡಿದರು.
ಕಳೆದ 2024-2025 ನೇ ಸಾಲಿನ ರೋಟರಿ ಅಧ್ಯಕ್ಷರಾದ ಜಿ.ಎಸ್.ಕಿರಣ್ ಮತ್ತು ಕಾರ್ಯದರ್ಶಿ ರಾಘವೇಂದ್ರಚಾರ್ ರವರು ಅತ್ಯಂತ ಸಾಮಾಜಿಕ ಕಾಳಜಿ ಹೊಂದಿ ಉತ್ತಮ ಜನಪರ ಸಾಮಾಜಿಕ ಸೇವೆಗಳನ್ನು ಮಾಡುವ ಮೂಲಕ ರೋಟರಿಸಂಸ್ಥೆ ಉತ್ತಮ ಸಂಸ್ಥೆಯಾಗಿ ಹೆಸರು ಮಾಡಿದೆ ಎಂಬುದಾಗಿ ಅವರು ಪ್ರಶಂಸಿಸಿದರು.
ಕಳೆದ 2025- 26 ನೇ ಸಾಲಿನ ರೋಟರಿಯ ನೂತನ ಅಧ್ಯಕ್ಷರಾಗುತ್ತಿರುವ ರೋಟೇರಿಯನ್ ಕೆ.ಎ.ವರುಣ್ ಮತ್ತು ಕಾರ್ಯದರ್ಶಿ ರೂಟೇರಿಯನ್ ಡಿ. ವಿಕಾಸ್ ಜೈನ್ ಮತ್ತು ಹೊಸ ಪದಾಧಿಕಾರಿಗಳಿಗೆ ರೋಟರಿ ಪಿನ್ ಹಾಕುವ ಮೂಲಕ ರೋಟರಿ ಪದಗ್ರಹಣದ ಪ್ರಮಾಣವಚನ ಬೋಧನೆ ಮಾಡಿ ಇನ್ನು ಹೆಚ್ಚಿನ ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಉತ್ತಮ ರೋಟರಿ ಎಂದು ಹೆಸರು ಪಡೆಯಬೇಕು ಎಂಬುದಾಗಿ ಶುಭ ಹಾರೈಸಿದರು.
ರೋಟರಿ ರೆಡ್ ಕ್ರಾಸ್ ಸಂಸ್ಥೆಗಳು ಸಾರ್ವಜನಿಕ ಸರಕಾರಿ ಆಸ್ಪತ್ರೆಯಲ್ಲಿನ ಹೊರ ಮತ್ತು ಒಳರೋಗಿಗಳಿಗೆ ಉಚಿತ ಊಟವನ್ನು ವಾರದಲ್ಲಿ ನಾಲ್ಕು ದಿನಗಳು ನೀಡುತ್ತಿರುವುದು ಸಂತೋಷದ ವಿಚಾರ ಎಂಬುದಾಗಿ ಅವರು ಶ್ಲಾಘಿಸಿದರಲ್ಲದೆ, ಹಿಂದಿನ ರೋಟರಿ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ಹಾಗೆ ತಾವು ಸಹ ತಮ್ಮ ಸೇವಾ ಕಾರ್ಯಗಳ ಮಾಡುವ ಮೂಲಕ ರೋಟರಿಸಂಸ್ಥೆಗೆ ಹೆಸರುತನ್ನಿ ಎಂಬುದಾಗಿ ನೂತನ ಪದಾಧಿಕಾರಿಗಳಿಗೆ ಶುಭ ಕೋರಿದರು.
2025- 26 ನೇ ಸಾಲಿನ ರೋಟರಿ ಅಧ್ಯಕ್ಷರು ಕೆ.ಎ. ವರುಣ್ ಅವರು ಪದಗ್ರಹಣ ಸ್ವೀಕರಿಸಿ ಮಾತನಾಡಿ ಈ ಅಧ್ಯಕ್ಷ ಸ್ಥಾನ ದೊರೆತಿರುವುದು ಸಂತಸದ ವಿಚಾರವಾಗಿದ್ದರೂ ಬಹು ಜವಾಬ್ದಾರಿತವಾಗಿದ್ದು, ಸಾಮಾನ್ಯ ಜನರ ಆರೋಗ್ಯ ರಕ್ಷಣೆ ಸೇವಾ ಕಾರ್ಯಗಳ ಜೊತೆಗೆ ಶಿಕ್ಷಣಕ್ಕಾಗಿ ಒತ್ತು ಕೊಡುವುದರ ಜೊತೆಗೆ ಹೆಚ್ಚು ಹೆಚ್ಚು ಸೇವಾ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ನನ್ನ ನೂತನ ಕಾರ್ಯದರ್ಶಿ ಡಿ. ವಿಕಾಸ್ ಜೈನ್ ಮತ್ತು ಪದಾಧಿಕಾರಿಗಳ ದಾನಿಗಳ ಸಹಕಾರಗಳೊಂದಿಗೆ ಮುನ್ನಡೆಯುತ್ತೇನೆ, ಈ ಕೆಲಸಕ್ಕೆ ರೆಡ್ ಕ್ರಾಸ್ ಸಂಸ್ಥೆಯು ಸಹ ಸಹಕಾರ ನೀಡುವಂತೆ ಕೋರಿದರು.
