ವಿದ್ಯಾರ್ಥಿಗಳ ಆರೋಗ್ಯಸಂರಕ್ಷಿಸುವ ಉದ್ದೇಶದಿಂದ
ರೋಟರಿ-ರೆಡ್ ಕ್ರಾಸ್ ಸಂಸ್ಥೆಗಳು ಶುದ್ಧ ಕುಡಿಯುವ
ನೀರಿನ ಘಟಕ ಸ್ಥಾಪಿಸಿವೆ :ಹೆಚ್.ಎಸ್.ಸುಂದರರಾಜ್
ಹಿರಿಯೂರು:
ತಾಲ್ಲೂಕಿನ ಬ್ಯಾಡರಹಳ್ಳಿ ಗ್ರಾಮದ ಶ್ರೀಪಾಥಲಿಂಗೇಶ್ವರ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರಿನ ಅವಶ್ಯಕತೆಯಿದ್ದು, ವಿದ್ಯಾರ್ಥಿಗಳ ಆರೋಗ್ಯ ಸಂರಕ್ಷಿಸುವ ಉದ್ದೇಶದಿಂದ ರೋಟರಿ ಹಾಗೂ ರೆಡ್ ಕ್ರಾಸ್ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಶುದ್ಧ ನೀರಿನ ಘಟಕವನ್ನು ಸ್ಥಾಪಿಸಲು ಮುಂದಾಗಿವೆ ಎಂಬುದಾಗಿ ರೆಡ್ ಕ್ರಾಸ್ ಛೇರ್ಮನ್ ಹೆಚ್.ಎಸ್.ಸುಂದರರಾಜ್ ಹೇಳಿದರು.
ತಾಲ್ಲೂಕಿನ ಬ್ಯಾಡರಹಳ್ಳಿ ಗ್ರಾಮದಲ್ಲಿನ ಶ್ರೀ ಪಾರ್ಥಲಿಂಗೇಶ್ವರ ಪ್ರೌಢಶಾಲೆಗೆ ಹಿರಿಯೂರು ರೆಡ್ ಕ್ರಾಸ್ ಹಾಗೂ ರೋಟರಿ ಸಂಸ್ಥೆ ವತಿಯಿಂದ ಕೊಡುಗೆಯಾಗಿ ನೀಡಲಾದ “ಶುದ್ಧ ಕುಡಿಯುವ ನೀರಿನ ಘಟಕ” ಕ್ಕೆ ಚಾಲನೆ ನೀಡಿ, ನಂತರ ಅವರು ಮಾತನಾಡಿದರು.
ರೋಟರಿ ಅಧ್ಯಕ್ಷರಾದ ಹೆಚ್.ಎಸ್. ಕಿರಣ್ ಅವರು ಮಾತನಾಡಿ, ಶಾಲೆಯ ವಿದ್ಯಾರ್ಥಿಗಳು ಬಿಸಿಯೂಟದ ಸಮಯದಲ್ಲಿ ಊಟದ ಜೊತೆಗೆ ಶುದ್ಧ ಕುಡಿಯುವ ನೀರು ಅವಶ್ಯಕತೆ ಇದ್ದು, ಮಕ್ಕಳಿಗೆ ಕುಡಿಯಲು ಶುದ್ಧನೀರು ಕೊಡುವ ಕೆಲಸವನ್ನು ನಮ್ಮ ರೋಟರಿ ಹಾಗೂ ರೆಡ್ ಕ್ರಾಸ್ ಸಂಸ್ಥೆಗಳ ವತಿಯಿಂದ ಮಾಡಲಾಗಿದೆ ಎಂಬುದಾಗಿ ಹೇಳಿದರು.
ರೋಟರಿ ಹಿರಿಯ ಸದಸ್ಯರಾದ ಹೆಚ್.ಎಂ.ಬಸವರಾಜ್ ಮಾತನಾಡಿ ಇಂದಿನ ವಿದ್ಯಾರ್ಥಿಗಳೇ ಭಾವಿ ಭವಿಷ್ಯದ ಪ್ರಜೆಗಳು ಆದ್ದರಿಂದ ಈ ವಿದ್ಯಾರ್ಥಿಗಳಿಗೆ ಉತ್ತಮ ಪೌಷ್ಠಿಕ ಸತ್ವಯುತ ಆಹಾರ, ಶುದ್ಧ ಕುಡಿಯುವ ನೀರು ಒದಗಿಸುವುದು ನಮ್ಮ ನಿಮ್ಮೆಲ್ಲರ ಜವಬ್ದಾರಿಯಾಗಿದೆ ಎಂದರಲ್ಲದೆ, ಈ ಮೂಲಕ ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ನಾವೆಲ್ಲಾ ಕೈಜೋಡಿಸಬೇಕಾಗಿದೆ ಎಂದರು.
ಹಿರಿಯಪತ್ರಕರ್ತರಾದಆಲೂರುಹನುಮಂತರಾಯಪ್ಪರವರುಮಾತನಾಡಿಗ್ರಾಮೀಣಪ್ರದೇಶದಲ್ಲಿ ಶಿಕ್ಷಣ ಸಂಸ್ಥೆಗಳನ್ನು ನಡೆಸುವುದು ತುಂಬಾ ಕಷ್ಟಕರ ಕೆಲಸವಾಗಿದ್ದು ನಿಮ್ಮ ಮುಖ್ಯಶಿಕ್ಷಕರು ಹಾಗೂ ನಿಮ್ಮೆಲ್ಲಾ ಶಿಕ್ಷಕ- ಶಿಕ್ಷಕಿಯರ ಪರಿಶ್ರಮದಿಂದಈಶಾಲೆ ನಡೆಯುತ್ತಿದೆ. ನೀವು ಸತತ ಪರಿಶ್ರಮದಿಂದ ಅಭ್ಯಾಸ ಮಾಡುವ ಮೂಲಕ ಹೆತ್ತ ತಂದೆ-ತಾಯಿಗಳಿಗೆ, ಓದಿದ ಶಾಲೆಗೆ ಕೀರ್ತಿ ತರಬೇಕು ಎಂಬುದಾಗಿ ಹೇಳಿದರು
ಶಾಲಾ ಮುಖ್ಯ ಶಿಕ್ಷಕರಾದ ಪ್ರಭಾಕರ್ ಮಾತನಾಡಿ, ರೋಟರಿ ಹಾಗೂ ರೆಡ್ ಕ್ರಾಸ್ ಸಂಸ್ಥೆಗಳು ಸದಾ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಜನಪರ ಕೆಲಸಗಳನ್ನು ಮಾಡುತ್ತಿವೆ. ಈ ನಿಟ್ಟಿನಲ್ಲಿ ನಮ್ಮ ಗ್ರಾಮೀಣ ಶಾಲೆಯ ವಿದ್ಯಾರ್ಥಿಗಳಿಗಾಗಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಅಳವಡಿಸಿದ್ದಕ್ಕೆ ನಮ್ಮ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂಬುದಾಗಿ ಹೇಳಿದರು.
ಈ ಕಾರ್ಯಕ್ರಮದಲ್ಲಿ ರೋಟರಿ ಅಧ್ಯಕ್ಷರಾದ ಹೆಚ್.ಎಸ್.ಕಿರಣ್ ಕುಮಾರ್, ಕಾರ್ಯದರ್ಶಿ ರಾಘವೇಂದ್ರಚಾರಿ, ಖಜಾಂಚಿ ಹೆಚ್.ಎಸ್.ಪ್ರಶಾಂತ್, ಕೆ.ಎಸ್. ಮಹಬಲೇಶ್ವರಶೆಟ್ಟಿ, ರೆಡ್ ಕ್ರಾಸ್ ಛೇರ್ಮನ್ ಹೆಚ್.ಎಸ್.ಸುಂದರರಾಜ್, ವೈಸ್ ಛೇರ್ಮನ್ ಬಿ.ಕೆ.ನಾಗಣ್ಣ, ಕಾರ್ಯದರ್ಶಿ ಎಂ.ಎಸ್. ರಾಘವೇಂದ್ರ, ಉಪಾಧ್ಯಕ್ಷರಾದ ಎ.ರಾಘವೇಂದ್ರ, ಖಜಾಂಚಿ ಸಣ್ಣಭೀಮಣ್ಣ, ರೆಡ್ ಕ್ರಾಸ್ ರಿಪೋರ್ಟರ್ ಗಳಾದ ಆಲೂರುಹನುಮಂತರಾಯಪ್ಪ, ಪಿ.ಆರ್.ಸತೀಶ್ ಬಾಬು, ಪರಮೇಶ್ವರ ಭಟ್, ಶಾಲಾ ಮುಖ್ಯಶಿಕ್ಷಕರಾದ ಪ್ರಭಾಕರ್, ಹಾಗೂ ವ್ಯವಸ್ಥಾಪಕ ಗೋಸಿಕೆರೆ ರಂಗನಾಥ್ ಸೇರಿದಂತೆ ಶಿಕ್ಷಕರುಗಳಾದ ಮೂಡ್ಲಪ್ಪ, ಭರತ್, ತಿಪ್ಪೇಸ್ವಾಮಿ, ಸುಣಗಾರ್, ಶಿಕ್ಷಕಿಯರುಗಳಾದ ತ್ರಿವೇಣಿ, ಪವಿತ್ರ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030