ನಗರಸಭೆಯ ಸ್ಥಾಯಿ ಸಮಿತಿ ನೂತನ ಅಧ್ಯಕ್ಷರಾಗಿ
ಆಯ್ಕೆಯಾಗಿರುವ ಶ್ರೀಮತಿ ಎನ್.ಮಮತ ರವರಿಗೆ
ತಾಲ್ಲೂಕು ಘಟಕದಿಂದ ಗೌರವಯುತವಾದ ಸನ್ಮಾನ
ಹಿರಿಯೂರು:
ನಗರಸಭೆಯ ಸ್ಥಾಯಿ ಸಮಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಶ್ರೀಮತಿ ಎನ್.ಮಮತರವರನ್ನು ರಾಷ್ಟ್ರೀಯ ಮಾನವ ಹಕ್ಕುಗಳ ವೇದಿಕೆಯ ಹಿರಿಯೂರು ತಾಲ್ಲೂಕು ಘಟಕದ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸಮಿತಿಯ ರಾಜ್ಯ ಘಟಕದ ಕಾರ್ಯಾಧ್ಯಕ್ಷರಾದ ವಿ.ಎಂ.ನಾಗೇಶ್ ರವರು ಮಾತನಾಡಿ, ಯಾರೇ ಆಗಲಿ ನಿಸ್ವಾರ್ಥದಿಂದ ಯಾವುದೇ ಫಲಾಪೇಕ್ಷೆಯಿಲ್ಲದೆ ಜನರಸೇವೆ ಮಾಡಿದರೆ ಸ್ಥಾನಮಾನಗಳು ತಾವಾಗಿಯೇ ಹುಡುಕಿಕೊಂಡು ಬರುತ್ತವೆ ಎಂಬುದಕ್ಕೆ ಶ್ರೀಮತಿ ಎನ್.ಮಮತರವರು ಸ್ಪಷ್ಟ ಉದಾಹರಣೆಯಾಗಿದ್ದಾರೆ ಎಂಬುದಾಗಿ ಹೇಳಿದರು.
ಖ್ಯಾತ ಸಾಹಿತಿ ಹಾಗೂ ಕಾದಂಬರಿಕಾರರಾದ ಡಿ.ಸಿ.ಪಾಣಿರವರು ಮಾತನಾಡಿ, ರಾಜಕೀಯವಾಗಿ ನೀವು ಮತ್ತಷ್ಟು ಬೆಳೆಯಲು ನಮ್ಮ ನೈತಿಕ ಬೆಂಬಲ ನಿಮಗೆ ಸದಾ ಇರುತ್ತದೆ ಎಂಬುದಾಗಿ ಅವರು ಹೇಳಿದರು. ಸಮಿತಿಯ ತಾಲ್ಲೂಕು ಘಟಕದ ಅಧ್ಯಕ್ಷರಾಗಿರುವ ಸಿ. ದೀಪಕ್ ರವರು ನೂತನ ಅಧ್ಯಕ್ಷರಿಗೆ ಶುಭ ಕೋರಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀಮತಿ ಎನ್.ಮಮತಾರವರು ಸ್ವಾರ್ಥರಹಿತವಾಗಿ ಯಾವುದೇ ಲೋಪಬಾರದಂತೆ ನನ್ನ ಅವಧಿಯಲ್ಲಿ ನಗರದ ಜನರ ಸೇವೆ ಮಾಡುತ್ತೇನೆ, ಇದಕ್ಕೆ ನಿಮ್ಮ ಸಹಕಾರವಿರಲಿ ಎಂಬುದಾಗಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಮಿತಿಯ ಪದಾಧಿಕಾರಿಗಳಾದ ಕಾತ್ರಿಕೇನಹಳ್ಳಿ ಮಂಜುನಾಥ್, ಪ್ರಭು, ಸುಬ್ರಮಣಿ, ರಮ್ಯ, ಕುಮರೇಶ್ ಹಾಗೂ ಗ್ರಾಮೀಣ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕರಾದ ಎಂ.ಟಿ. ಬಿ.ನಾಯ್ಕ್ ರವರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030