ಈ ಸಾಲಿನ ನೂತನ ಪದಾಧಿಕಾರಿಗಳಾಗಿ ರೋಟರಿಯ ಐ.ಪಿ.ಪಿ.ಜಿ ಎಸ್. ಕಿರಣ್ ಕುಮಾರ್ , ಸಹ ಕಾರ್ಯದರ್ಶಿ ರಾಘವೇಂದ್ರ ಮತ್ತು ಬಿ.ಕೆ.ನಾಗಣ್ಣ, ಎಂ.ಎಸ್.ರಾಘವೇಂದ್ರ, ಸಣ್ಣಭೀಮಣ್ಣ, ಹೆಚ್. ಎಸ್. ಪ್ರಶಾಂತ್, ಹೆಚ್. ಕಿರಣ್, ಎಂ.ವಿ.ಹರ್ಷ, ಡಿ ದೇವರಾಜ್ ಮೂರ್ತಿ, ಎಸ್. ಜೋಗಪ್ಪ, ವಿ.ವಿಶ್ವನಾಥ್, ಆರ್. ಅನಿಲ್ ಕುಮಾರ್ , ಡಾ. ವೆಂಕಟೇಶ್, ಧನರಾಜ್ ಛಾಜೆಡ್, ಎಂ.ಯು. ಶಿವರಾಂ, ಹೆಚ್. ವೆಂಕಟೇಶ್, ಎ. ಬಾಲಾಜಿ, ಚಂದ್ರಹಾಸ್, ರಾಘವೇಂದ್ರಚಾರ್, ಕೆ. ವೆಂಕಟರಾಘವನ್, ಎಸ್. ಎಲ್. ರಿತೇಷ್, ಚಂದ್ರಕೀರ್ತಿ ಗುಜ್ಜಾರ್, ಎಸ್. ಬಿ. ಸಚಿನ್ ಗೌಡ ಇವರುಗಳಿಗೆ ಆಯ್ಕೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ನಗರದ ವಿವಿಧ ಸಂಘಸಂಸ್ಥೆಗಳ ಮುಖ್ಯಸ್ಥರು ಹಾಗೂ ಗಣ್ಯ ವ್ಯಕ್ತಿಗಳಿಂದ ನೂತನ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳಿಗೆ ಪುಷ್ಪಮಾಲೆಗಳನ್ನು ಹಾಕಿ, ಶುಭಹಾರೈಸಲಾಯಿತು. ಹಾಗೂ ಈ ಸಾಲಿನ ಪ್ರತಿಭಾವಂತ ಎಸ್. ಎಸ್. ಎಲ್. ಸಿ. ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಶ್ರೀಮತಿ ಸೀತಾಶ್ರೀನಿವಾಸರವರು ಪ್ರತಿಭಾಪುರಸ್ಕಾರ ನೀಡಿ, ಗೌರವಿಸಿ, ಗೌರವಧನ ವಿತರಿಸಿದರು.
ಈ ಕಾರ್ಯಕ್ರಮದಲ್ಲಿ ಹಿರಿಯ ರೋಟೇರಿಯನ್ ಗಳಾದ ಎಲ್.ಆನಂದಶೆಟ್ಟಿ, ಹೆ.ಚ್.ಎಂ.ಬಸವರಾಜ್, ಟಿ.ಮಲ್ಲೇಶಪ್ಪ, ಆರ್. ಎಸ್. ವಸಂತ್ ಕುಮಾರ್, ಹೆಚ್.ಎಸ್.ಸುಂದರ್ ರಾಜ್, ಹೆಚ್ .ಆರ್. ವಸಂತ್, ಇತರೆ ರೋಟರಿ ಮಿತ್ರರು, ಇನ್ಹರ್ ವೀಲ್ಹ್ ನೂತನ ಅಧ್ಯಕ್ಷರಾದ ರೋಷಿನಿ ಮಹೇಶ್, ಸರ್ವಮಂಗಳ ರಮೇಶ್, ಇಂಪಾರಿತೇಶ್, ಪದ್ಮಜಾ ಎಂ ಶೆಟ್ಟಿ, ಲತಾ ಅನಿಲ್, ಇತರೆ ಪದಾಧಿಕಾರಿಗಳು ಉಪಸ್ಥಿತರಿದ್ದರು..

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend