ಸುತ್ತಮುತ್ತಲಿನ ಪರಿಸರದಲ್ಲಿ ಮರಗಿಡಗಳ ನೆಡುವುದರಿಂದ
ಉತ್ತಮ ಗಾಳಿ, ಬೆಳಕು ಸಿಗುತ್ತದೆ : ಶಿವರಂಜಿನಿಯಾದವ್
ಹಿರಿಯೂರು :
ಸುತ್ತಮುತ್ತಲಿನ ಪರಿಸರದಲ್ಲಿ ಮರಗಿಡಗಳನ್ನು ನೆಡುವುದರಿಂದ ಉತ್ತಮವಾದ ಗಾಳಿ, ಬೆಳಕು ಸಿಗುತ್ತದೆ, ಮರಗಿಡಗಳು ಇದ್ದಷ್ಟು ಮಳೆ ಚೆನ್ನಾಗಿ ಬರುತ್ತದೆ, ಬಿಸಿಲಿನ ತಾಪವನ್ನು ತಡೆದು ತಣ್ಣಗೆ ಇರುವಂತೆ ಮಾಡುತ್ತದೆ, ಆದ್ದರಿಂದ ನಮ್ಮ ಸುತ್ತಮುತ್ತಲಿನ ಖಾಲಿ ಜಾಗದಲ್ಲಿ ಗಿಡ ಮರಗಳನ್ನ ಯಥೇಚ್ಛವಾಗಿ ಬೆಳೆಸಬೇಕು ಎಂಬುದಾಗಿ ನಗರಸಭೆ ಮಾಜಿ ಅಧ್ಯಕ್ಷೆ ಶ್ರೀಮತಿ ಶಿವರಂಜಿನಿಯಾದವ್ ಹೇಳಿದರು.
ಹಿರಿಯೂರು ನಗರಸಭೆ ವ್ಯಾಪ್ತಿಯಲ್ಲಿ ಬರುವಂತಹ ಮೂರನೇ ವಾರ್ಡಿನಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಮೂರನೇ ವಾರ್ಡಿನಲ್ಲಿ ಗಿಡಮರಗಳನ್ನು ನಡೆಸಿ, ಸಾರ್ವಜನಿಕ ಬಂಧುಗಳಿಗೆ ಪರಿಸರ ಸಂರಕ್ಷಣೆ ಮಾಡುವಂತೆ ಸಲಹೆ ಸೂಚನೆಗಳನ್ನು ನೀಡಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ನಗರಸಭೆಯ ಸಿಬ್ಬಂದಿ ವರ್ಗದವರು ಮೋಹನ್ ಮತ್ತು ಅಜಯ್ ದಫೇದಾರ್ ರಾದ ಈರಗ್ಯಾತಪ್ಪ ಮುತ್ತು ಪೌರಕಾರ್ಮಿಕರು 3 ನೇ ವಾರ್ಡನ ನಾಗರೀಕರು, ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದು, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030